More

    2023ರಲ್ಲಿ ಸ್ಮಾಲ್​ ಕ್ಯಾಪ್ ಮ್ಯೂಚುವಲ್​ ಫಂಡ್​ಗಲ್ಲಿ ಲಾಭದ ಸುರಿಮಳೆ: 2024ರಲ್ಲಿ ಹೂಡಿಕೆ ಮುಂದುವರಿಕೆಗೆ ಪರಿಣತರ ಸಲಹೆ

    ಮುಂಬೈ: ಪ್ರಸ್ತುತ ದಿನಗಳಲ್ಲಿ ಸ್ಮಾಲ್ ಕ್ಯಾಪ್ (ಸಣ್ಣ ಕಂಪನಿಗಳ ಷೇರು) ಮ್ಯೂಚುವಲ್​ ಫಂಡ್​ ಯೋಜನೆಗಳು ಸಾಕಷ್ಟು ಗಮನಸೆಳೆದಿವೆ. ಅತಿ ಸಣ್ಣ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವ ಈ ಯೋಜನೆಗಳು 2023 ರಲ್ಲಿ ಶೇಕಡಾ 40.44 ಕ್ಕಿಂತ ಹೆಚ್ಚು ಲಾಭ ನೀಡಿವೆ. ಹೀಗಾಗಿ ಹೂಡಿಕೆದಾರರು ಈ ಯೋಜನೆಗಳ ಬಗ್ಗೆ ಪ್ರೀತಿಯ ಸುರಿಮಳೆಗೈಯುತ್ತಿದ್ದಾರೆ. ಹೀಗಾಗಿ, ಕಳೆದ ನವೆಂಬರ್‌ ತಿಂಗಳೊಂದರಲ್ಲಿಯೇ 3,699.24 ಕೋಟಿ ರೂಪಾಯಿಗಳನ್ನು ಸ್ಮಾಲ್ ಕ್ಯಾಪ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.

    ಸ್ಮಾಲ್ ಕ್ಯಾಪ್​ಗಳ ಮೌಲ್ಯಮಾಪನ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಂದರೆ, ಸಣ್ಣ ಕಂಪನಿಗಳ ಷೇರು ಬೆಲೆಗಳು ವಾಸ್ತವಕ್ಕಿಂತ ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.
    ಮ್ಯೂಚುವಲ್​ ಫಂಡ್​ ವ್ಯವಸ್ಥಾಪಕರು ಮತ್ತು ಸಲಹೆಗಾರರು ಸ್ಮಾಲ್​ ಕ್ಯಾಪ್​ಗಳ ಮೌಲ್ಯಮಾಪನಗಳು ಹೆಚ್ಚಾಗಿದ್ದರೂ ಹೂಡಿಕೆದಾರರು ಇದರಲ್ಲಿ ಮುಂದುವರಿಯುವ ಮೂಲಕ ದೀರ್ಘಾವಧಿಯಲ್ಲಿ ಸಂಪತ್ತನ್ನು

    ಸ್ಮಾಲ್ ಕ್ಯಾಪ್ ಯೋಜನೆಗಳು ಅತಿ ಸಣ್ಣ ಕಂಪನಿಗಳು ಅಥವಾ ಅವುಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ.
    ಸೆಬಿ ಆದೇಶ, ಸ್ಮಾಲ್ ಕ್ಯಾಪ್ ಯೋಜನೆಗಳು ಮಾರುಕಟ್ಟೆ ಬಂಡವಾಳೀಕರಣದ ದೃಷ್ಟಿಯಿಂದ 250 ಕ್ಕಿಂತ ಕಡಿಮೆ ಶ್ರೇಯಾಂಕ ಇರುವ ಕಂಪನಿಗಳಲ್ಲಿ ಹೂಡಿಕೆ ಮಾಡಬೇಕು. ಅಂದರೆ, ಬೃಹತ್ ಹಾಗೂ ಮಧ್ಯಮ ಗಾತ್ರದ 249 ಕಂಪನಿಗಳನ್ನು ಹೊರತುಪಡಿಸಿ ಚಿಕ್ಕ ಕಂಪನಿಗಳಲ್ಲಿ ಹೂಡಿಕೆ ಮಾಡಬೇಕು. ಸಣ್ಣ ಕಂಪನಿಯ ಷೇರುಗಳಲ್ಲಿ ಕನಿಷ್ಠ 65% ಹೂಡಿಕೆ ಮಾಡಬೇಕು. ಸ್ಮಾಲ್ ಕ್ಯಾಪ್ ವಿಭಾಗವು ಅತ್ಯಂತ ಏರಿಳಿತ ಸಾಧ್ಯತೆ ಹೊಂದಿರುತ್ತದೆ.

    ಹಾಗಿದ್ದರೆ 2024ರಲ್ಲಿಯೂ ಸಣ್ಣ ಕ್ಯಾಪ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ.

    ಕ್ಯಾಪ್ ಯೋಜನೆಗಳು ಯೋಜನೆಗಳು ಹೆಚ್ಚಿನ ಆದಾಯವನ್ನು ನೀಡುವ ಸಾಮರ್ಥ್ಯ ಹೊಂದಿವೆ. ಕಳೆದ 10 ವರ್ಷಗಳಲ್ಲಿ ಈ ವರ್ಗವು ಶೇಕಡಾ 19ರಷ್ಟು ಸರಾಸರಿ ಆದಾಯ ನೀಡಿವೆ.

    ದೀರ್ಘಕಾಲದವರೆಗೆ ಸಂಪತ್ತನ್ನು ರಚಿಸಲು ನೀವು ಹೂಡಿಕೆ ಮಾಡಬಹುದಾದ ಕೆಲವು ಸಣ್ಣ ಕ್ಯಾಪ್ ಯೋಜನೆಗಳು ಇಲ್ಲಿವೆ. ಇವುಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿ, ರಿಸ್ಕ್​ ಅಂಶಗಳನ್ನು ಗಮನಿಸಿ ಹೂಡಿಕೆ ಮಾಡಬೇಕು.

    2023ರಲ್ಲಿ ಕೆಲ ಸ್ಮಾಲ್ ಕ್ಯಾಪ್ ಫಂಡ್‌ಗಳ ಲಾಭಾಂಶ

    ಮಹೀಂದ್ರಾ ಮೆನುಲೈಫ್​ ಸ್ಮಾಲ್​ ಕ್ಯಾಪ್​ ಫಂಡ್​: ಶೇಕಡಾ 61.26
    ಬಂಧನ ಸ್ಮಾಲ್​ ಕ್ಯಾಪ್​ ಫಂಡ್​: ಶೇ. 57.46
    ಐಟಿಐ ಸ್ಮಾಲ್​ ಕ್ಯಾಪ್​ ಫಂಡ್​: ಶೇ. 55.65
    ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್: ಶೇ. 51.12
    ಕ್ವಾಂಟ್​ ಸ್ಮಾಲ್​ ಕ್ಯಾಪ್​ ಫಂಡ್: ಶೇಕಡಾ 49.46
    ಎಚ್​ಎಸ್​ಬಿಸಿ ಸ್ಮಾಲ್ ಕ್ಯಾಪ್ ಫಂಡ್: ಶೇ. 48.83
    ಟಾಟಾ ಸ್ಮಾಲ್ ಕ್ಯಾಪ್ ಫಂಡ್: ಶೇ. 36.81
    ಕೋಟಕ್ ಸ್ಮಾಲ್ ಕ್ಯಾಪ್ ಫಂಡ್: 37.33

    ಡಿ. 30ರಂದು 743 ಹೊಸ ಕೋವಿಡ್ ಪ್ರಕರಣ; 7 ಸಾವು ದಾಖಲು

    ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಗುಂಡಿನ ಚಕಮಕಿಯಲ್ಲಿ ಕಮಾಂಡೋಗೆ ಗಾಯ

    ಅಂಬಾನಿ, ಅದಾನಿ, ಟಾಟಾ ಮೀರಿಸಿದ ಜಗತ್ತಿನ ಶ್ರೀಮಂತ ಮಹಿಳೆ: ಬೈಬಲ್​ ಓದು, ಪಿಯಾನೊ ನುಡಿಸುವಿಕೆ ಈಕೆಯ ಹವ್ಯಾಸ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts