More

    VIDEO| ಬಲೆಗೆ ಬಿತ್ತು ಭಾರಿ ಗಾತ್ರದ ಅನಕೊಂಡ: ವಿಡಿಯೋ ಬಗ್ಗೆ ನಿಜಾಂಶ ಗೊತ್ತಾದ್ರೆ ಅಚ್ಚರಿ ಖಂಡಿತ!

    ನವದೆಹಲಿ: ದೈತ್ಯಾಕಾರದ ಅನಕೊಂಡವೊಂದು ಬಲೆ ಬಿದ್ದಂತಹ ವಿಡಿಯೋ ಇತ್ತೀಚೆಗಷ್ಟೇ ಜಾಲತಾಣದಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ಭಾರಿ ವೈರಲ್​ ಆಗಿದೆ. “ಚಿಕನ್​ ಕದಿಯುವವನ ಹಿಡಿಯುವ ಪ್ರಯತ್ನ” ಎಂದು ವಿಡಿಯೋಗೆ ಅಡಿಬರಹ ನೀಡಲಾಗಿದೆ.

    ವಿಡಿಯೋದಲ್ಲಿ ಹಾವನ್ನು ನೋಡಿದ್ರೆ ಅಚ್ಚರಿಯಾಗುವುದು ಖಂಡಿತ. ಏಕೆಂದರೆ ಹಿಂದೆಂದೂ ನೋಡಿರದ ಗಾತ್ರದಲ್ಲಿ ಅನಕೊಂಡ ಕಾಣಿಸಿಕೊಳ್ಳುತ್ತದೆ. ಮಣ್ಣು ಮಿಶ್ರಿತ ಕೆರೆಯಲ್ಲಿ ಈಜುಕೊಂಡು ಬರುವ ಅನಕೊಂಡವನ್ನು ಭಾರಿ ಗಾತ್ರದ ನೀಲಿ ಬಣ್ಣದ ಡ್ರಮ್​ನಿಂದ ಸೆರೆಹಿಡಿಯುವಂತೆ ವಿಡಿಯೋದಲ್ಲಿ ಕಾಣುತ್ತದೆ. ಈ ವಿಡಿಯೋ ಎರಡು ವರ್ಷಗಳ ಹಿಂದೆಯೇ ಅಪ್​ಲೋಡ್​ ಆಗಿದ್ದು, ಇದೀಗ ಮತ್ತೆ ವೈರಲ್​ ಆಗಿದೆ. ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ.

    ಆದರೆ, ವಿಡಿಯೋದಲ್ಲಿರುವ ಹಾವಿನ ಗಾತ್ರದ ಬಗ್ಗೆ ನಿಜಾಂಶ ತಿಳಿದರೆ ಅಚ್ಚರಿಯಾಗುತ್ತದೆ. ಕಾರಣ ವಿಡಿಯೋದಲ್ಲಿರುವ ಅನಕೊಂಡ ಸಾಮಾನ್ಯ ಗಾತ್ರಕ್ಕಿಂತ ಹೆಚ್ಚು ದಪ್ಪವಾಗಿ ಕಾಣುತ್ತದೆ. ಹಾಗೇ ಕಾಣುವಂತೆ ಎಡಿಟ್​ ಮಾಡಲಾಗಿದೆ ಎಂದು ಫ್ಯಾಕ್ಟ್​ಚೆಕ್​ ವೆಬ್​ಸೈಟ್​ ಸ್ನೂಪ್ಸ್​ (Snopes) ವರದಿ ಮಾಡಿದೆ.

    ಅನಕೊಂಡದ ನಿಜವಾದ ಗಾತ್ರದ ಬಗ್ಗೆ ತಿಳಿಯಲು ಈ ಲಿಂಕ್​ ಮೇಲೆ ಕ್ಲಿಕ್ಕಿಸಿ. ಅನಕೊಂಡ ಸಾಮಾನ್ಯ ಗಾತ್ರದಷ್ಟೇ ಕಾಣಿಸುತ್ತದೆ. ಇನ್ನು ನೀಲಿ ಡ್ರಮ್​ನಂತೆ ಕಾಣುವುದು ಒಂದು ಸಣ್ಣ ಪೈಪ್​ ಅಷ್ಟೇ. ಅದನ್ನು ಎಡಿಟ್​ ಮಾಡಿ ಭಾರಿ ಗಾತ್ರದ್ದು ಎಂದು ಬಿಂಬಿಸಿ ವೈರಲ್​ ಮಾಡಲಾಗಿದೆ.

    ವೈರಲ್​ ವಿಡಿಯೋದಲ್ಲಿರುವ ಅನಕೊಂಡ ಸುಮಾರು 50 ಅಡಿ ಉದ್ದವಿದೆ ಎಂದು ಸುಳ್ಳು ಮಾಹಿತಿ ಹರಡಲಾಗಿದೆ. ಸದ್ಯ ವಿಡಿಯೋ ಅಂತೂ ಭಾರಿ ಸದ್ದು ಮಾಡುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts