More

    ಹೀಗೆ ಮಾಡಿದರೆ ಕರೊನಾ ಕಾಲರ್​ ಟ್ಯೂನ್​ ಕೇಳಿಸುವುದಿಲ್ಲ!

    ಬೆಂಗಳೂರು: ಕರೊನಾ ವೈರಸ್​ ಭಾರತೀಯರಿಗೆ ಎಷ್ಟರ ಮಟ್ಟಿಗೆ ಸಮಸ್ಯೆಯಾಗಿ ಕಾಡುತ್ತಿದೆಯೋ ಅದಕ್ಕಿಂತ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದು ಕರೊನಾ ಕಾಲರ್​ ಟ್ಯೂನ್​. ಅದರಿಂದ ತಪ್ಪಿಸಿಕೊಳ್ಳುವುದಕ್ಕೆ ಕಾಯುತ್ತಿರುವವರಿಗೆ ಇಲ್ಲಿದೆ ಒಂದು ಮಾರ್ಗ.

    ಜಿಯೋ, ಏರ್​ಟೆಲ್​, ಬಿಎಸ್​ಎನ್​ಎಲ್​ ಟೆಲಿಕಾಂ ಸಂಸ್ಥೆಗಳು ತಮ್ಮ ಗ್ರಾಹಕರ ಕಾಲರ್​ ಟ್ಯೂನ್​ನಲ್ಲಿ ಜನರಿಗೆ ಕರೊನಾ ಬಗ್ಗೆ ಮುನ್ನೆಚ್ಚರಿಕೆಯನ್ನು ನೀಡಲಾರಂಭಿಸಿವೆ. ಯಾರಿಗಾದರೂ ತುರ್ತಾಗಿ ಕರೆ ಮಾಡಬೇಕೆಂದರೆ ನೀವು ಈ ಕಾಲರ್​ ಟ್ಯೂನ್​ನಿಂದಾಗಿ ಎರಡು ನಿಮಿಷ ಕಾಯಲೇಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಕಾಲರ್​ ಟ್ಯೂನ್​ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿದ್ದು, ಇದೀಗ ಅದರಿಂದ ಪಾರಾಗುವುದಕ್ಕೂ ಒಂದು ಮಾರ್ಗವನ್ನು ಹುಡುಕಲಾಗಿದೆ.

    ಯಾರಿಗಾದರೂ ಕರೆ ಮಾಡುವಾಗ ಕರೊನಾ ಕಾಲರ್​ ಟ್ಯೂನ್​ ಬರಲಾರಂಭಿಸಿದರೆ, ತಕ್ಷಣ ನಿಮ್ಮ ಮೊಬೈಲ್​ನಲ್ಲಿ ಕೀಪ್ಯಾಡ್​ ತೆರೆಯಿರಿ. ಕೀಪ್ಯಾಡ್​ನಲ್ಲಿ 1ನ್ನು ಒತ್ತುವುದರಿಂದ ನಿಮ್ಮ ಕರೊನಾ ಕಾಲರ್​ ಟ್ಯೂನ್​ ಸ್ಕಿಪ್​ ಆಗಿ ಕರೆ ಹೋಗುತ್ತದೆ. ಆದರೆ ಎಲ್ಲೋ ಕೆಲವರಿಗೆ ಈ ಸೌಲಭ್ಯ ಸಿಗುತ್ತಿಲ್ಲ ಎನ್ನುವ ದೂರುಗಳಿವೆ.

    ಕರೊನಾ ಕಾಲರ್​ ಟ್ಯೂನ್​ ಕುರಿತಾಗಿ ಸಾಕಷ್ಟು ದೂರುಗಳು ಕೇಳಿಬರುತ್ತಿದ್ದು, ಕೆಲವು ಗ್ರಾಹಕರಿಗೆ ಈ ಸಮಸ್ಯೆ ಉಂಟಾಗಿಲ್ಲ ಎನ್ನುವುದು ಸಹ ಕೇಳಿ ಬಂದಿದೆ.

    ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟೆಲಿಕಾಂ ಸಂಸ್ಥೆಗಳ ಗ್ರಾಹಕರ ಹಿತದೃಷ್ಟಿಯಿಂದಾಗಿ ಕರೊನಾ ಬಾರದಿರುವಂತೆ ತಡೆಗಟ್ಟಲು ಅನುಸರಿಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕಾಲರ್​ ಟ್ಯೂನ್​ ಆಗಿ ನೀಡುತ್ತಿದೆ. (ಏಜೆನ್ಸೀಸ್​)

    ಮಹಿಳಾ ಟಿ20 ವಿಶ್ವಕಪ್​ ಪಂದ್ಯದಲ್ಲಿತ್ತು ಕರೊನಾ ವೈರಸ್​: ಐಪಿಎಲ್​ಗೂ ಬೀಳಬಹುದು ಹೊಡೆತ!

    ಕರೊನಾ ವೈರಸ್​ ಸೋಂಕು ವದಂತಿ ತಪ್ಪಿಸಲು ಕೆಳಕಂಡ ಜಾಲತಾಣದಿಂದ ಮಾತ್ರ ಮಾಹಿತಿ ಪಡೆಯಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts