More

    ಅರ್ಥಪೂರ್ಣ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ

    ಹುಲಸೂರು: ನಮ್ಮೆಲ್ಲರ ನಿರೀಕ್ಷೆಯಂತೆ ನನ್ನ ಹುಟ್ಟು ಹಬ್ಬದ ನಿಮಿತ್ತ ಕಲ್ಯಾಣ ಕರ್ನಾಟಕದ ದ್ವಿತೀಯ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡುತ್ತಿರುವುದು ಸಂತಸ ತಂದಿದೆ. ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.

    ಪಟ್ಟಣದ ಅಲ್ಲಮ್ ಪ್ರಭು ಶೂನ್ಯ ಪೀಠ ಅನುಭವ ಮಂಟಪದ ಪರಿಸರದಲ್ಲಿ ಶುಕ್ರವಾರ ರಾತ್ರಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾಹಿತ್ಯಾಸಕ್ತರು ಆಗಮಿಸುತ್ತಿದ್ದರಿಂದ ಕಾರ್ಯಕ್ರಮಕ್ಕೆ ಯಾವುದೇ ಕಪ್ಪು ಚುಕ್ಕೆ ಬರದಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು.

    ಕಾರ್ಯಕ್ರಮದಲ್ಲಿ ಎಲ್ಲ ಗೋಷ್ಠಿಗಳಿಗೆ ಆದ್ಯತೆ ನೀಡಬೇಕು. ನಾಡಿನ ಹೆಸರಾಂತ ಸಾಹಿತಿಗಳು, ಮಠಾಧೀಶರು , ಸಂಗೀತ ಕಲಾವಿದರು ಆಗಮಿಸುತ್ತಿದ್ದು, ಮಹಿಳೆಯರು ಸಿದ್ಧಪಡಿಸಿದ್ದ ರುದ್ರಾಕ್ಷಿ ರಥೋತ್ಸವ ಮಹಿಳೆಯರೆ ಎಳೆಯಲಿದ್ದು, ಹೆಚ್ಚಿನ ಮಹಿಳೆಯರು ಭಾಗವಹಿಸಬೇಕು ಎಂದು ಹೇಳಿದರು.

    ಕಸಾಪ ಜಿಲ್ಲಾ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಕಲ್ಯಾಣ ಕರ್ನಾಟಕ ದ್ವಿತೀಯ ಸಾಹಿತ್ಯ ಸಮ್ಮೇಳನ ಬೀದರ್‌ನಲ್ಲಿ ಆಯೋಜನೆ ಮಾಡಬೇಕಾಗಿತ್ತು. ಆದರೆ ಶ್ರೀಗಳ ಆದೇಶದ ಮೇರೆಗೆ ನಾವು ಮಹಾರಾಷ್ಟ್ರದ ಗಡಿ ಭಾಗದ ಹುಲಸೂರಿನಲ್ಲಿ ಆಯೋಜಿಸಿದ್ದು, ಈ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣ ಹಾಗೂ ಜನ ಮೆಚ್ಚುವಂತೆ ಕಾರ್ಯಕ್ರಮ ಮಾಡುವ ಉದ್ದೇಶ ನಮ್ಮದಾಗಿದೆ ಎಂದು ಹೇಳಿದರು.

    ಜಿಪಂ ಮಾಜಿ ಸದಸ್ಯ ಸುಧೀರ ಕಾಡಾದಿ ಮಾತನಾಡಿದರು. ರಾಜಕುಮಾರ ಹೊನ್ನಾಡೆ, ಸೂರ್ಯಕಾಂತ ಪಾಟೀಲ್, ರಾಜಪ್ಪ ನಂದೋಡೆ , ಭೀಮಾಶಂಕರ ಆದೆಪ್ಪ , ಶ್ರೀದೇವಿ ನಿಡೋದೆ, ಡಿ.ಸಿ. ಪಾಟೀಲ್, ಡಾ.ಧರ್ಮೇಂದ್ರ ಭೋಸ್ಲೆ , ಬಸವರಾಜ ಗುಂಗೆ, ರಮೇಶ ಉಮಾಪುರೆ, ರಾಜಕುಮಾರ ತೊಂಡಾರೆ ಸಲಹೆ ಸೂಚನೆ ನೀಡಿದರು.

    ವೇದಿಕೆ ಮೇಲೆ ಕಸಾಪ ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಹಾವಣ್ಣ , ಗ್ರಾಪಂ ಸದಸ್ಯ ನಾಗೇಶ ಮೇತ್ರೆ ಹಾಜರಿದ್ದರು. ರಾಜಕುಮಾರ ನಿಡೋದೆ ಸ್ವಾಗತಿಸಿ ನಿರೂಪಣೆ ಮಾಡಿದರು. ವಿವಿಧ ಸಮಿತಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಜವಾಬ್ದಾರಿ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts