More

    21.76 ಕೋಟಿ ಸ್ತ್ರೀಯರ ಪ್ರಯಾಣ

    ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
    ರಾಜ್ಯದಲ್ಲಿ ಶಕ್ತಿ ಯೋಜನೆ ಆರಂಭವಾದಾಗಿನಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ಈವರೆಗೆ 21.76 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ.
    ವಾಕರಸಾ ಸಂಸ್ಥೆ ವ್ಯಾಪ್ತಿಗೆ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬಾಗಲಕೋಟೆ ಹಾಗೂ ಬೆಳಗಾವಿ ಸೇರಿ ಒಟ್ಟು 6 ಜಿಲ್ಲೆಗಳು ಬರುತ್ತವೆ. ನ. 11ರಂದು ಯೋಜನೆ ಆರಂಭವಾಗಿದ್ದು, 2023ರ ನವೆಂಬರ್ 10ರವರೆಗೆ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಮಹಿಳೆಯರು ಪ್ರಯಾಣಿಸಿದ ಟಿಕೆಟ್ ಮೊತ್ತ 556.41 ಕೋಟಿ ರೂಪಾಯಿ ಆಗಿದೆ. ಶ್ತಕಿ ಯೋಜನೆಗೂ ಮುನ್ನ ಸಂಸ್ಥೆಯ ಬಸ್‌ಗಳಲ್ಲಿ ನಿತ್ಯ 17 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ಶಕ್ತಿ ಯೋಜನೆ
    ಶುರುವಾದ ಬಳಿಕ ನಿತ್ಯ 26 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.
    50 ಹೊಸ ಬಸ್ ಖರೀದಿ: ಪ್ರಯಾಣಿಕರ ಅನುಕೂಲಕ್ಕಾಗಿ ಸರ್ಕಾರ ಸೆಪ್ಟೆಂಬರ್‌ನಲ್ಲಿ ಸಂಸ್ಥೆಗೆ 50 ಹೊಸ ಬಸ್‌ಗಳನ್ನು ನೀಡಿದೆ. ಇನ್ನೂ 375 ಹೊಸ ಬಸ್‌ಗಳ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. 100 ನಗರ ಸಾರಿಗೆ ಬಸ್ ಖರೀದಿಗೆ ಸರ್ಕಾರ ಒಪ್ಪಿಗೆ ನೀಡಿದೆ.

    ಬೇಡಿಕೆ ಇರುವೆಡೆ ಹೆಚ್ಚು ಬಸ್ ಸೌಲಭ್ಯ
    ಅಂತಾರಾಜ್ಯಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಮಾರ್ಗಗಳನ್ನು ಗುರುತಿಸಿ ಅಲ್ಲಿ 2 ಟ್ರಿಪ್‌ಗಳನ್ನು ಕಡಿತ ಮಾಡಿ, ಜನರ ಬೇಡಿಕೆ ಹೆಚ್ಚಿಗೆ ಇರುವ ಕಡೆ ಆ ಬಸ್‌ಗಳನ್ನು ಓಡಿಸಲಾಗುತ್ತಿದೆ. ಉದಾಹರಣೆಗೆ ರಾಜ್ಯದಿಂದ ಮಹಾರಾಷ್ಟ್ರಕ್ಕೆ ತೆರಳುವ ಎರಡು ಟ್ರಿಪ್ ಕಡಿತ ಮಾಡಲಾಗಿದೆ ಎನ್ನುತ್ತಾರೆ ಸಂಸ್ಥೆಯ ಹಿರಿಯ ಅಧಿಕಾರಿಗಳು.

    ಗುತ್ತಿಗೆ ಆಧಾರದಲ್ಲಿ ಚಾಲಕರ ನೇಮಕ
    ಸೆಪ್ಟೆಂಬರ್‌ನಲ್ಲಿ ಶಿರಸಿ ವಿಭಾಗಕ್ಕೆ 50 ಹಾಗೂ ಚಿಕ್ಕೋಡಿ ವಿಭಾಗಕ್ಕೆ 50 ಚಾಲಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ವಾಕರಸಾ ಸಂಸ್ಥೆಗೆ ಜಿಸಿಸಿ (ಗ್ರಾಸ್ ಕಾಸ್ಟ್ ಕಾಂಟ್ರಾೃಕ್ಟ್ ) ಮಾದರಿಯಲ್ಲಿ ಸರ್ಕಾರ 450 ಇಲೆಕ್ಟ್ರಿಕ್ ಬಸ್‌ಗಳನ್ನು ನೀಡಲಿದೆ. ಖಾಸಗಿ ಕಂಪನಿಗಳು ಬಸ್ ಪೂರೈಸಲಿವೆ. ಬಸ್ ನಿರ್ವಹಣೆ, ಚಾಲಕರ ಪೂರೈಕೆ ಖಾಸಗಿ ಕಂಪನಿ ಹೊಣೆ. ನಿರ್ವಾಹಕರು ವಾಕರಸಾ ಸಂಸ್ಥೆಯವರು. ಕಿಲೋ ಮೀಟರ್ ಸಂಚಾರದ ಆಧಾರದಲ್ಲಿ ವಾಕರಸಾ ಸಂಸ್ಥೆಯು ಖಾಸಗಿ ಕಂಪನಿಗೆ ಹಣ ನೀಡುವ ಯೋಜನೆ ಇದಾಗಿದೆ. ಇದಕ್ಕೆ ಸರ್ಕಾರ ಮಾಸಾಂತ್ಯಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಇದರಿಂದ ಹೊಸ ಬಸ್ ಖರೀದಿಸುವ ಹಣ ಉಳಿತಾಯವಾಗಲಿದೆ ಎನ್ನುತ್ತಾರೆ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಎಚ್. ರಾಮನಗೌಡರ.

    4581 ಬಸ್‌ಗಳ ಸಂಚಾರ
    ಶಕ್ತಿ ಯೋಜನೆ ಬಳಿಕ ಒಟ್ಟು 4,581 ಬಸ್‌ಗಳು 35,784 ಟ್ರಿಪ್‌ಗಳಲ್ಲಿ ಸಂಚರಿಸುತ್ತಿವೆ. ನಿತ್ಯ 26 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಮೊದಲಿಗಿಂತ ಈಗ 900ಕ್ಕೂ ಹೆಚ್ಚು ಟ್ರಿಪ್‌ಗಳಲ್ಲಿ ಬಸ್‌ಗಳು ಸಂಚರಿಸುತ್ತಿವೆ.

    ವಾಕರಸಾ ಸಂಸ್ಥೆ ವ್ಯಾಪ್ತಿಯಲ್ಲಿ 2,000 ಚಾಲಕ ಕಮ್ ನಿರ್ವಾಹಕರ ಹುದ್ದೆ ಭರ್ತಿಗೆ ಸರ್ಕಾರ ಅನುಮತಿ ನೀಡಿದೆ. ನಿರ್ದೇಶಕ ಮಂಡಳಿ ಅನುಮೋದನೆ ನೀಡಿದ ತಕ್ಷಣ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು.
    ಭರತ್ ಎಸ್., ವ್ಯವಸ್ಥಾಪಕ ನಿರ್ದೇಶಕರು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ

    ಪ್ರಯಾಣಿಸಿದ ಮಹಿಳೆಯರ ಸಂಖ್ಯೆ ಮತ್ತು ಮೊತ್ತ
    ತಿಂಗಳು ಮಹಿಳಾ ಪ್ರಯಾಣಿಕರು ಮೊತ್ತ (ಕೋ.ರೂ.ಗಳಲ್ಲಿ)
    ಜೂನ್ 2,54,81,590 65.15
    ಜುಲೈ 4,48,02,107 111.78
    ಆಗಸ್ಟ್ 4,61,14,029 115.42
    ಸೆಪ್ಟ್ಟೆಂಬರ್ 4,42,22,782 112.80
    ಅಕ್ಟೋಬರ್ 4,24,17,448 116.06
    ನವೆಂಬರ್ 1,45,79,341 35.20
    ಒಟ್ಟು 21,76,17,297 556.41

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts