More

    ವಾಣಿಜ್ಯನಗರಿ ರಾಣೆಬೆನ್ನೂರಲ್ಲಿ ಚಿಕಿತ್ಸೆಗಿಲ್ಲ ಬರ

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

    ಜಿಲ್ಲೆಯಲ್ಲಿಯೇ ಅತಿದೊಡ್ಡ ನಗರ ಎಂದು ಹೆಸರುವಾಸಿಯಾಗಿರುವ ರಾಣೆಬೆನ್ನೂರ ನಗರಕ್ಕೆ ಸರ್ಕಾರ 100 ಬೆಡ್​ಗಳ ತಾಲೂಕು ಸರ್ಕಾರಿ ಆಸ್ಪತ್ರೆ ಮಂಜೂರು ಮಾಡಿದೆ. ನಿತ್ಯವೂ ನೂರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಆಸ್ಪತ್ರೆ ಎದುರು ಮನಬಂದಂತೆ ಬೈಕ್ ನಿಲ್ಲಿಸುವುದರಿಂದ ಆಂಬುಲೆನ್ಸ್​ಗಳ ಸಂಚಾರಕ್ಕೆ ಪರದಾಡುವಂತಾಗಿದೆ.

    ಸಾರ್ವಜನಿಕರ ಹಿತದೃಷ್ಟಿಯಿಂದ ಹಲಗೇರಿ ರಸ್ತೆಯಲ್ಲಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಹಾಗೂ ನಗರಸಭೆ ಪಕ್ಕದಲ್ಲಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ನಿರ್ವಿುಸಲಾಗಿದೆ. ಸಾರ್ವಜನಿಕ ಆಸ್ಪತ್ರೆಗೆ ನಿತ್ಯವೂ 400ರಿಂದ 500 ಹೊರ ರೋಗಿಗಳು ಹಾಗೂ 25ರಿಂದ 30 ಹೊರ ರೋಗಿಗಳು ದಾಖಲಾಗುತ್ತಿದ್ದಾರೆ. ಹೆರಿಗೆ ಆಸ್ಪತ್ರೆಯಲ್ಲಿ ನಿತ್ಯವೂ 60ರಿಂದ 80 ಹೊರ ರೋಗಿಗಳು ಹಾಗೂ 10ರಿಂದ 15 ಒಳ ರೋಗಿಗಳು ದಾಖಲಾಗುತ್ತಿದ್ದಾರೆ. ತಿಂಗಳಿಗೆ 120 ರಷ್ಟು ಸರಳ ಹೆರಿಗೆ ಹಾಗೂ 25ರಿಂದ 30 ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಆಗುತ್ತಿವೆ.

    ಶೇ. 80ರಷ್ಟು ವೈದ್ಯರು, ಸಿಬ್ಬಂದಿ ನೇಮಕ

    100 ಬೆಡ್​ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿ ಸೇರಿ ಒಟ್ಟು 89 ಹುದ್ದೆಗಳಿವೆ. ಅದರಲ್ಲಿ 71 ಭರ್ತಿಯಾಗಿದ್ದು, 18 ಹುದ್ದೆಗಳು ಖಾಲಿಯಿವೆ.

    ಹೆರಿಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ಅಧೀಕ್ಷಕರು ಸೇರಿ ಒಟ್ಟು 33 ಹುದ್ದೆಗಳಿದ್ದು, ಅದರಲ್ಲಿ 23 ಹುದ್ದೆಗಳು ಭರ್ತಿಯಾಗಿದ್ದು, 10 ಹುದ್ದೆಗಳು ಖಾಲಿಯಿವೆ. 2 ಪ್ರಸೂತಿ ತಜ್ಞ, 1 ಮಕ್ಕಳು ತಜ್ಞ, 1 ಅರಿವಳಿಕೆ ತಜ್ಞ ಸೇರಿ 4 ಜನ ತಜ್ಞ ವೈದ್ಯರು ಇದ್ದಾರೆ. 6 ಶುಶ್ರೂಷಕರ ಹುದ್ದೆಗಳಿದ್ದು, 6 ಭರ್ತಿಯಾಗಿವೆ. ಹೆಚ್ಚುವರಿಯಾಗಿ 4 ಜನರನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ. ಹಿರಿಯ ಫಾರ್ವಸಿಸ್ಟ್, ಕಿರಿಯ ಫಾರ್ವಸಿಸ್ಟ್, ಕಿರಿಯ ಪ್ರಯೋಗಾಲಯ ತಂತ್ರಜ್ಞ, ಕಚೇರಿ ಅಧೀಕ್ಷರು ಸೇರಿ 23 ಹುದ್ದೆಗಳು ಭರ್ತಿಯಾಗಿವೆ. ಅಲ್ಲದೆ, ಡಯಾಲಿಸಿಸ್ ಘಟಕ, ಐಸಿಯು, ಎನ್​ಸಿಡಿ ಘಟಕಗಳಿಗೆ ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗಿದೆ. 1 ಆಯುರ್ವೆದ ಹಾಗೂ 1 ಆಯುಷ್ಯ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.

    ಹೀಗಾಗಿ ರಾಣೆಬೆನ್ನೂರ ನಗರ ಮಾತ್ರವಲ್ಲದೆ ಗ್ರಾಮೀಣ ಭಾಗ, ಹಿರೇಕೆರೂರ, ಬ್ಯಾಡಗಿ, ಹೂವಿನಹಡಗಲಿ, ಶಿಕಾರಿಪುರ, ಹೊನ್ನಾಳಿ, ಮಾಸೂರ ಕಡೆಯಿಂದಲೂ ಇಲ್ಲಿಗೆ ರೋಗಿಗಳು ಬರುತ್ತಿದ್ದಾರೆ.

    ರ್ಪಾಂಗ್ ಸಮಸ್ಯೆ ಬಗೆಹರಿಸಿ

    ಆಸ್ಪತ್ರೆ ಆವರಣದಲ್ಲಿ ಕಾವಲುಗಾರರು ಇಲ್ಲದ ಕಾರಣ ರೋಗಿಗಳ ಜತೆಗೆ ಬರುವವರು ಬೈಕ್​ಗಳನ್ನು ಮನಬಂದಂತೆ ಆಸ್ಪತ್ರೆ ಎದುರು ನಿಲ್ಲಿಸುತ್ತಿದ್ದಾರೆ. ಹೀಗಾಗಿ ರೋಗಿಗಳನ್ನು ಹೊತ್ತು ಬರುವ ಆಂಬುಲೆನ್ಸ್​ಗಳು ಆಸ್ಪತ್ರೆ ಮುಂಭಾಗಕ್ಕೆ ಬರಲು ಪರದಾಡುವಂತಾಗಿದೆ. ಆಂಬುಲೆನ್ಸ್​ಗಳು ಬಂದಾಗ ಸ್ಥಳದಲ್ಲಿದ್ದ ಜನರೇ ಬೈಕ್​ಗಳನ್ನು ಎಳೆದು ದೂರ ಸರಿಸುವ ದುಃಸ್ಥಿತಿ ಎದುರಾಗಿದೆ. ಆದ್ದರಿಂದ ಓರ್ವ ಕಾವಲುಗಾರನ್ನು ನೇಮಕ ಮಾಡಿ ರ್ಪಾಂಗ್​ಗೆ ವ್ಯವಸ್ಥೆ ಕಲ್ಪಿಸಬೇಕಿದೆ.

    ಆಸ್ಪತ್ರೆ ಆವರಣದಲ್ಲಿ ಬೈಕ್​ಗಳ ರ್ಪಾಂಗ್​ನಿಂದ ತೊಂದರೆ ಆಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇನ್ನುಳಿದಂತೆ ವೈದ್ಯರು, ಸಿಬ್ಬಂದಿ ಹುದ್ದೆಗಳು ಭರ್ತಿಯಿವೆ. ಸರ್ಕಾರದಿಂದ ಆಕ್ಸಿಜನ್ ಪ್ಲಾಂಟ್​ಗಳನ್ನು ಮಾಡಿಕೊಡಲಾಗಿದೆ. ರೋಗಿಗಳ ಸಂಖ್ಯೆಯೂ ಅಧಿಕವಾಗಿದೆ.

    | ಡಾ. ರಾಜು ಶಿರೂರ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ

    ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಿತ್ಯವೂ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ರೋಗಿಗಳ ಸಂಖ್ಯೆ ನೋಡಿದರೆ ಆಸ್ಪತ್ರೆಯನ್ನು 150 ಬೆಡ್​ಗಳಿಗೆ ಏರಿಕೆ ಮಾಡಬೇಕು. ಹೊರಗಡೆ ಬೈಕ್ ನಿಲ್ಲಿಸುವುದು ಸೇರಿ ಇತರ ತೊಂದರೆಗಳಿವೆ. ಇವುಗಳನ್ನು ಸರಿಪಡಿಸಬೇಕು.

    | ಮಂಜುನಾಥ, ರೋಗಿಯ ಸಂಬಂಧಿ ಕಜ್ಜರಿ ಗ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts