More

    ಸದಾಶಿವ ವರದಿ ಜಾರಿಗೊಳಿಸಲು ಮನವಿ

    ಹೂವಿನಹಿಪ್ಪರಗಿ: ನ್ಯಾಯಮೂರ್ತಿ ಎ. ಜೆ. ಸದಾಶಿವ ಆಯೋಗದ ವರದಿ ಜಾರಿಗೊಳಿಸಬೇಕೆಂದು ಹೂವಿನಹಿಪ್ಪರಗಿ ಗ್ರಾಮದ ಮಾದಿಗ ಸಮಾಜದವರು ಉಪತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.
    ಅಂದಾಜು 20 ವರ್ಷಗಳಿಂದ ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವ ಸಂಬಂಧವಾಗಿ ಅನೇಕ ಸಲ ಮನವಿ ಪತ್ರ ಸಲ್ಲಿಸುತ್ತ ಮತ್ತು ಹೋರಾಟಗಳನ್ನು ಮಾಡುತ್ತ ಬಂದಿದ್ದು, ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿಗೊಳಿಸುವಂತಾಗಬೇಕು. ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿ ಕಲ್ಪಿಸಲು ಆಯಾ ರಾಜ್ಯಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದ್ದು, ಅದರಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ವರದಿ ನೀಡಬೇಕೆಂದು ಕೇಳಿಕೊಳ್ಳುತ್ತೇವೆ. ಬಿಜೆಪಿ ಸರ್ಕಾರ ಇದ್ದಾಗಲೇ ಸದಾಶಿವ ಆಯೋಗ ರಚಿಸಲಾಗಿದೆ. ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಈ ವಿಷಯವಾಗಿ ಚರ್ಚಿಸಿ ಕೇಂದ್ರಕ್ಕೆ ಸೂಕ್ತ ವರದಿ ಕಳುಹಿಸಿಕೊಟ್ಟು, ಆಯೋಗವು ಜಾರಿಗೊಳಿಸಬೇಕೆಂದು ಮಾದಿಗ ಸಮಾಜದ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.
    ವೆಂಕಟೇಶ ದೊಡಮನಿ, ರಾಜು ಪೂಜಾರಿ, ಪ್ರಕಾಶ ದೊಡಮನಿ, ಉಮೇಶ ನಡುವಿನಮನಿ, ಮಂಜುನಾಥ ಬುದ್ನಿ, ಮುತ್ತು ಮಾದರ, ಶಶಿಧರ ಗಿರಿನಿವಾಸ, ಸಿದ್ದು ಹರಿಜನ, ಪ್ರಭು ಪಡಸಾಲಿ, ಮುತ್ತು ಮಾದರ, ಸುಭಾಷ ಮಾದರ, ಬಾಬು ಮಾದರ, ಶಿವರಾಜ ದೊಡಮನಿ, ಕುಮಾರ ಸಂಕನಾಳ ಮತ್ತಿತರರಿದ್ದರು.

    ಸದಾಶಿವ ವರದಿ ಜಾರಿಗೊಳಿಸಲು ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts