More

    ಮೌಲ್ಯಗಳ ಜತೆ ಶಿಕ್ಷಣದ ಮಟ್ಟ ಸುಧಾರಿಸಿ

    ಹುಣಸಗಿ: ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಮಟ್ಟ ಸುಧಾರಿಸಲು ಶಿಕ್ಷಕರ ಮೇಲೆ ಗುರುತರ ಜವಾಬ್ದಾರಿ ಇದ್ದು, ಅದನ್ನು ಎಲ್ಲ ಶಿಕ್ಷಕರು ಚಾಚು ತಪ್ಪದೇ ನಿಭಾಯಿಸಿಕೊಂಡು ಹೋಗಬೇಕೆಂದು ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಶಾಂತಗೌಡ ಪಾಟೀಲ್ ಹೇಳಿದರು.

    ಪಟ್ಟಣದ ಖಾಸಗಿ ಸಭಾಂಗಣದಲ್ಲಿ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ೨೦೦೨ರಿಂದ ೨೦೧೦ ರಲ್ಲಿ ನೇಮಕವಾದ ಶಿಕ್ಷಕರನ್ನು ಸಿಇಟಿ ಮೂಲಕ ನಿಯೋಜನೆ ಮಾಡಿದ್ದರಿಂದ ಪ್ರತಿಭೆಗಳಿಗೆ ಅವಕಾಶ ಸಿಗುವಂತಾಯಿತು ಎಂದು ಹೇಳಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಲಭ್ಯವಿರುವ ಶಿಕ್ಷಕರೂ ಹೆಚ್ಚಿನ ಕಾಳಜಿ ವಹಿಸಿ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಬೇಕೆಂದು ಹೇಳಿದರು.

    ಸಂಘದ ಕೋಶಾಧ್ಯಕ್ಷ ಮಂಜುನಾಥ ನಾಯಕ ಪ್ರಾಸ್ತಾವಿಕ ಮಾತನಾಡಿದರು.

    ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಯ್ಯ ಸಂಜೀವಿನಿ, ಬಸಲಿಂಗಪ್ಪ ಮಳ್ಳಳ್ಳಿ, ಬಸಮ್ಮ ಪಾಟೀಲ್, ಸಿದ್ದನಗೌಡ ಗೂಗಲ್, ಚನ್ನಬಸಪ್ಪ ಗೋಡಿಗರ, ಖಾಜಾ ಮೈನೂದ್ದೀನ್ ವಡಗೇರಾ, ಮಹಿಪಾಲರಡ್ಡಿ ಗುರುಮಠಕಲ್, ಚನ್ನಪ್ಪ ಕಲಮನಿ, ಭೀಮಣ್ಣ ನಾಯ್ಕೋಡಿ ಇತರರಿದ್ದರು.
    ಶಿಕ್ಷಕ ಸಂಗಮೇಶ ನಾಗಲೀಕ ನಿರೂಪಣೆ ಮಾಡಿ ವಂದಿಸಿದರು. ನಿವೃತ್ತ ಉಪನಿರ್ದೇಶಕ ಶಾಂತಗೌಡ ಪಾಟೀಲ್ ಹಾಗೂ ವಿವಿಧ ತಾಲೂಕುಗಳ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts