More

    ಶಾಲಾ ಕಟ್ಟಡ ಉದ್ಘಾಟನೆಗಿಲ್ಲ ಆಹ್ವಾನ, ಶಾಸಕ ಪಿಟಿಪಿ ವಿರುದ್ಧ ಇಟ್ಟಗಿ ಗ್ರಾಪಂ ಸದಸ್ಯರ ಪ್ರತಿಭಟನೆ

    ಹೂವಿನಹಡಗಲಿ: ತಾಲೂಕಿನ ಇಟ್ಟಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ, ಸದಸ್ಯರು ಮತ್ತು ಬಿಜೆಪಿ ಕಾರ್ಯಕರ್ತರು ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ವಿರುದ್ಧ ಘೋಷಣೆಗಳನ್ನು ಕೂಗುತ್ತ, ಕಪ್ಪುಪಟ್ಟಿ ಪ್ರದರ್ಶಿಸಿ ಬುಧವಾರ ಪ್ರತಿಭಟನೆ ನಡೆಸಿದರು.

    ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡಗಳ ಉದ್ಘಾಟನೆಗೆ ಬುಧವಾರ ಬೈಕ್ ರ‌್ಯಾಲಿಯೊಂದಿಗೆ ಆಗಮಿಸಿದ್ದ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರು, ಕಾರ್ಯಕ್ರಮಕ್ಕೆ ಸ್ಥಳೀಯರನ್ನು ಆಹ್ವಾನಿಸಿಲ್ಲ ಎಂದು ಆರೋಪಿಸಿದ ಗ್ರಾಪಂ ಸದಸ್ಯರು, ಶಾಸಕರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

    ಪ್ರತಿಭಟನಾಕಾರರು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನಾ ಮೆರವಣಿಗೆ ಮೂಲಕ ಕಾರ್ಯಕ್ರಮ ನಡೆಯುತ್ತಿದ್ದ ಶಾಲಾ ಆವರಣ ಪ್ರವೇಶಿಸಿ, ಸರ್ಕಾರಿ ಶಾಲಾ ಕಟ್ಟಡ ಉದ್ಘಾಟನೆಗೆ ಸ್ಥಳಿಯರನ್ನು ಕಡೆಗಣಿಸಿ ಮತ್ತು ಇತರ ನಾಯಕರನ್ನು ಆಹ್ವಾನಿಸದೆ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ ಎಂದು ಶಾಸಕ ಪಿಟಿಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಭಟನೆ ನುಡವೆಯೇ ಕೊಠಡಿಗಳ ಉದ್ಘಾಟನೆ ಹಾಗೂ ಅಧಿಕಾರಿಗಳಿಗೆ ಸನ್ಮಾನವೂ ಸಾಂಕೇತಿಕವಾಗಿ ನಡೆಯಿತು. ಗ್ರಾಪಂ ಅಧ್ಯಕ್ಷೆ ಸಿ.ಪುಷ್ಪಾವತಿ ಮಹಾಬಲೇಶ್, ಉಪಾಧ್ಯಕ್ಷ ಎ.ಮದ್ದಾನ್ ಸ್ವಾಮಿ, ಸದಸ್ಯರಾದ ಶಿವಮೂರ್ತಿ, ಮಂಜುನಾಥ, ಲೋಕೇಶ್, ಬಿಜೆಪಿ ತಾಲೂಕು ಮಂಡಲ ಉಪಾಧ್ಯಕ್ಷ ರಾಮನಗೌಡ, ಬಿಜೆಪಿ ಮುಖಂಡರಾದ ಕೆ.ಸತೀಶ್, ತರಕಾರಿ ನಾಗರಾಜ, ದೊಡ್ಡಮನಿ ಶಿವಲಿಂಗ, ಪ್ರಭು ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts