More

    ಹೂವಿನಹಿಪ್ಪರಗಿಯಲ್ಲಿ ಕಟ್ಟುನಿಟ್ಟಿನ ಕ್ರಮ

    ಹೂವಿನಹಿಪ್ಪರಗಿ: ಲಾಕ್‌ಡೌನ್‌ಗೆ ಹೂವಿನಹಿಪ್ಪರಗಿ ಸೇರಿ ಕೆಲ ಗ್ರಾಮಗಳಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಗ್ರಾಪಂ ನೇತೃತ್ವದಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ವ್ಯವಸ್ಥೆ ಕಲ್ಪಿಸುವ ಮೂಲಕ ಜನತೆ ವಿನಾಕಾರಣ ತಿರುಗಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
    ಪಡಿತರ ಪಡೆಯಲು ಹೂವಿನಹಿಪ್ಪರಗಿ ಹಾಗೂ ಅಗಸಬಾಳ ಜನತೆ ನ್ಯಾಯಬೆಲೆ ಅಂಗಡಿ ಮುಂದೆ ನಾ ಮುಂದು, ನೀ ಮುಂದು ಎಂದು ಮುಗಿಬಿದ್ದಿದ್ದನ್ನು ಗಮನಿಸಿದ ಅಧಿಕಾರಿಗಳು, ಪಡಿತರ ಪಡೆಯುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಶನಿವಾರ ಗುರುತು ಹಾಕಿದ್ದಾರೆ. ಪ್ರತಿಯೊಬ್ಬರೂ ಮಾಸ್ಕ್ ಇಲ್ಲವೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಪಡಿತರ ಪಡೆಯಬೇಕು. ಮಾಸ್ಕ್ ಇಲ್ಲದಿದ್ದರೆ ಪಡಿತರ ಕೊಡುವುದಿಲ್ಲ ಎಂದು ಹೊರಠಾಣೆ ಪೊಲೀಸ್ ಸಿಬ್ಬಂದಿ ಪಡಿತರದಾರರಿಗೆ ಸೂಚಿಸಿದ್ದಾರೆ.
    ಗ್ರಾಪಂ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿದಿನ ಧ್ವನಿವರ್ಧಕ ಮೂಲಕ ಆರೋಗ್ಯ ಜಾಗೃತಿ ಮೂಡಿಸುತ್ತಿದ್ದಾರೆ. ಪೊಲೀಸ್ ಸಿಬ್ಬಂದಿ ಮನೆ ಮಕ್ಕಳನ್ನು ಬಿಟ್ಟು ಹಗಲು ರಾತ್ರಿ ಎನ್ನದೆ ಜೀವದ ಹಂಗು ತೊರೆದು ಜನಸೇವೆಯಲ್ಲಿ ನಿರತರಾಗಿದ್ದಾರೆ.
    ಲಾಕ್‌ಡೌನ್ ಆದೇಶವಿದ್ದರೂ ಕೆಲ ಯುವಕರು ಸುಖಾಸುಮ್ಮನೆ ತಿರುಗಾಡುತ್ತಿದ್ದು, ಅಂತವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts