More

    ಅದಾನಿ ಕಂಪನಿ ಷೇರಿಗೆ ಭಾರೀ ಬೇಡಿಕೆ: ಟೋಟಲ್​ ಗ್ಯಾಸ್ ಷೇರು ಬೆಲೆ ಹೆಚ್ಚಳವೇಕೆ?

    ಮುಂಬೈ: ಹೊಸ ಹಣಕಾಸು ವರ್ಷದ ಮೊದಲ ದಿನವಾದ ಏಪ್ರಿಲ್ 1 ರಂದು ಷೇರುಪೇಟೆ ಮತ್ತೊಮ್ಮೆ ಹೊಸ ದಾಖಲೆ ಸೃಷ್ಟಿಸಿದೆ. ಈ ವೇಳೆ ಗೌತಮ್ ಅದಾನಿ ಅವರ ಕಂಪನಿ ಅದಾನಿ ಟೋಟಲ್ ಗ್ಯಾಸ್ ಷೇರುಗಳ ಮೇಲೆ ಹೂಡಿಕೆದಾರರು ಮುಗಿಬಿದ್ದರು. ವಹಿವಾಟಿನ ಸಮಯದಲ್ಲಿ, ಷೇರುಗಳು ಅಂದಾಜು 8 ಪ್ರತಿಶತದಷ್ಟು ಏರಿಕೆಯೊಂದಿಗೆ ರೂ 1000 ರ ಮಟ್ಟವನ್ನು ತಲುಪಿತು. ಹಿಂದಿನ ವಹಿವಾಟು ದಿನದ ಷೇರು ಬೆಲೆ ಮುಕ್ತಾಯವು 926.55 ರೂ.ಇತ್ತು.

    ಅದಾನಿ ಟೋಟಲ್ ಗ್ಯಾಸ್ ಷೇರುಗಳ ಬೆಲೆ ಏರಿಕೆಗೆ ಕಂಪನಿಗೆ ಸಂಬಂಧಿಸಿದ ಸುದ್ದಿಯೇ ಕಾರಣ.

    ವಾಸ್ತವವಾಗಿ, ಅದಾನಿ ಟೋಟಲ್‌ ಗ್ಯಾಸ್​ (Adani Total Gas Ltd.) ಅಂಗಸಂಸ್ಥೆಯಾದ ಅದಾನಿ ಟೋಟಲ್ ಎನರ್ಜಿ ಬಯೋಮಾಸ್ ಲಿಮಿಟೆಡ್ (ATBL) ಮಥುರಾ ಜಿಲ್ಲೆಯಲ್ಲಿರುವ ಬರ್ಸಾನಾ ಜೈವಿಕ ಅನಿಲ ಘಟಕದ ಹಂತ 1 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಉತ್ತರ ಪ್ರದೇಶದ ಬರ್ಸಾನಾ ಬಯೋಗ್ಯಾಸ್ ಯೋಜನೆಯು 3 ಹಂತಗಳನ್ನು ಹೊಂದಿದ್ದು, ದಿನಕ್ಕೆ 600 ಟನ್ (ಟಿಪಿಡಿ) ಫೀಡ್‌ಸ್ಟಾಕ್‌ನ ಒಟ್ಟು ಸಾಮರ್ಥ್ಯವನ್ನು ಸಾಧಿಸಲಿದೆ ಎಂದು ಅದಾನಿ ಟೋಟಲ್ ಗ್ಯಾಸ್ ಹೇಳಿದೆ. ಇದು 42 ಕ್ಕೂ ಹೆಚ್ಚು TPD (ಟನ್​ ಪರ್​ ಡೇ- ದಿನಕ್ಕೆ ಒಂದು ಟನ್​) ಸಂಕುಚಿತ ಜೈವಿಕ ಅನಿಲ (CBG), 217 TPD ಸಾವಯವ ಗೊಬ್ಬರವನ್ನು ಉತ್ಪಾದಿಸುತ್ತದೆ. ಬರ್ಸಾನಾ ಜೈವಿಕ ಅನಿಲ ಘಟಕದ ಯೋಜನೆಯ ಎಲ್ಲಾ ಮೂರು ಹಂತಗಳ ವೆಚ್ಚ 200 ಕೋಟಿ ರೂ. ಇದು ಅದಾನಿ ಟೋಟಲ್ ಎನರ್ಜಿ ಬಯೋಮಾಸ್ ಲಿಮಿಟೆಡ್‌ನ ಮೊದಲ ಸಂಕುಚಿತ ಜೈವಿಕ ಅನಿಲ ಉತ್ಪಾದನಾ ಸೌಲಭ್ಯವಾಗಿದೆ.

    ಏತನ್ಮಧ್ಯೆ, ದ್ರವೀಕೃತ ನೈಸರ್ಗಿಕ ಅನಿಲ (LNG) ವಿಭಾಗದಲ್ಲಿ, ಅದಾನಿ ಟೋಟಲ್ ಗ್ಯಾಸ್ ತನ್ನ ಮೊದಲ LNG ಚಿಲ್ಲರೆ ಔಟ್ಲೆಟ್ ಅನ್ನು ಗುಜರಾತನ ದಹೇಜ್​ನಲ್ಲಿ ಅಭಿವೃದ್ಧಿಪಡಿಸುತ್ತಿದೆ. ಇದರ ಮೂಲಕ ದೇಶದ ಆಯಕಟ್ಟಿನ ಸ್ಥಳಗಳಲ್ಲಿ ಎಲ್‌ಎನ್‌ಜಿ ಕೇಂದ್ರಗಳ ಜಾಲವನ್ನು ಸ್ಥಾಪಿಸುವ ಯೋಜನೆ ಇದೆ.

    ವೆಂಚುರಾ ಸೆಕ್ಯುರಿಟೀಸ್ ಪ್ರಕಾರ, ಔಟ್ಲೆಟ್ ಜುಲೈ 2024 ರ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. EV ವಿಭಾಗದಲ್ಲಿ ಹೆಚ್ಚುವರಿ 1050+ EV ಚಾರ್ಜಿಂಗ್ ಪಾಯಿಂಟ್‌ಗಳು ನಿರ್ಮಾಣ ಹಂತದಲ್ಲಿವೆ. ಇದಕ್ಕಾಗಿ ಅನೇಕ ಪಾಲುದಾರರೊಂದಿಗೆ ಪಾಲುದಾರಿಕೆಯನ್ನು ಮಾಡಲಾಗಿದೆ. ಕಂಪನಿಯು ಇವಿ ಚಾರ್ಜಿಂಗ್​ ನಗರಗಳ ಸಂಖ್ಯೆಯನ್ನು 130 ವಿಸ್ತರಿಸಲು ಯೋಜಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts