More

    ಪಾಕ್​ ಅಧಿಕಾರಿಗಳ ಬೇಹುಗಾರಿಕೆ ಕುತಂತ್ರ ಹೀಗಿತ್ತು ನೋಡಿ…

    ನವದೆಹಲಿ: ಬೇಹುಗಾರಿಕೆ ಆರೋಪದಲ್ಲಿ ಭಾರತ ಭಾನುವಾರ ಗಡಿಪಾರು ಮಾಡಿದ ಭಾರತದಲ್ಲಿನ ಪಾಕಿಸ್ತಾನ ರಾಯಭಾರ ಕಚೇರಿ ಇಬ್ಬರು ಅಧಿಕಾರಿಗಳು ಸೂಕ್ಷ್ಮಾತಿಸೂಕ್ಷ್ಮ ಮಾಹಿತಿ ಸಂಗ್ರಹಿಸಲು ಯೋಧರು ಮತ್ತು ಅಧಿಕಾರಿಗಳನ್ನು ಹೇಗೆ ತಮ್ಮ ಬಲೆಗೆ ಕೆಡವಿಕೊಳ್ಳುತ್ತಿದ್ದರು ಎಂಬುದು ಈಗ ಬಹಿರಂಗವಾಗಿದೆ.

    ಪಾಕಿಸ್ತಾನದಲ್ಲಿ ಸಂಬಂಧಿಕರು ಇದ್ದು, ಅವರನ್ನು ಭೇಟಿಯಾಗಲು ಬಯಸುತ್ತಿದ್ದ ಭಾರತೀಯರ ವೀಸಾ ಅರ್ಜಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದರು. ತಮಗೆ ಬೇಕಾದ ಸೂಕ್ಷ್ಮ ಮಾಹಿತಿಯನ್ನು ಒದಗಿಸಬಹುದಾದ ಆಯಕಟ್ಟಿನ ಸ್ಥಳದಲ್ಲಿ ನಿಯೋಜನೆಗೊಂಡಿರುವ ಯೋಧರು ಅಥವಾ ಸರ್ಕಾರಿ ಅಧಿಕಾರಿಗಳು ಇವರ ಸಂಬಂಧಿಕರೇ ಎಂಬುದನ್ನು ತಿಳಿದುಕೊಳ್ಳುತ್ತಿದ್ದರು.

    ಬಳಿಕ ಅವರನ್ನು ತಮಗೆ ಪರಿಚಯಿಸಿಕೊಡುವುದಾದರೆ ವೀಸಾ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದಾಗಿ ಪುಸಲಾಯಿಸುತ್ತಿದ್ದರು. ಹಾಗೆ ಸಂಪರ್ಕಕ್ಕೆ ಬಂದ ಯೋಧರು ಮತ್ತು ಅಧಿಕಾರಿಗಳಿಗೆ ಹಣದಾಸೆ ತೋರಿಸಿ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದರು. ಪ್ರತಿಯೊಂದು ಮಾಹಿತಿಗೂ 25 ಸಾವಿರ ರೂ. ಕೊಡಲಾಗುತ್ತಿತ್ತು ಎಂಬುದನ್ನು ಪ್ರತಿಬೇಹುಗಾರಿಕೆ ಮೂಲಕ ಭಾರತೀಯ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

    ಹಣ ಪಡೆದು ಒಮ್ಮೆ ಮಾಹಿತಿಯನ್ನು ಒದಗಿಸಿದ ಬಳಿಕ ಹೆಚ್ಚಿನ ಮಾಹಿತಿಗಾಗಿ ಯೋಧರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಬ್ಲ್ಯಾಕ್​ಮೇಲ್​ ಮಾಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಲವ್, ಡೇಟಿಂಗ್, ಧೋಖಾ: ಯುವತಿಯ ನಿಜಬಣ್ಣ ಬಯಲು

    ಪಾಕಿಸ್ತಾನ ರಾಯಭಾರ ಕಚೇರಿಯ ವೀಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಬೀದ್​ ಹುಸೇನ್​ ಮತ್ತು ಮೊಹಮ್ಮದ್​ ತಾಹೀರ್​ ಅವರಿಗೆ ಪಾಕ್​ ಬೇಹುಗಾರರ ಸಂಪರ್ಕ ಇದ್ದದ್ದು ಖಚಿತವಾದ ಹಿನ್ನೆಲೆಯಲ್ಲಿ ಭಾರತ ಇವರಿಬ್ಬರನ್ನೂ ಭಾನುವಾರ ಗಡಿಪಾರು ಮಾಡಿತ್ತು.
    12 ಜನರ ಮೇಲೆ ಹದ್ದಿನಕಣ್ಣು: ಅಬೀದ್​ ಹುಸೇನ್​ ಮತ್ತು ಮೊಹಮ್ಮದ್​ ತಾಹೀರ್​ಗೆ ಸೂಕ್ಷ್ಮ ಮಾಹಿತಿ ಒದಗಿಸಿದ್ದಾರೆ ಎಂದು ಹೇಳಲಾದ ಭಾರತೀಯ ಯೋಧರು ಹಾಗೂ ಸರ್ಕಾರಿ ಅಧಿಕಾರಿಗಳು ಸೇರಿ ಒಟ್ಟು 12 ಜನರ ಮೇಲೆ ಹದ್ದಿನ ಕಣ್ಣು ಇಟ್ಟಿರುವುದಾಗಿ ಮೂಲಗಳು ತಿಳಿಸಿವೆ.

    ಭಾರತೀಯ ಸೇನಾ ಗಡಿ ಠಾಣೆಗಳ ಬಗೆಗಿನ ಸೂಕ್ಷ್ಮ ಮಾಹಿತಿಯನ್ನು ಅಬೀದ್​ ಹುಸೇನ್​ ಮತ್ತು ಮೊಹಮ್ಮದ್​ ತಾಹೀರ್​ಗೆ ಯೋಧರೊಬ್ಬರು ಕೊಡುತ್ತಿರುವಾಗಲೇ ದಾಳಿ ಮಾಡಿದ್ದ ದೆಹಲಿ ಪೊಲೀಸರು ಮೂವರನ್ನೂ ಭಾನುವಾರ ವಶಕ್ಕೆ ಪಡೆದುಕೊಂಡಿದ್ದರು. ಗಡಿಪಾರುಗೊಂಡ ಪಾಕ್​ ಅಧಿಕಾರಿಗಳ ಬಳಿ 15 ಸಾವಿರ ರೂ. ನಗದು ಮತ್ತು ಎರಡು ಐಫೋನ್​ಗಳು ಪತ್ತೆಯಾಗಿದ್ದು, ಅವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸ್​ನ ವಿಶೇಷ ಘಟಕದ ಮೂಲಗಳು ತಿಳಿಸಿವೆ.

    ಕೆಲ ಯೋಧರನ್ನು ದೆಹಲಿಯ ಕಂಟೋನ್ಮೆಂಟ್​ ಪ್ರದೇಶಗಳಾದ ಗೋಪಿನಾಥ್​ ಬಜಾರ್​ ಮತ್ತು ಸದರ್​ ಬಜಾರ್​ನಲ್ಲಿ ಸಂಪರ್ಕಿಸಲಾಗಿತ್ತು. ಇನ್ನು ಹಲವರನ್ನು ಫೇಸ್​ಬುಕ್​ ಮೂಲಕ ಬಲೆಗೆ ಕೆಡವಿಕೊಳ್ಳಲಾಗಿತ್ತು. ಒಟ್ಟಾರೆ ಭಾರತೀಯ ಸೇನಾಪಡೆಯಲ್ಲಿ ಹೊಸದಾಗಿ ನಿಯೋಜನೆಗೊಂಡಿರುವ ಯೋಧರು ಇವರ ಪ್ರಮುಖ ಟಾರ್ಗೆಟ್​ ಆಗಿದ್ದರು ಎಂದು ಹೇಳಲಾಗಿದೆ.

    ಭಾರತದ ಘನತೆಗೆ ಧಕ್ಕೆ ತರುವುದಿಲ್ಲ ಎಂದ ಚೀನಾ ವಿದೇಶಾಂಗ ಸಚಿವಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts