More

    ಕರಾಚಿಯಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ ಬ್ಯಾಗ್​ನಲ್ಲಿ ಸಿಕ್ಕ ವಸ್ತುವನ್ನು ನೋಡಿ ತಬ್ಬಿಬ್ಬಾದ ರಕ್ಷಣಾ ಸಿಬ್ಬಂದಿ

    ಕರಾಚಿ: ಪಾಕಿಸ್ತಾನ ಇಂಟರ್​ನ್ಯಾಷನಲ್ ಏರ್​ಲೈನ್ಸ್​ಗೆ ಸೇರಿದ ಪಿಕೆ 8303 ವಿಮಾನ ಮೇ 22ರಂದು ಕರಾಚಿಯ ವಸತಿ ಪ್ರದೇಶದಲ್ಲಿ ಬಿದ್ದು 97 ಮಂದಿ ಮೃತಪಟ್ಟಿದ್ದರು. 99 ಪ್ರಯಾಣಿಕರು ಇದ್ದ ವಿಮಾನ ಕರಾಚಿ ಏರ್​ಪೋರ್ಟ್​ಗಿಂತ ಸ್ವಲ್ಪ ದೂರದಲ್ಲಿ ಜನನಿಬಿಡ ಪ್ರದೇಶದಲ್ಲಿ ಬಿದ್ದು ಅವಘಡ ಸಂಭವಿಸಿತ್ತು. ಒಂಭತ್ತು ಮಕ್ಕಳು ಸೇರಿ 97 ಮಂದಿ ಮೃತಪಟ್ಟಿದ್ದರು. ಇಬ್ಬರು ಮಾತ್ರ ಬದುಕುಳಿದಿದ್ದರು.

    ಇದನ್ನೂ ಓದಿ:ತಬ್ಲಿಘಿಗಳು ಪ್ರವೇಶಿಸುತ್ತಿದ್ದಂತೆ ಸೋಂಕು ಕಾಡ್ಗಿಚ್ಚಿನಂತೆ ಹಬ್ಬಿತು…: ಸಿಎಂ ರೂಪಾನಿ 

    ಮೃತದೇಹಗಳೆನ್ನಲ್ಲ ಹೊರಗೆ ತೆಗೆಯಲಾಗಿದ್ದರೂ, ನೆಲದ ಮೇಲೆ, ಮನೆಗಳ ಮೇಲೆ ಬಿಡಿಬಿಡಿಯಾಗಿ ಬಿದ್ದಿರುವ ವಿಮಾನದ ಅವಶೇಷಗಳನ್ನು ಅಲ್ಲಿಂದ ತೆಗೆದು, ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆಯುತ್ತಲೇ ಇದೆ. ಹೀಗೆ ಅಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿರುವ ರಕ್ಷಣಾ ಸಿಬ್ಬಂದಿ ಹಾಗೂ ತನಿಖಾಧಿಕಾರಿಗಳಿಗೆ ಅಚ್ಚರಿಯೊಂದು ಎದುರಾಗಿದೆ.

    ಅಪಘಾತಕ್ಕೀಡಾದ ವಿಮಾನದ ಬಿಡಿಭಾಗವೊಂದರಲ್ಲಿ ಬರೋಬ್ಬರಿ 3 ಕೋಟಿ ರೂಪಾಯಿ ನಗದು ಸಿಕ್ಕಿದೆ. ಎರಡು ಬ್ಯಾಗ್​ಗಳ ತುಂಬ ಹಣ ಪತ್ತೆಯಾಗಿದ್ದು, ವಿವಿಧ ದೇಶಗಳ ಕರೆನ್ಸಿಗಳು ಇವೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಪುಲ್ವಾಮಾ ರೀತಿ ದಾಳಿ ನಡೆಸಲು ಸಿದ್ಧನಾಗಿ ಬಂದಿದ್ದ ಉಗ್ರನ ಪತ್ತೆ

    ಅಲ್ಲದೆ, ಏರ್​ಪೋರ್ಟ್​ನಲ್ಲಿ ಸೆಕ್ಯುರಿಟಿ ಚೆಕ್ ಮಾಡಲಾಗುತ್ತದೆ. ಬ್ಯಾಗೇಜ್​ ಸ್ಕ್ಯಾನರ್​ ಕೂಡ ಇರುತ್ತದೆ. ಅದೆಲ್ಲದರ ಕಣ್ಣು ತಪ್ಪಿಸಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಎಲ್ಲಿಗೆ, ಯಾರು ಸಾಗಿಸುತ್ತಿದ್ದರು ಎಂಬುದನ್ನು ಕೂಡ ತನಿಖೆ ಮಾಡಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ, ಇಷ್ಟು ಹಣ ಸಿಕ್ಕಿದ್ದು ನಮಗೂ ಅಚ್ಚರಿಯಾಗಿದೆ ಎಂದಿದ್ದಾರೆ.
    ವಿಮಾನ ಅಪಘಾತದಲ್ಲಿ ಮೃತಪಟ್ಟ 47 ಮಂದಿಯ ಗುರುತು ಪತ್ತೆಯಾಗಿದೆ. ಅದರಲ್ಲೂ 43 ಮೃತದೇಹಗಳನ್ನು ಆಯಾ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ.(ಏಜೆನ್ಸೀಸ್​)

    ಏಕಾಏಕಿ ಬಂದು ಪತ್ನಿ ಮೃತಪಟ್ಟಿದ್ದಾಳೆ ಎಂದ ಪತಿ; ಸಾವಿನ ಸುತ್ತ ಹಲವು ಅನುಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts