More

    ಮಾನವೀಯತೆ ಮೆರೆದ ಎಸ್‌ಪಿ ನಿಂಬರಗಿ

    ತೆಲಸಂಗ: ಮಹಾರಾಷ್ಟ್ರದ ಸಾಂಗಲಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡು ಆಂಬುಲೆನ್ಸ್‌ನಲ್ಲಿ ಬಂದಿದ್ದ ಮುದ್ದೇಬಿಹಾಳದ ಬಾಣಂತಿಯನ್ನು ವಿಜಯಪುರ ಜಿಲ್ಲೆಯ ಹೊನವಾಡ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ತಡೆದ ಘಟನೆ ಬುಧವಾರ ಜರುಗಿದೆ. ಬಾಣಂತಿ ಸುಜಾತಾ ರಾಠೋಡ ತನ್ನ ಪತಿ ಮತ್ತು 2 ವರ್ಷದ ಹೆಣ್ಣು ಮಗು ವಿನೊಂದಿಗೆ ಆಗಮಿಸುತ್ತಿದ್ದರು. ಅವರ ಬಳಿ ಅನುಮತಿ ಪತ್ರ ಇಲ್ಲವೆಂದು ಒಂದು ಗಂಟೆಗೂ ಅಧಿಕ ಕಾಲ ಚೆಕ್‌ಪೋಸ್ಟ್ ಸಿಬ್ಬಂದಿ ತಡೆ ಹಿಡಿದಿದ್ದರು. ಇದರಿಂದ ಹಸುಗೂಸಿನೊಂದಿಗೆ ಕಣ್ಣೀರು ಸುರಿಸುತ್ತ ನಮ್ಮನ್ನು ಮನೆಗೆ ತಲುಪಿಸಿ ಎಂದು ಗೋಗರೆಯುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಮಾಧ್ಯಮದವರ ಮೂಲಕ ವಿಷಯ ತಿಳಿದುಕೊಂಡ ಬೆಳಗಾವಿ ಜಿಲ್ಲಾ ಎಸ್‌ಪಿ ಲಕ್ಷ್ಮಣ ನಿಂಬರಗಿ ತಕ್ಷಣವೇ ವಿಜಯಪುರ ಜಿಲ್ಲೆಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ, ಆಂಬುಲೆನ್ಸ್ ತೆರಳಲು ಅವಕಾಶ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts