More

    ಹೂವಿನಹಡಗಲಿಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಲು ಒತ್ತಾಯ: ಗ್ರೇಡ್ 2 ತಹಸೀಲ್ದಾರ್‌ಗೆ ಪ್ರಗತಿಪರ ಸಂಘಟನೆಗಳ ಮನವಿ

    ಹೂವಿನಹಡಗಲಿ: ತಾಲೂಕಿಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡುವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಮುಖಂಡರು ಗುರುವಾರ ಗ್ರೇಡ್ 2 ತಹಸೀಲ್ದಾರ್ ಪ್ರಭಾಕರ್ ಗೌಡಗೆ ಮನವಿ ಸಲ್ಲಿಸಿದರು.

    ಒಕ್ಕೂಟದ ಮುಖಂಡ ಪ್ರೊ.ಎಸ್.ಎಸ್.ಪಾಟೀಲ್ ಮಾತನಾಡಿ, ಜಿಲ್ಲೆಯ ಪಶ್ಚಿಮ ತಾಲೂಕುಗಳಾದ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಕೊಟ್ಟೂರು ವ್ಯಾಪ್ತಿಯಲ್ಲಿ ಶೇ.40 ಜನಸಂಖ್ಯೆ ಇದೆ. ತಾಲೂಕಿನ ಜನರು ಜಿಲ್ಲಾಸ್ಪತ್ರೆ ತಲುಪಲು ಪರದಾಡುವ ಪರಿಸ್ಥಿತಿ ಇದೆ. ಈ ತಾಲೂಕುಗಳು ಅತ್ಯಂತ ಹಿಂದುಳಿದಿದ್ದು, ಬಹುತೇಕರು ಕೃಷಿ ಮತ್ತು ಕೂಲಿ ಅವಲಂಬಿಸಿದ್ದಾರೆ. 50 ವರ್ಷಗಳಿಂದ ಕನಿಷ್ಠ ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಂಜುಂಡಪ್ಪ ಉನ್ನತಾಧಿಕಾರಿಗಳ ಸಮಿತಿ ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳು ವೈದ್ಯಕೀಯ ಸೌಲಭ್ಯಗಳಿಂದ ತೀರಾ ಹಿಂದುಳಿವೆ. ಈ ಭಾಗಕ್ಕೆ ವೈದ್ಯಕೀಯ ಸೌಲಭ್ಯ ಕಲ್ಪಿಸಲು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. 2013ರಲ್ಲಿ 371 (ಜೆ) ಅನುಷ್ಠಾನದ ಸಂಪುಟ ಉಪಸಮಿತಿಗೆ ತಾಲೂಕಿನ ಪ್ರಗತಿಪರ ಸಂಘಟನೆಗಳು ತಾಲೂಕಿಗೆ ಒಂದು ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕೆಂದು ಒತ್ತಾಯಿಸಲಾಗಿತ್ತು. ಈ ಕುರಿತು ಸಿಎಂ ಕೂಡಲೇ ಕ್ರಮಕೈಗೊಂಡು ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

    ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎ.ಕೊಟ್ರಗೌಡ, ಕಸಾಪ ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ, ಕರ್ನಾಟಕ ಪ್ರೆಸ್‌ಕ್ಲಬ್ ತಾಲೂಕು ಅಧ್ಯಕ್ಷ ಕೆ.ಅಯ್ಯನಗೌಡ, ಮಲ್ಲಿಗೆ ಯೋಗಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಕೊಟ್ರೇಶ, ಆಯುಷ್ ಫೆಡರೇಷನ್ ಅಧ್ಯಕ್ಷ ಡಾ. ಪ್ರಕಾಶ್ ಅಟವಾಳಗಿ, ಡಾ.ಉಮೇಶ, ತಾಲೂಕು ಔಷಧ ವ್ಯಾಪಾರಿ ಸಂಘದ ಅಧ್ಯಕ್ಷ ಕೆ.ಶಶಿಧರ, ಮುಖಂಡರಾದ ಬಿ.ಎಂ.ಮಹೇಶ್ವರಯ್ಯ, ಎಂ.ಚಿದಾನಂದ, ನೌಕರರ ಸಂಘದ ವಿ.ಬಿ.ಜಗದೀಶ, ಪುಷ್ಪಾ, ರತ್ನಾಕಾರ, ಮಂಜುನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts