More

    ಅದಾನಿ ಗ್ರೂಪ್‌ನಿಂದ ರೂ. 4000 ಕೋಟಿಯ ಆರ್ಡರ್: ವರ್ಷದಲ್ಲಿ 252% ಏರಿಕೆ ಕಂಡ ಪಿಎಸ್​ಯು ಸ್ಟಾಕ್​ಗೆ ಮತ್ತೆ ಡಿಮ್ಯಾಂಡು

    ಮುಂಬೈ: ಸರ್ಕಾರಿ ಕಂಪನಿ (ಪಿಎಸ್​ಯು) ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್) ಷೇರು ಬೆಲೆಗಳು ಗುರುವಾರ ಶೇ 4.2 ರಷ್ಟು ಏರಿಕೆ ಕಂಡಿವೆ. ಈ ಏರಿಕೆಯ ನಂತರ ಕಂಪನಿಯ ಷೇರುಗಳ ಬೆಲೆ 247.30 ರೂ. ತಲುಪಿದೆ.

    ರೂ. 4000 ಕೋಟಿ ಮೌಲ್ಯದ ಹೊಸ ಆರ್ಡರ್‌ಗಳನ್ನು ಪಡೆದ ಹಿನ್ನೆಲೆಯಲ್ಲಿ ಕಂಪನಿಯ ಷೇರುಗಳಲ್ಲಿ ಈ ಏರಿಕೆ ಕಂಡುಬಂದಿದೆ. ಅದಾನಿ ಪವರ್‌ ಕಂಪನಿಯಿಂದ ಕಾಮಗಾರಿ ಆದೇಶವನ್ನು ಬಿಎಚ್​ಇಎಲ್​ ಸ್ವೀಕರಿಸಿದೆ.

    ಕಂಪನಿ ನೀಡಿರುವ ಮಾಹಿತಿ ಪ್ರಕಾರ ಬಾಯ್ಲರ್, ಟರ್ಬೈನ್ ಮತ್ತು ಜನರೇಟರ್ ಪೂರೈಸುವ ಆದೇಶ ಇದಾಗಿದೆ. ಅಲ್ಲದೆ, ರಾಯಗಢದಲ್ಲಿ ಎರಡನೇ ಹಂತದ ವಿದ್ಯುತ್ ಯೋಜನೆಯ ಮೇಲ್ವಿಚಾರಣೆಯ ಕೆಲಸವೂ ಆಗಬೇಕಿದೆ. ಬಿಎಚ್‌ಇಎಲ್‌ನ ತಿರುಚ್ಚಿ ಮತ್ತು ಹರಿದ್ವಾರ ಘಟಕಗಳಲ್ಲಿ ಟರ್ಬೈನ್‌ಗಳನ್ನು ಉತ್ಪಾದಿಸಲಾಗುವುದು ಎಂದು ಕಂಪನಿ ತಿಳಿಸಿದೆ.

    ಈ ತಿಂಗಳ ಆರಂಭದಲ್ಲಿ, ಕಂಪನಿಯು ಸಿಂಗ್ರೌಲಿ ಸೂಪರ್‌ಕ್ರಿಟಿಕಲ್ ಥರ್ಮಲ್ ಪವರ್ ಪ್ಲಾಂಟ್‌ನ (ಎಸ್‌ಟಿಪಿಪಿ) ಮೂರನೇ ಹಂತದ ನಿರ್ಮಾಣದ ಕೆಲಸವನ್ನು ಪಡೆದುಕೊಂಡಿದೆ.

    ಗುರುವಾರ ಮಾರುಕಟ್ಟೆ ಮುಕ್ತಾಯದ ವೇಳೆಗೆ ಕಂಪನಿಯ ಒಂದು ಷೇರಿನ ಬೆಲೆ 247.20 ರೂ. ಇತ್ತು. ಕಳೆದ ಒಂದು ತಿಂಗಳಲ್ಲಿ ಕಂಪನಿಯ ಷೇರುಗಳ ಬೆಲೆಗಳು ಶೇಕಡಾ 10 ಕ್ಕಿಂತ ಹೆಚ್ಚು ಏರಿಕೆ ಕಂಡಿವೆ. ಇದೇ ಸಮಯದಲ್ಲಿ, 6 ತಿಂಗಳ ಕಾಲ ಷೇರುಗಳನ್ನು ಹೊಂದಿರುವ ಹೂಡಿಕೆದಾರರು ಇದುವರೆಗೆ ಶೇಕಡಾ 95.3ರಷ್ಟು ಲಾಭ ಗಳಿಸಿದ್ದಾರೆ. ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ನ ಷೇರುಗಳ ಬೆಲೆ ಒಂದು ವರ್ಷದಲ್ಲಿ 252 ಪ್ರತಿಶತದಷ್ಟು ಹೆಚ್ಚಾಗಿದೆ.

    ಕಂಪನಿಯ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ 271.90 ಮತ್ತು ಕನಿಷ್ಠ ಬೆಲೆ ರೂ 67.63 ಇದೆ. ಕಂಪನಿಯ ಮಾರುಕಟ್ಟೆ ಮೌಲ್ಯ 86,076.61 ಕೋಟಿ ರೂ. ಕಂಪನಿಯಲ್ಲಿ ಸರ್ಕಾರದ ಪಾಲು ಶೇಕಡಾ 63.20 ರಷ್ಟಿದೆ. ಈ ಕಂಪನಿಯಲ್ಲಿ, ಎಲ್ಐಸಿ ಶೇಕಡಾ 9 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ.

    ಹಿಂದೂಜಾ ಕಂಪನಿಯ ಷೇರು ಒಂದೇ ದಿನದಲ್ಲಿ 20% ಏರಿಕೆ: ಸ್ಟಾಕ್​ ಅಪ್ಪರ್​ ಸರ್ಕ್ಯೂಟ್​ ಹಿಟ್​ ಅಗಿದ್ದೇಕೆ?

    ಸ್ಟಾಕ್, ಮ್ಯೂಚುವಲ್ ಫಂಡ್ ಹೂಡಿಕೆ ಮಾಡುತ್ತೀರಾ? ಹಾಗಿದ್ದರೆ, ಮಾರ್ಚ್ 31 ರ ಮೊದಲು KYC ಮಾಹಿತಿ ನವೀಕರಣ ಅಗತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts