More

    ವಾಹನ ಚಲಾಯಿಸುವ ವೇಳೆ ಹೈ ಬೀಮ್​ ಬೆಳಕು ನಿಮಗೆ ತೊಂದರೆ ನೀಡುತ್ತಿದೆಯೆ? ನಿಮಗಾಗಿ ಕೆಲವು ಟಿಪ್ಸ್​ ಇಲ್ಲಿದೆ…

    ಬೆಂಗಳೂರು: ಹ್ಯಾಚ್‌ಬ್ಯಾಕ್‌, ಸೆಡಾನ್‌, ಮಿಡ್-ಕಾಂಪ್ಯಾಕ್ಟ್ ಎಸ್‌ಯುವಿಗಳಂತಹ ವಾಹನಗಳ ಎತ್ತರ ಬಸ್​, ಟ್ರಕ್​ನಂತಹ ವಾಹನಗಳಿಗಿಂತ ಕಡಿಮೆ ಕಾರಣ ರಾತ್ರಿಯಲ್ಲಿ ಚಾಲನೆ ಮಾಡುವಾಗ ಹೈ ಬೀಮ್ ಬೆಳಕಿಗೆ ಗುರಿಯಾಗುತ್ತವೆ. ಅನೇಕ ಸಲ ಹೈ ಬೀಮ್‌ ಬೆಳಕಿನ ಕಾರಣ ಅಪಘಾತಗಳೂ ಸಂಭವಿಸಿವೆ. ಹೈ ಬೀಮ್​ ಬೆಳಕನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ತಿಳಿಯಲು ಪೂರ್ತಿ ಓದಿ…

    ಡಿಪ್ಪರ್​ ಬಳಸಿ ಎದುರಿನವರಿಗೆ ಸಂದೇಶ ಕಳಿಸಿ:

    ನೀವು ರಾತ್ರಿಯಲ್ಲಿ ಕಾರು ಓಡಿಸುತ್ತಿದ್ದರೆ, ಡಿಪ್ಪರ್​ಅನ್ನು ಬಳಸಲೇಬೇಕು. ಡಿಪ್ಪರ್ ಮುಂದಿನಿಂದ ಬರುತ್ತಿರುವ ವಾಹನ ಚಾಲಕನಿಗೆ ಎಚ್ಚರಿಸಲು ಇರುವ ಏಕೈಕ ಗ್ಯಾಜೆಟ್. ಮುಂಭಾಗದಿಂದ ಬರುವ ವಾಹನದ ಬೆಳಕು ನೇರವಾಗಿ ನಿಮ್ಮ ಮೇಲೆ ಬಿದ್ದರೆ, ನೀವು ತಕ್ಷಣ ಡಿಪ್ಪರ್ ಅನ್ನು ಬಳಸಬೇಕು. ಇದರಿಂದ ಇನ್ನೊಂದು ಬದಿಯಿಂದ ಬರುವ ವಾಹನದ ಚಾಲಕನು ತನ್ನ ಹೈ ಬೀಮ್ ಅನ್ನು ಕಡಿಮೆ ಮಾಡುತ್ತಾನೆ. ಇದರಿಂದ ನಿಮ್ಮ ವಾಹನವು ಯಾವುದೇ ತೊಂದರೆಯಿಲ್ಲದೆ ಮುಂದೆ ಚಲಿಸಬಹುದು.

    ರಾಂಗ್​ ಸೈಡಲ್ಲಿ ವಾಹನ ಚಲಾಯಿಸದಿರಿ:

    ರಾಂಗ್​ ಸೈಡಲ್ಲಿ ಚಾಲನೆ ಮಾಡುವುದು ಅಪಾಯವನ್ನು ಆಹ್ವಾನಿಸುತ್ತದೆ. ಇದಲ್ಲದೇ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಭಾರಿ ಮೊತ್ತದ ಚಲನ್ ಗಳನ್ನೂ ಕಟ್ಟಬೇಕಾಗುತ್ತದೆ. ರಾತ್ರಿಯಲ್ಲಿ ತಪ್ಪಾದ ಲೇನ್‌ನಲ್ಲಿ ಚಾಲನೆ ಮಾಡುವುದು ಅಪಾಯ ಆಹ್ವಾನ ಮಾಡಿದಂತೆ. ಏಕೆಂದರೆ ಮುಂಭಾಗದಿಂದ ಬರುವ ವಾಹನವು ನಿಮ್ಮ ವಾಹನಕ್ಕಿಂತ ದೊಡ್ಡದಾಗಿದ್ದರೆ, ಅದರ ಹೈ-ಬೀಮ್ ಬೆಳಕು ನೇರವಾಗಿ ನಿಮ್ಮ ಕಣ್ಣುಗಳ ಮೇಲೆ ಬೀಳುತ್ತದೆ, ಇದರಿಂದಾಗಿ ನೀವು ಕೆಲವು ಕ್ಷಣಗಳ ಕಾಲ ವಿಚಲಿತರಾಗಬಹುದು. ಒಂದೇ ಸೆಕೆಂಡಿನ ಅಜಾಗ್ರತೆಯಿಂದ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts