More

    ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

    ಹುಣಸಗಿ: ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಸವಿತಾ ಸಮಾಜ ವಿವಿದೋದ್ಧೇಶ ಸೇವಾ ಸಂಘ ತಾಲೂಕು ಘಟಕದಿಂದ ತಹಸಿಲ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಒತ್ತಾಯಿಸಲಾಯಿತು.

    ಸಂಘದ ತಾಲೂಕು ಅಧ್ಯಕ್ಷ ಸಂಗಪ್ಪ ಬಾಚಿಮಟ್ಟಿ ಮಾತನಾಡಿ, ಅನ್ಯರಿಗೆ ಕ್ಷೌರಿಕ ವೃತ್ತಿಗೆ ನೀಡುವ ಪರವಾನಿಗೆ ರದ್ದುಗೊಳಿಸಬೇಕು. ಐದುವರ್ಷ ಸ್ಥಳೀಯವಾಗಿ ವಾಸ ಮಾಡಿದ್ದವರಿಗೆ ಮಾತ್ರ ವಾಸಸ್ಥಳ ಪ್ರಮಾಣ ಪತ್ರ ಕಡ್ಡಾಯಗೊಳಿಸಿ ಅನುಮತಿ ನೀಡಬೇಕು. ರಾಜ್ಯದ ನಾಲ್ಕು ಭಾಗಗಳಲ್ಲಿ ಕ್ಷೌರಿಕ ತರಬೇತಿ ಕೇಂದ್ರ ಮತ್ತು ನಾದಸ್ವರ ಡೋಲು ನುಡಿಸುವ ತರಬೇತಿ ಶಾಲೆ ಸ್ಥಾಪಿಸಬೇಕು. ಈಗಾಗಲೇ ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಕ್ಷೌರ ಮಾಡಲು ಸವಿತಾ ಸಮುದಾಯದರನ್ನೇ ನೇಮಕ ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

    ಬಸವರಾಜ ಚನ್ನೂರು, ಅಶೋಕ ಮಾಳೂರ, ಚಂದ್ರಶೇಖರ ನಗರಗುಂಡ, ದೇವಪ್ಪ ಯಂಕಪೆಲ್ಲಿ, ಶರಣಪ್ಪ ಹಡಪದ, ಶರಣಪ್ಪ ಕಲ್ಲದೇವನಹಳ್ಳಿ, ಚಂದ್ರಶೇಖರ ವಠಾರ, ಬಸ್ಸು ಗುಳಬಾಳ, ಯಲ್ಲಪ್ಪ ಸಿಂದಿಗೇರಿ, ಸಂತೋಷ ಕಡದರಾಳ ಇತರರಿದ್ದರು. ಈ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್‌ಗೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts