ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಗಂಡ; ಎನ್​ಜಿಒನಿಂದಲೂ ಉಪಟಳ ಆರೋಪ

Salman
Published on

ಬೆಂಗಳೂರು: ಪತಿಯಿಂದ ಪತ್ನಿಗೆ ಕಿರುಕುಳ ಆಗಿರುವ ಪ್ರಕರಣಗಳು ತೀರಾ ಸಾಮಾನ್ಯ. ಆದರೆ ಇಲ್ಲಿ ಪತ್ನಿಯಿಂದಲೇ ಪತಿ ಕಿರುಕುಳ ಅನುಭವಿಸಿದ್ದು, ಅದನ್ನು ತಾಳಲಾರದೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ಪಾದರಾಯನಪುರದಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರಿನ ರಾಯಪುರ ನಿವಾಸಿ ಮಹಮದ್ ಸಲ್ಮಾನ್​ ಖಾತ್ ಮೃತಪಟ್ಟವರು. ಸಲ್ಮಾನ್ ಕಳೆದೆರಡು ವರ್ಷಗಳ ಹಿಂದೆ ರೊಹಿನಾಜ್ ಎಂಬಾಕೆಯನ್ನು ಮದುವೆಯಾಗಿದ್ದು, ನಂತರ ಇಬ್ಬರ ಮಧ್ಯೆ ವಿರಸ ಮೂಡಿತ್ತು. ಹೆರಿಗೆಗೆಂದು ತಾಯಿ ಮನೆಗೆ ಹೋಗಿದ್ದ ಆಕೆ ಬರಲು ನಿರಾಕರಿಸುತ್ತಿದ್ದಳು.

ಪತಿ ಮದ್ಯವ್ಯಸನಿಯಾಗಿದ್ದು ತಾನು ಆತನ ಮನಗೆ ಹೋಗುವುದಿಲ್ಲ ಎಂದು ಆಕೆ ಎರಿಕ್ ಹ್ಯೂಮನ್ ಆರ್ಗನೈಸೇಷನ್ ಎಂಬ ಎನ್​ಜಿಒಗೆ ದೂರು ನೀಡಿದ್ದಳು. ಮನೆಗೆ ಬರಬೇಕಿದ್ದರೆ 20 ಲಕ್ಷ ರೂಪಾಯಿ ಬಾಂಡ್ ಬರೆದುಕೊಡಬೇಕು ಎಂದು ಷರತ್ತು ವಿಧಿಸಿದ್ದಲ್ಲದೆ, ತಪ್ಪಿದರೆ ವಿಚ್ಛೇದನ ನೀಡುವಂತೆ ರೊಹಿನಾಜ್​ ಆಗ್ರಹಿಸಿದ್ದಳು ಎನ್ನಲಾಗಿದೆ. ಜತೆಗೆ ಎನ್​ಜಿಒನವರು ಕೂಡ 20 ಲಕ್ಷ ರೂ. ಬಾಂಡ್ ಬರೆದುಕೊಡುವಂತೆ ಪದೇಪದೆ ಕರೆ ಮಾಡುತ್ತಿದ್ದರು. ಹೀಗಾಗಿ ಸಲ್ಮಾನ್ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಜಗಜೀವನ್​ರಾಮ್​ ನಗರ​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net