More

    ಎಷ್ಟೇ ಶಕ್ತಿಶಾಲಿಯಾದರೂ, ವಂಚಕರನ್ನು ಸರ್ಕಾರ ಬಿಡುವುದಿಲ್ಲ: ಪ್ರಧಾನಿ ಮೋದಿ

    ನವದೆಹಲಿ: ದೇಶಕ್ಕೆ ವಂಚನೆ ಮಾಡುವವರು ಅಥವಾ ಬಡವರನ್ನು ದೋಚುವವರು, ಎಷ್ಟೇ ಶಕ್ತಿಶಾಲಿಗಳಾಗಿದ್ದರೂ ಅವರನ್ನು ಸರ್ಕಾರ ತಪ್ಪಿಸಿಕೊಳ್ಳಲು ಬಿಡುವುದಿಲ್ಲವೆಂದು ಈಗ ಜನರಲ್ಲಿ ನಂಬಿಕೆ ಮೂಡುತ್ತಿದೆ. ಯಾವುದೇ ಮಧ್ಯವರ್ತಿಗಳು ಮತ್ತು ಭ್ರಷ್ಟಾಚಾರವಿಲ್ಲದೆ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು ಎಂದೂ ಈಗ ರಾಷ್ಟ್ರ ವಿಶ್ವಾಸ ಗಳಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

    ಇಂದು ನಡೆದ ಕೇಂದ್ರದ ತನಿಖಾ ದಳಗಳಾದ ಸೆಂಟ್ರಲ್​ ವಿಜಿಲೆನ್ಸ್​ ಕಮಿಷನ್(ಸಿವಿಸಿ) ಮತ್ತು ಸೆಂಟ್ರಲ್​ ಬ್ಯೂರೋ ಆಫ್​ ಇನ್​ವೆಸ್ಟಿಗೇಷನ್​(ಸಿಬಿಐ)ಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ಕಳೆದ 6-7 ವರ್ಷಗಳ ಪ್ರಯತ್ನಗಳಿಂದ ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ಹತೋಟಿಗೆ ತರಬಹುದೆಂಬ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

    ಇದನ್ನೂ ಓದಿ: ಮತ್ತೊಬ್ಬ ಎಐಎಡಿಎಂಕೆ ನಾಯಕನ ವಿರುದ್ಧ ಅಸಮಾನ ಆಸ್ತಿ ಪ್ರಕರಣ

    “ಚಿಕ್ಕದಾಗಲಿ ದೊಡ್ಡದಾಗಲಿ, ಭ್ರಷ್ಟಾಚಾರವು ಯಾರದ್ದಾದರೂ ಹಕ್ಕನ್ನು ಕಸಿದುಕೊಳ್ಳುತ್ತದೆ. ಅದು ದೇಶದ ಸಾಮಾನ್ಯ ನಾಗರೀಕನನ್ನು ತನ್ನ ಹಕ್ಕಿನಿಂದ ವಂಚಿತಗೊಳಿಸುತ್ತದೆ ಮತ್ತು ದೇಶದ ಪ್ರಗತಿಗೆ ಹಿನ್ನಡೆ ಉಂಟುಮಾಡುತ್ತದೆ. ದೇಶಕ್ಕೆ ವಂಚನೆ ಮಾಡುವವರನ್ನೂ, ಬಡವರನ್ನು ಲೂಟಿ ಮಾಡುವವರನ್ನೂ, ಅವರು ಎಷ್ಟೇ ಶಕ್ತಿಶಾಲಿಯಾಗಿರಲಿ ಅಥವಾ ಜಗತ್ತಿನಲ್ಲಿ-ದೇಶದಲ್ಲಿ ಎಲ್ಲೇ ಇರಲಿ, ಅವರಿಗೆ ಈಗ ಕರುಣೆ ತೋರಿಸಲಾಗುತ್ತಿಲ್ಲ, ಸರ್ಕಾರ ಅವರನ್ನು ಬಿಡುತ್ತಿಲ್ಲ ಎಂದು ದೇಶ ಈಗ ನಂಬುತ್ತಿದೆ” ಎಂದರು.

    ಸರ್ಕಾರಿ ಯೋಜನೆಗಳನ್ನು ಮಧ್ಯವರ್ತಿಗಳು ಮತ್ತು ಭ್ರಷ್ಟಾಚಾರವಿಲ್ಲದೆ ಅನುಷ್ಠಾನಗೊಳಿಸಲಾಗುತ್ತಿದೆ. ಹೊಸ ಭಾರತವು ಭ್ರಷ್ಟಾಚಾರವನ್ನು ವ್ಯವಸ್ಥೆಯ ಭಾಗವೆಂದು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲ. ಅವರಿಗೆ ಪಾರದರ್ಶಕ ವ್ಯವಸ್ಥೆ, ದಕ್ಷ ಪ್ರಕ್ರಿಯೆ ಮತ್ತು ಸುಗಮ ಆಡಳಿತ ಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. (ಏಜೆನ್ಸೀಸ್)

    ಶಾರುಖ್​ ಪುತ್ರ ಆರ್ಯನ್​ ಖಾನ್​ಗೆ ಜಾಮೀನಿಲ್ಲ

    ಮತ್ತೆ ಏರಿತು ಪೆಟ್ರೋಲ್​​ ಬೆಲೆ: ಪ್ರಮುಖ ನಗರಗಳ ಇಂದಿನ ಬೆಲೆ ಹೀಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts