More

    ತಮಿಳುನಾಡು ಬೇಟೆಗಾರರು ಕರ್ನಾಟಕದ ಅರಣ್ಯ ಸಿಬ್ಬಂದಿ ಮಧ್ಯೆ ಗುಂಡಿನ ಚಕಮಕಿ; ಸತ್ತವನ ಹಿನ್ನೆಲೆ ಏನು?

    ಚಾಮರಾಜನಗರ: ಕರ್ನಾಟಕ ಅರಣ್ಯ ಇಲಾಖೆಯವರು ಹಾಗೂ ತಮಿಳುನಾಡು ಬೇಟೆಗಾರರ ನಡುವೆ ನಡೆದಿದ್ದ ಗುಂಡಿನ ಚಕಮಕಿ ಪ್ರಕರಣ ನಿನ್ನೆಯಷ್ಟೇ ಬೆಳಕಿಗೆ ಬಂದಿದ್ದಲ್ಲದೆ, ತಮಿಳುನಾಡಿನ ಒಬ್ಬನ ಶವ ಕೂಡ ಪತ್ತೆಯಾಗಿತ್ತು. ಇದೀಗ ಆತನಿಗೆ ಸಂಬಂಧಿತ ಮಾಹಿತಿ ಬಹಿರಂಗಗೊಂಡಿದೆ.

    ಕರ್ನಾಟಕ-ತಮಿಳುನಾಡು ಗಡಿಭಾಗದ ಕಾವೇರಿ ವನ್ಯಜೀವಿ ವಿಭಾಗದ ಪಾಲಾರ್ ಅರಣ್ಯ ವಲಯದಲ್ಲಿ ಈ ಘಟನೆ ನಡೆದಿದೆ. ಮೂರು ದಿನಗಳ ಹಿಂದೆ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದ್ದು, ನಿನ್ನೆ ಶವವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಮಾತ್ರವಲ್ಲ ತಮಿಳುನಾಡಿನ ಈ ಬೇಟೆಗಾರ ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿಯ ಗುಂಡಿಗೆ ಬಲಿಯಾಗಿದ್ದ ಎನ್ನಲಾಗಿತ್ತು.

    ಈ ಕುರಿತು ಸಚಿವ ವಿ.ಸೋಮಣ್ಣ ಇಂದು ಪ್ರತಿಕ್ರಿಯಿಸಿದ್ದು, ತಮಿಳುನಾಡಿನ ಈ ವ್ಯಕ್ತಿ ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿಯ ಗುಂಡಿಗೆ ಬಲಿಯಾಗಿದ್ದ ಎಂಬುದನ್ನು ನಿರಾಕರಿಸಿದ್ದಾರೆ. ಸಿಕ್ಕ ಶವವನ್ನು ತಮಿಳುನಾಡಿನವರು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದು, ವರದಿ ಬಂದ ಬಳಿಕ ಖಚಿತ ಮಾಹಿತಿ ತಿಳಿಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

    ಇದನ್ನೂ ಓದಿ: ತಮಿಳುನಾಡು ಬೇಟೆಗಾರರು ಹಾಗೂ ಕರ್ನಾಟಕ ಅರಣ್ಯ ಇಲಾಖೆಯವರ ಮಧ್ಯೆ ಗುಂಡಿನ ಚಕಮಕಿ; ಒಬ್ಬ ಸಾವು!

    ಸಾವಿಗೀಡಾಗಿದ್ದವನ ಬಳಿ ಜಿಂಕೆ ಶವ ಹಾಗೂ ಗನ್ ಕೂಡ ಸಿಕ್ಕಿದೆ. ಆತ ಏಳೆಂಟು ವರ್ಷಗಳ ಹಿಂದೆಯೂ ಬೇಟೆಯಾಡಲು ಬಂದು ಸಿಕ್ಕಿಬಿದ್ದಿದ್ದ. ಆತ ಮಾಡಿದ ತಪ್ಪಿಗೆ ಪರಮಾತ್ಮನಿಂದ ಶಿಕ್ಷೆಯಾಗಿದೆ. ಮೀನು ಹಿಡಿಯಲು ಸಾವಿರಾರು ಜನರು ಬರುತ್ತಾರೆ, ಯಾವ ಮೀನುಗಾರರಿಗೂ ಅನನುಕೂಲವಾಗಿಲ್ಲ. ಆತ ಮೀನುಗಾರನಾಗಿದ್ದರೆ ಮರಣೋತ್ತರ ವರದಿ ಬಂದ ನಂತರ ಸತ್ಯಾಂಶ ಗೊತ್ತಾಗಲಿದೆ. ಆತ ಅಮಾಯಕನಾಗಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದಿರುವ ವಿ.ಸೋಮಣ್ಣ, ಎರಡು ರಾಜ್ಯಗಳ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದಿದ್ದಾರೆ.

    ಮತ್ತೆ ‘ಸೈಲೆಂಟ್’ ಸದ್ದು: ದೇವಾಲಯದಲ್ಲಿ ಭಕ್ತರಿಗೆ ಕೊಡುವ ಲಡ್ಡು ಪೊಟ್ಟಣಗಳ ಮೇಲೂ ರೌಡಿ ಸುನೀಲನ ಚಿತ್ರ!

    ಎಂಬಿಬಿಎಸ್​ ವಿದ್ಯಾರ್ಥಿನಿ ಮೇಲೆ ಅಪ್ಪ-ಮಗನ ಅತ್ಯಾಚಾರ; ಇಸ್ಲಾಂ ಧರ್ಮಕ್ಕೆ ಮತಾಂತರಿಸಲೂ ಯತ್ನ

    ಇನ್ನೇನು ನಿಮ್ಮ ಕೆಲಸದ ಅವಧಿ ಮುಗಿಯುತ್ತೆ, ಮನೆಗೆ ಹೊರಡಿ: ಈ ಕಂಪನಿಯಲ್ಲಿ ಉದ್ಯೋಗಿಗಳಿಗೆ ಹೀಗೊಂದು ಎಚ್ಚರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts