More

    FACT CHECK: ಹಾದಿ ತಪ್ಪಿರುವ ಸೂರತ್ ಶ್ರಮಿಕ್​ ರೈಲು, ಸಾವು: ಈ ವರದಿಯಲ್ಲಿ ಸತ್ಯಾಂಶ ಇದೆಯೆ?

    ನವದೆಹಲಿ: ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸುವ ನಿಟ್ಟಿನಲ್ಲಿ ಮೇ 1ರಿಂದಲೇ ಅನೇಕ ಊರುಗಳಿಗೆ ಶ್ರಮಿಕ್​ ರೈಲು ಸಂಚಾರವನ್ನು ಕೇಂದ್ರ ಸರ್ಕಾರ ಆರಂಭಿಸಿದೆ.

    ಇದು ಆರಂಭವಾದಾಗಿನಿಂದಲೂ ಇದರ ವಿರುದ್ಧ ಕೆಲವು ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಲೇ ಇದೆ. ಕೆಲವೊಂದು ರೈಲುಗಳು ಹಾದಿ ತಪ್ಪಿ ಇನ್ನಾವುದೋ ಊರಿಗೆ ಹೋಗಿರುವುದು, ವಲಸೆ ಕಾರ್ಮಿಕರು ರೈಲು ಹಾದಿ ತಪ್ಪಿರುವ ಹಿನ್ನೆಲೆಯಲ್ಲಿ ಮೃತಪಟ್ಟಿರುವ ಬಗ್ಗೆ ವರದಿಗಳಾಗಿವೆ.

    ಸೂರತ್​- ಸಿವಾನ್​ ರೈಲಿನ ಬಗ್ಗೆ ಸ್ಪಷ್ಟನೆ ನೀಡಿರುವ ರೈಲ್ವೆ ಇಲಾಖೆ, ಕೆಲವು ಮಾಧ್ಯಮಗಳಲ್ಲಿ ಬಿತ್ತರಗೊಂಡಿರುವ ಮಾಹಿತಿಗಳು ಸುಳ್ಳು ಎಂದು ಹೇಳಿದೆ. ಮೇ 16ರಂದು ಸೂರತ್​ನಿಂದ ಹೊರಟ ರೈಲು 9 ದಿನಗಳ ನಂತರ ಸಿವಾನ್​ ತಲುಪಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ರೈಲ್ವೆ ಅಧಿಕಾರಿಗಳು, ಇದು ಸುಳ್ಳು ಮಾಹಿತಿ. ಪತ್ರಿಕೆಯಲ್ಲಿ ವರದಿಯಾಗಿರುವಂತೆ ಮೇ 16ರಂದು ಹೊರಟ ರೈಲು 25ರಂದು ತಲುಪಿದ್ದಲ್ಲ, ಬದಲಿಗೆ ಮೇ 25ರಂದು ತಲುಪಿರುವ ರೈಲು ಹೊರಟಿರುವುದು ಮೇ 23ರಂದು ಎಂದಿದ್ದಾರೆ.

    ಇದನ್ನೂ ಓದಿ: ಆರೋಗ್ಯವಾಗಿದ್ದ ಮದುಮಗಳಿಗೆ ವೈದ್ಯರು ಕೊಟ್ಟರು ಕರೊನಾ ಪಾಸಿಟಿವ್ ರಿಪೋರ್ಟ್​​: ಮುಂದೇನಾಯ್ತು?

    ಮಾಧ್ಯಮಗಳಲ್ಲಿ ವರದಿಯಾದಂತೆ ಮೇ 16ರಂದು ಯಾವುದೇ ರೈಲು ಸೂರತ್​ನಿಂದ ಸಿವಾನ್​ಗೆ ಹೊರಟೇ ಇಲ್ಲ. ಮೇ 23ರಂದು ಹೊರಟಿರುವ ರೈಲು ಎರಡು ದಿನಗಳಲ್ಲಿಯೇ ನಿಗದಿತ ಸ್ಥಾನವನ್ನು ತಲುಪಿದೆ ಎಂದು ವಿವರಿಸಿದ್ದಾರೆ. “ರೈಲು ಸಂಖ್ಯೆ. 09339 ಮೇ 23 ರಂದು 0530 ಗಂಟೆಗೆ ಸೂರತ್‌ನಿಂದ ಹೊರಟು ಮೇ 25 ರಂದು 0220 ಗಂಟೆಗೆ ಸಿವಾನ್‌ಗೆ ತಲುಪಿದೆ. ರೈಲು ಸಂಖ್ಯೆ. 09439 ಮೇ 2 ರಂದು 2300 ಗಂಟೆಗೆ ಸೂರತ್‌ನಿಂದ ನಿರ್ಗಮಿಸಿ 1655 ಗಂಟೆಗೆ ಸಿವಾನ್‌ ತಲುಪಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.

    ಅಷ್ಟೇ ಅಲ್ಲದೇ, ರೈಲು ವಿಳಂಬವಾದ ಕಾರಣದಿಂದಲೇ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ವರದಿ ಕೂಡ ಸತ್ಯಕ್ಕೆ ದೂರವಾಗಿರುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಉಷ್ಣತೆ, ನೀರಿನ ಕೊರತೆ ಮತ್ತು ಆಹಾರದ ಕೊರತೆಯಿಂದ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಅಧಿಕಾರಿಗಳು ಇದು ತಪ್ಪಾದ ಮಾಹಿತಿ ಎಂದಿದ್ದಾರೆ.

    ಮೇ 21 ರಂದು ಮುಂಬೈನ ಬಾಂದ್ರಾದಿಂದ ಕತಿಹಾರ್‌ಗೆ ಶ್ರಮಿಕ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅನ್ವರ್​ ಎಂಬ ವಲಸೆ ಕಾರ್ಮಿಕ ಮೃತಪಟ್ಟಿರುವುದು ರೈಲು ವಿಳಂಬವಾಗಿರುವ ಕಾರಣದಿಂದ ಅಲ್ಲ. ಬದಲಿಗೆ ಅವರು ನೀರು ಖರೀದಿಸಲು ರೈಲಿನಿಂದ ಕೆಳಕ್ಕೆ ಇಳಿದಾಗ ಬಾರೌನಿ ರೈಲ್ವೆ ನಿಲ್ದಾಣದಲ್ಲಿ ನೀರಿನ ಪೈಪ್‌ಲೈನ್ ಅಡಿಯಲ್ಲಿ ಬಿದ್ದುಬಿಟ್ಟಿದ್ದಾರೆ. ಕೂಡಲೇ ಪ್ರಜ್ಞೆ ತಪ್ಪಿದ್ದರಿಂದ ವೈದ್ಯರು ಬರುವ ಮುನ್ನವೇ ಮೃತಪಟ್ಟಿದ್ದಾರೆ. ಇವರ ಸಾವಿನ ಬಗ್ಗೆ ಇನ್ನೂ ವರದಿ ಬರಬೇಕಿದೆಯಷ್ಟೇ ಎಂದಿದ್ದಾರೆ. ಪಾಲ್ಘರ್-ದಾನಪುರ ಶ್ರಮಿಕ್​ ಎಕ್ಸ್‌ಪ್ರೆಸ್‌ನಲ್ಲಿ ಮೃತಪಟ್ಟ ನಾಸಿರ್ ಖಾನ್ ಅವರ ಬಗ್ಗೆಯೂ ಮಾಹಿತಿ ಬರಬೇಕಿದೆ.

    ಇದನ್ನೂ ಓದಿ: ಲಿಂಗಸಮಾನತೆ ಪ್ರತಿಪಾದನೆಗೆ ವಿಶ್ವಸಂಸ್ಥೆ ಅವಾರ್ಡ್​: ಪ್ರಥಮ ಭಾರತೀಯರಾಗಿ ಮೇಜರ್​ ಸುಮನ್

    ಇಷ್ಟೇ ಅಲ್ಲದೇ, ಮುಜಾಫರ್​ದಿದ ಬೇಟಿಯಾಕ್ಕೆ ಹೊರಟ ರೈಲನ್ನು ಹತ್ತುವಾಗ 4 ವರ್ಷದ ಮೊಹಮ್ಮದ್ ಇರ್ಷಾದ್ ಮೃತಪಟ್ಟಿರುವುದಕ್ಕೆ ರೈಲ್ವೆ ಇಲಾಖೆಯೇ ಕಾರಣ ಎಂಬಂತೆ ಬಿಂಬಿಸಲಾಗಿದೆ. ಆದರೆ ಮಗು ಮೊದಲಿನಿಂದಲೇ ಅನಾರೋಗ್ಯದಿಂದ ಬಳಲುತ್ತಿತ್ತು. ದೆಹಲಿಯಲ್ಲಿ ಚಿಕಿತ್ಸೆ ಪಡೆದು ಮಗುವಿನ ಪಾಲಕರು ಹಿಂದಿರುಗುತ್ತಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ ನಂತರವೇ ಆತನ ಸಾವಿಗೆ ಕಾರಣ ತಿಳಿಯುತ್ತದೆ ಎಂದಿದ್ದಾರೆ.

    ಸುಂದರಿ ಸಿಕ್ಕಳೆಂದು ಜತೆಗಿದ್ದವಳ ದೇಹ ತುಂಡರಿಸಿ ಸೂಟ್​ಕೇಸ್​ನಲ್ಲಿ ತುಂಬಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts