More

    ಹುಕ್ಕೇರಿ ಸಂತೆ ತಡೆಗೆ ಹರಸಾಹಸ

    ಹುಕ್ಕೇರಿ: ಕರೊನಾ ವೈರಸ್ ಹರಡುವಿಕೆ ನಿಯಂತ್ರಿಸಲು ಸರ್ಕಾರದ ಆದೇಶದ ಮೇರೆಗೆ ಸಂತೆ, ಸಭೆ, ಸಮಾರಂಭಗಳನ್ನು ರದ್ದು ಮಾಡಲಾಗಿದೆ. ಆದರೆ, ಸೋಮವಾರ ಹುಕ್ಕೇರಿ ಪಟ್ಟಣದಲ್ಲಿ ಸಂತೆ ರದ್ದು ಮಾಡಲು ಪುರಸಭೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.

    ತಾಲೂಕು ಕೇಂದ್ರವಾದ ಹುಕ್ಕೇರಿಯಲ್ಲಿ ಸೋಮವಾರ ಸಂತೆ ನಡೆಯುತ್ತದೆ. ಎಂದಿನಂತೆ ವ್ಯಾಪಾರಿಗಳು, ರೈತರು ಸಂತೆಗೆ ಆಗಮಿಸಿದ್ದರು. ಸರ್ಕಾರದ ಆದೇಶದ ಮೇರೆಗೆ ಸಂತೆ ರದ್ದು ಮಾಡಲಾಗಿದೆ. ನೀವು ಸಂತೆಗೆ ಆಗಮಿಸಿದ್ದು ತಪ್ಪು ಎಂದು ಸ್ಥಳೀಯ ಕೋರ್ಟ್ ವೃತ್ತ ಮತ್ತು ಅಡವಿಸಿದ್ಧೇಶ್ವರ ಮಠದ ಬಳಿ ವ್ಯಾಪಾರಿಗಳನ್ನು ಪೊಲೀಸರು ತಡೆದರು. ಕೆಲ ವ್ಯಾಪಾರಸ್ಥರು ತೆರೆ ಮರೆಯಲ್ಲಿ ವ್ಯವಹಾರ ನಡೆಸಲು ಮುಂದಾದಾಗ ವಾಗ್ವಾದ ನಡೆಯಿತು. ಕೊನೆಗೂ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಿ ಸಂತೆ ರದ್ದು ಮಾಡುವಲ್ಲಿ ಯಶಸ್ವಿಯಾದರು.

    ವೈನ್ ಮಾರಾಟಕ್ಕಿಲ್ಲ ತಡೆ: ಪಟ್ಟಣದಲ್ಲಿ ವೈನ್ ಶಾಪ್‌ಗಳು ರಾಜಾರೋಷವಾಗಿ ಸಾರಾಯಿ ಮಾರಾಟದಲ್ಲಿ ತೊಡಗಿದ್ದವು.

    ಜನರ ಅಸಹಕಾರ: ಕರೊನಾ ಹರಡುವಿಕೆ ನಿಯಂತ್ರಿಸಲು ಸರ್ಕಾರ ಸ್ವಯಂ ನಿಯಂತ್ರಣ ಮಾಡಿಕೊಳ್ಳುವಂತೆ ಸೂಚಿಸಿದೆ. ಆದರೆ, ಪೊಲೀಸ್ ಠಾಣೆ, ಸಬ್ ರಿಜಿಸ್ಟ್ರಾರ್, ಕಂದಾಯ ಇಲಾಖೆಗಳಿಗೆ ತಾಲೂಕಿನ ಜನತೆ ಯಾವುದೇ ಭಯವಿಲ್ಲದೆ ಬರುತ್ತಿರುವುದು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಮಸ್ಯೆ ತಂದೊಡ್ಡಿದೆ.

    ಹೊರ ದೇಶಗಳಿಂದ ಬಂದವರನ್ನು ಗುರುತಿಸಿ ಅವರ ಕೈ ಮೇಲೆ ಗೃಹ ಬಂಧನದ ಮುದ್ರೆ ಹಾಕುತ್ತಿದ್ದೇವೆ. ಆದರೆ, ಅವರು ಸಹಕರಿಸುತ್ತಿಲ್ಲ. ಅನಿವಾರ್ಯವಾದಲ್ಲಿ ಪೊಲೀಸ್ ಇಲಾಖೆಗೆ ಇವರ ವಿರುದ್ಧ ದೂರು ನೀಡುತ್ತೇವೆ.
    | ಹೆಸರು ಹೇಳಲು ಇಚ್ಛಿಸದ ಆರೋಗ್ಯ ಇಲಾಖೆ ಅಧಿಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts