More

    ಹಗಲಿನಲ್ಲಿ ರೈತರ ಹೊಲಗಳಿಗೆ ವಿದ್ಯುತ್ ಸರಬರಾಜು ಮಾಡಲು ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಆಗ್ರಹ

    ಹೂವಿನಹಡಗಲಿ: ತಾಲೂಕಿನ ಉತ್ತಂಗಿ ಹಾಗೂ ಸುತ್ತಲಿನ ಗ್ರಾಮಗಳಿಗೆ ರಾತ್ರಿಯ ಬದಲು ಹಗಲಿನಲ್ಲಿ ವಿದ್ಯುತ್ ಸರಬರಾಜು ಮಾಡುವಂತೆ ರಾಜ್ಯ ಈರುಳ್ಳಿ ಬೆಳೆಗಾರರ ಸಂಘ ಒತ್ತಾಯಿಸಿ ಇಟ್ಟಗಿ ಗ್ರಾಮದಲ್ಲಿ ಬುಧವಾರ ಜೆಸ್ಕಾಂ ಅಧಿಕಾರಿ ಎಸ್.ಆನಂದ್‌ಗೆ ಮನವಿ ಸಲ್ಲಿಸಿತು.

    ರಾಜ್ಯ ಈರುಳ್ಳಿ ಬೆಳೆಗಾರ ಸಂಘದ ಅಧ್ಯಕ್ಷ ಎನ್.ಎಂ.ಸಿದ್ದೇಶ್ ಮಾತನಾಡಿ, ಉತ್ತಂಗಿ ಮತ್ತು ಸುತ್ತಕಿನ ಗ್ರಾಮಗಳಲ್ಲಿನ ರೈತರ ಹೊಲಗಳಲ್ಲಿಗೆ ನಿತ್ಯ ಬೆಳಗ್ಗೆ 4 ಗಂಟೆಗೆ ವಿದ್ಯುತ್ ಸರಬರಾಜು ಮಾಡುತ್ತಿದ್ದು ಇದರಿಂದ ರೈತರಿಗೆ ಬಹಳ ತೊಂದರೆಯಾಗುತ್ತಿದೆ. ಚಳಿಗಾಲ ಹಾಗೂ ಮಳೆಗಾಲದ ಸಂದರ್ಭದಲ್ಲಿ ರೈತರು ಬೆಳಗ್ಗೆ 4 ಗಂಟೆ ತಮ್ಮ ಹೊಲಗಳಿಗೆ ತೆರಳುವ ಸಂದರ್ಭದಲ್ಲಿ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದ್ದು ಇದರಿಂದ ಭಯಗೊಂಡ ರೈತರು ತಮ್ಮ ಹೊಲಗಳಲ್ಲಿನ ಪೈರುಗಳಿಗೆ ನೀರು ಹಾಯಿಸಲು ತೆರಳದಂತಾಗಿ ಪೈರುಗಳೆಲ್ಲ ಒಣಗಿಹೋಗುತ್ತಿವೆ. ಈ ನಿಟ್ಟಿನಲ್ಲಿ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸರಬರಾಜು ಮಾಡುವ ಸಮಯವನ್ನು ಬೆಳಗ್ಗೆ 6 ಗಂಟೆಗೆ ಬದಲಾಯಿಸಿ ವಿದ್ಯುತ್ ಸರಬರಾಜು ಮಾಡಿದಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದರು.

    ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಖಜಾಂಚಿ ಮೂಲಿಮನಿ ಶರಣಪ್ಪ, ಕಾರ್ಯದರ್ಶಿ ಎಚ್.ಭದ್ರಗೌಡ, ಗ್ರಾಪಂ ಸದಸ್ಯ ಎಚ್.ಎಂ.ಮಂಜಯ್ಯ, ರೈತರಾದ ಕೆ.ಕೊಟ್ರೇಶ್, ಕೆ.ತಾತಪ್ಪ, ಶಿವಾರೆಡ್ಡಿ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts