More

    ವೈರಸ್ ಹರಡದಂತೆ ಮುಂಜಾಗ್ರತೆ ಕ್ರಮ ಕೆಗೊಳ್ಳಿ

    ಹೂವಿನಹಿಪ್ಪರಗಿ: ಕರೊನಾ ವೈರಸ್ ಹರಡದಂತೆ ಸರ್ಕಾರ ನೀಡಿದ ಆದೇಶ ಮತ್ತು ಸೂಚನೆಗಳನ್ನು ಕುದರಿಸಾಲವಾಡಗಿ ಗ್ರಾಪಂ ವ್ಯಾಪ್ತಿಯ ಜನತೆ ಕಟ್ಟುನಿಟ್ಟಾಗಿ ಪಾಲಿಸಿದ್ದು, ಲಾಕ್‌ಡೌನ್ ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಿ.ಎಸ್. ಬಡಿಗೇರ ಹೇಳಿದರು. ಸಮೀಪದ ಕುದರಿಸಾಲವಾಡಗಿ ಗ್ರಾಮದ ಗ್ರಾಪಂ ಕಾರ್ಯಾಲಯದಲ್ಲಿ ಭಾನುವಾರ ನಡೆದ ಗ್ರಾಪಂ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಲಾಕ್‌ಡೌನ್ ಸಡಿಲಿಕೆ ಸಂದರ್ಭ ಜನರು ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸಬಾರದು. ಕೋವಿಡ್-19 ವೈರಸ್ ಹರಡದಂತೆ ಎಲರೂ ಮುಂಜಾಗ್ರತೆ ಕೈಗೊಳ್ಳುವ ಮೂಲಕ ಆರೋಗ್ಯ, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಆಡಳಿತಕ್ಕೆ ಸಹಕಾರ ನೀಡಬೇಕು ಎಂದರು.

    ಗ್ರಾಮದಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಕಂಡು ಬಂದ ರಂಗರಾವ ಮಹಾರಾಜ ಮಠದ ಪ್ರದೇಶದಲ್ಲಿ ಸ್ಯಾನಿಟೈಸರ್ ಮಾಡಲು, ಪ್ರತಿ ಮನೆಗೆ ಭೇಟಿ, ಆರೋಗ್ಯ ಶಿಕ್ಷಣ ಹಾಗೂ ಕರೊನಾ ರೋಗವು ಎಲ್ಲೂ ಹರಡದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವ ಕುರಿತು ಚರ್ಚಿಸಲಾಯಿತು.

    ನಂತರ ಎಲ್ಲ ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯರು ಗ್ರಾಮದಲ್ಲಿ ಪಾಸಿಟಿವ್ ಪ್ರಕರಣ ಬಂದ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಜನರಿಗೆ ಪರಸ್ಪರ ಅಂತರ ಕಾಪಾಡಿಕೊಳ್ಳಬೇಕೆಂದು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಬೇಕೆಂದು ತಿಳಿಹೇಳಿದರು.

    ತಾಪಂ ಸದಸ್ಯ ಝಾಕೀರ್ ಶಿವಣಗಿ, ಪರಶುರಾಮ ಲಗಳಿ, ಆರೋಗ್ಯ ಇಲಾಖೆ ಸಿಬ್ಬಂದಿ ಮಲ್ಲಿಕಾರ್ಜನ ಬಾಗೇವಾಡಿ, ಕಂದಾಯ ಇಲಾಖೆ ಅಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿ ಮತ್ತಿತರರಿದ್ದರು.

    ವೈರಸ್ ಹರಡದಂತೆ ಮುಂಜಾಗ್ರತೆ ಕ್ರಮ ಕೆಗೊಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts