More

    ಹೋರಾಟದ ಫಲವಾಗಿ ಕೆರೆಗಳು ಭರ್ತಿ

    ಹೂವಿನಹಿಪ್ಪರಗಿ: ಬೇಸಿಗೆ ಸಂದರ್ಭದಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲ ಕಲ್ಪಿಸಲು ಜಿಲ್ಲೆಯ ಎಲ್ಲ ಕೆರೆಗಳನ್ನು ಭರ್ತಿ ಮಾಡುವುದಕ್ಕಾಗಿ ಪ್ರತಿ ವರ್ಷ ಹೋರಾಟ ಮಾಡುವಂತಾಗಬಾರದು ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
    ಸಮೀಪದ ರೆಬಿನಾಳದಲ್ಲಿ ನೀರು ತುಂಬಿದ ಕೆರೆಗೆ ಗಂಗಾ ಪೂಜೆ ನೆರವೇರಿಸಿ ಅವರು ಮಾತನಾಡಿದರು.
    ಅಖಂಡ ಕರ್ನಾಟಕ ರೈತ ಸಂಘದ ಹೋರಾಟದ ಲವಾಗಿ ಬಹುತೇಕ ಕೆರೆಗಳು ಭರ್ತಿಯಾಗಿವೆ. ನೀರಿನ ಅಗತ್ಯತೆ ಅರಿತು ನೀರಾವರಿ ಇಲಾಖೆ ತಕ್ಷಣ ನೀರು ಹರಿಸಿ ಕೆರೆ ಹಾಗೂ ಬಾಂದಾರಗಳನ್ನು ತುಂಬಿಸಿ ಜನ,ಜನವಾರುಗಳಿಗೆ ಕುಡಿಯಲು ನೀರು ಒದಗಿಸಬೇಕೆಂದು ಹೇಳಿದರು.
    ಇಂಗಳೇಶ್ವರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಹಾಗೂ ಬಸವನಬಾಗೇವಾಡಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಒಂದು ವರ್ಷದಿಂದ ರೈತ ಸಂಘದವರು ಹೋರಾಟ ಮಾಡಿದ್ದಾರೆ. ಕರೊನಾ ಹಾವಳಿ ಮಧ್ಯದಲ್ಲೂ ತಮ್ಮ ಜೀವನದ ಕುರಿತು ಚಿಂತಸದೆ ಹೋರಾಡಿದ್ದಾರೆ. ಅವರ ಹೋರಾಟದ ಲವಾಗಿಯೇ ಇಂದು ಜಿಲ್ಲೆಯ ಕೆರೆಗಳು ಭರ್ತಿಯಾಗಿವೆ. ಇದು ರೈತ ಸಂಘದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಉಭಯ ಶ್ರೀಗಳು ಹೇಳಿದರು.
    ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ತಾಲೂಕು ಅಧ್ಯಕ್ಷ ಸಿದ್ರಾಮ ಅಂಗಡಗೇರಿ, ಚನ್ನಬಸಪ್ಪ ಸಿಂಧೂರ, ಗುರಲಿಂಗಪ್ಪ ಪಡಸಲಗಿ, ಸಂಗಪ್ಪ ಪಡಸಲಗಿ, ಬಸಗೂಂಡಪ್ಪ ಶಿರಸಾವಳಗಿ, ರಮೇಶಗೌಡ ಬಿರಾದಾರ, ಅಣ್ಣಾರಾಯಗೌಡ ಬಿರಾದಾರ, ಮಲ್ಲಪ್ಪ ಮಾಡ್ಯಾಳ, ದಾವಲಸಾ ನದಾಫ್ ಮತ್ತಿತರರಿದ್ದರು.

    ಹೋರಾಟದ ಫಲವಾಗಿ ಕೆರೆಗಳು ಭರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts