More

    ವರ್ಷವಾದರೂ ಕೋರ್ಟ್‌ಗೆ ಅಲೆಯುತ್ತಿದ್ದಾರೆ ಪಾಕ್ ಪರ ಘೋಷಣೆ ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳು

    ಹುಬ್ಬಳ್ಳಿ: ಪಾಕ್ ಪರ ಘೋಷಣೆ ಕೂಗಿದ ಆರೋಪ ಎದುರಿಸುತ್ತಿರುವ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳು ವಿಚಾರಣೆಗಾಗಿ ಬುಧವಾರ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರಾದರು. ನಗರದ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಗಳಾದ ಕಾಶ್ಮೀರ ಮೂಲದ ಬಾಸಿತ್ ಸೋಫಿ (19), ಅಮೀರ್ ವಾನಿ (21) ಮತ್ತು ತಾಲಿಬ್ ವಾನಿ (19) ಆರೋಪಿಗಳು.

    ಕೋರ್ಟ್ ಸಮನ್ಸ್ ನೀಡಿದ ಹಿನ್ನೆಲೆಯಲ್ಲಿ ಆರೋಪಿಗಳು ವಿಚಾರಣೆಗೆ ಬಂದಿದ್ದರು. ನ್ಯಾಯಾಧೀಶ ಕೆ.ಎನ್. ಗಂಗಾಧರ ಅವರು ಮುಂದಿನ ವಿಚಾರಣೆಯನ್ನು ಮಾರ್ಚ್ 10ಕ್ಕೆ ನಿಗದಿಪಡಿಸಿ ಮುಂದೂಡಿದರು. ಕಾಶ್ಮೀರಿ ವಿದ್ಯಾರ್ಥಿಗಳು ಹಾಜರಾಗುತ್ತಾರೆಂಬ ಕಾರಣದಿಂದ ನ್ಯಾಯಾಲಯ ಆವರಣದಲ್ಲಿ ಭಾರಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.

    ಪಾಕಿಸ್ತಾನ ಜಿಂದಾಬಾದ್ ಎಂದು ದೇಶದ್ರೋಹಿ ಘೋಷಣೆ ಕೂಗಿದ ವಿಡಿಯೋ ಕಳೆದ ವರ್ಷ ವೈರಲ್ ಆಗಿತ್ತು. ಇದರ ವಿರುದ್ಧ ಹಿಂದು ಪರ ಸಂಘಟನೆಗಳಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆದಿದ್ದವು. ಫೆಬ್ರವರಿ 17, 2020ರಂದು ಮೂವರನ್ನು ಬಂಧಿಸಲಾಗಿತ್ತು. ನಂತರ ವಿಚಾರಣೆಗೆಂದು ಆರೋಪಿತರನ್ನು ಹುಬ್ಬಳ್ಳಿ ನ್ಯಾಯಾಲಯಕ್ಕೆ ಕರೆತಂದಾಗ ಕೆಲವರು ಹಲ್ಲೆಗೆ ಮುಂದಾಗಿದ್ದರು.

    ಆ ಹಿನ್ನೆಲೆಯಲ್ಲಿ ಆರೋಪಿಗಳ ಪರ ವಕೀಲರು ಹುಬ್ಬಳ್ಳಿ ಬದಲು ಬೆಂಗಳೂರಲ್ಲಿ ವಾಸ್ತವ್ಯಕ್ಕೆ ಅನುಮತಿ ಕೋರಿದ್ದರು. ಮೂವರೂ ಆರೋಪಿಗಳು ಸದ್ಯ ಬೆಂಗಳೂರಲ್ಲಿ ವಾಸವಿದ್ದಾರೆ. ಇದೇ ಪ್ರಕರಣದ ದೋಷಾರೋಪಣೆ ಪಟ್ಟಿ ಸಲ್ಲಿಕೆ ವಿಳಂಬವಾಗಿದ್ದರಿಂದ ಆರೋಪಿಗಳಿಗೆ ಸಲೀಸಾಗಿ ಜಾಮೀನು ದೊರೆತಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.

    ಸ್ಯಾನಿಟೈಸರ್​ನ್ನು ಗಟಗಟನೆ ಕುಡಿದ ಅಧಿಕಾರಿ; ಅಯ್ಯಯ್ಯೋ ಹಾಗೆ ಮಾಡಬೇಡಿ ಎಂದ ಸಹೋದ್ಯೋಗಿಗಳು

    ಮಕ್ಕಳಾಗಲಿ ಎಂದು ವಿಶೇಷ ಪೂಜೆ ಮಾಡಲಿಕ್ಕೆ ದೇವಸ್ಥಾನಗಳ ಮೂರ್ತಿಗಳನ್ನು ಕದ್ದ ದಂಪತಿ!; ಗಂಡ ಸಿಕ್ಕಿಬಿದ್ದರೂ ಹೆಂಡತಿ ಸಿಕ್ಕಿಲ್ಲ..

    ಮಹಿಳೆಯರ ಚೇಂಜಿಂಗ್​ ರೂಂನ ಸೀಲಿಂಗ್​ನಲ್ಲಿ ಇಣುಕುತ್ತಿದ್ದವ ದುಪ್ಪೆಂದು ಬಿದ್ದ!

    ‘ಎಂ’ ಅಕ್ಷರದವರನ್ನು ಟೀಕಿಸೋ ಭರದಲ್ಲಿ ಕಾಲ ಮೇಲೆ ಚಪ್ಪಡಿ ಹಾಕಿಕೊಂಡ ರಾಹುಲ್‌ಗಾಂಧಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts