More

    ರೈಲಿನಲ್ಲಿ ಅಥವಾ ನಿಲ್ದಾಣದಲ್ಲಿ ಆಹಾರವನ್ನು ಎಂಆರ್​ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೆ ಎಲ್ಲಿ ದೂರು ನೀಡಬೇಕು?

    ನವದೆಹಲಿ: ದೇಶದಲ್ಲಿ ಪ್ರತಿಯೊಂದು ವಸ್ತುವಿಗೆ ಬೆಲೆ ನಿಗದಿಯಾಗಿದೆ. ಒಬ್ಬ ವ್ಯಕ್ತಿಯು ಯಾವುದೇ ಸರಕುಗಳನ್ನು ಗರಿಷ್ಠ ಚಿಲ್ಲರೆ ಬೆಲೆ (MRP) ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅದು ಕಾನೂನು ರೀತಿ ಅಪರಾಧವಾಗಿದೆ. ಸಾಮಾನ್ಯವಾಗಿ ಪ್ರಯಾಣಿಕರು ರೈಲು ನಿಲ್ದಾಣದಲ್ಲಿ ರೈಲು ಹತ್ತಲು ಆತುರಾತುರದಲ್ಲಿರುತ್ತಾರೆ. ಇದರ ಲಾಭವನ್ನು ಪಡೆಯುವ ಅಲ್ಲಿಯ ಸರಕುಗಳ ಮಾರಾಟಗಾರರು ಕೆಲವೊಮ್ಮೆ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಾರೆ. 

    ಹೌದು, ಪ್ಲಾಟ್‌ಫಾರ್ಮ್‌ನಲ್ಲಿರುವ ಆಹಾರ ಮಳಿಗೆಗಳು ಅಥವಾ ತಿನಿಸುಗಳು MRP ಗಿಂತ ಹೆಚ್ಚಿನ ಬೆಲೆಗೆ ಸರಕುಗಳನ್ನು ಮಾರಾಟ ಮಾಡುತ್ತಿವೆ ಎಂದು ಪ್ರಯಾಣಿಕರು ಸಾಮಾನ್ಯವಾಗಿ ರೈಲ್ವೆ ನಿಲ್ದಾಣಗಳು ಅಥವಾ ರೈಲುಗಳಲ್ಲಿ ದೂರುತ್ತಾರೆ. ಆಗ ರೈಲು ಅಥವಾ ನಿಲ್ದಾಣದಲ್ಲಿ ಯಾರಾದರೂ MRP ಗಿಂತ ಹೆಚ್ಚು ಬೆಲೆಯಲ್ಲಿ ಸರಕುಗಳನ್ನು ಮಾರಾಟ ಮಾಡಿದರೆ ನೀವು ಎಲ್ಲಿ ಮತ್ತು ಹೇಗೆ ದೂರು ನೀಡಬಹುದು ಎಂಬುದನ್ನು ಇಂದು ಇಲ್ಲಿ ತಿಳಿಸಲಾಗಿದೆ. ಆಗ ನೀವು ದೂರು ನೀಡಿದ ನಂತರ ತಕ್ಷಣ ಕ್ರಮ ತೆಗೆದುಕೊಳ್ಳಲಾಗುತ್ತದೆ.

    ಎಲ್ಲಿ ಮತ್ತು ಹೇಗೆ ದೂರು ನೀಡಬೇಕು? 
    ಭಾರತೀಯ ರೈಲ್ವೆಯು ತಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಪ್ರಯಾಣಿಕರಿಗೆ ಸಹಾಯವಾಣಿ ಸಂಖ್ಯೆ 139 ಅನ್ನು ನೀಡಿದೆ. ಇದಲ್ಲದೇ ಪ್ರಯಾಣಿಕರು ತಮ್ಮ ಫೋನ್ ನಲ್ಲಿ RailMadad ಎಂಬ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ದೂರು ನೀಡಬಹುದು. ದೂರುಗಳ ಬಗ್ಗೆ ತಡವಾಗಿ ಕ್ರಮಕೈಗೊಂಡರೇ ಪ್ರಯೋಜನವೇನು ಎಂದು ನೀವು ಆಗಾಗ ಯೋಚಿಸಬಹುದು. ಆದರೆ, ರೈಲ್ ಮದದ್ ಅಥವಾ 139 ಸಹಾಯವಾಣಿ ಸಂಖ್ಯೆಗೆ ಇದು ಅನ್ವಯಿಸುವುದಿಲ್ಲ. ಇಲ್ಲಿ ದೂರು ನೀಡಿದ ಮೇಲೆ ವ್ಯವಸ್ಥಿತ ಕ್ರಮ ಕೈಗೊಂಡು ಪರಿಹಾರ ಸಿಗುತ್ತದೆ.
    ಈ ಅಪ್ಲಿಕೇಶನ್ ಅಥವಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ನಿಮ್ಮ ದೂರನ್ನು ನೀವು ನೋಂದಾಯಿಸಿಕೊಳ್ಳಬಹುದು ಮತ್ತು ಕೆಲವೇ ನಿಮಿಷಗಳಲ್ಲಿ, ನಿಮ್ಮ ದೂರಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು. 

    ಈ ವಿಷಯಗಳನ್ನು ನೆನಪಿನಲ್ಲಿಡಿ
    ನೀವು ದೂರು ನೀಡಲು ಹೋದಾಗ, ನೀವು ಕೆಲವು ಪ್ರಮುಖ ವಿವರಗಳನ್ನು ತಿಳಿದಿರಬೇಕು. ಉದಾಹರಣೆಗೆ, ನೀವು ಯಾರ ವಿರುದ್ಧ ದೂರು ಸಲ್ಲಿಸಲಿರುವಿರಿ ಅವರ ಆಹಾರ ಮಳಿಗೆಯ ಹೆಸರು, ಆ ಅಂಗಡಿಯ ಮಾಲೀಕರ ಹೆಸರು (ಸಮವಸ್ತ್ರದ ಮೇಲೆ ಬರೆದಿದ್ದರೆ), ನಿಲ್ದಾಣದ ಹೆಸರು, ಪ್ಲಾಟ್‌ಫಾರ್ಮ್ ಸಂಖ್ಯೆ, ಆಹಾರ ಮಳಿಗೆ ಸಂಖ್ಯೆ (ಇದ್ದರೆ ಬರೆಯಲಾಗಿದೆ). ಸಂಪೂರ್ಣ ಮತ್ತು ಸೂಕ್ತ ಮಾಹಿತಿ ನೀಡುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.

    ಹೃದಯವಿದ್ರಾವಕ…ಉತ್ತರಕಾಶಿ ಸುರಂಗದಿಂದ ಮಗ ಹೊರಬಂದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts