More

    100 ಕೆಲಸಗಾರರನ್ನು ಇಟ್ಟುಕೊಂಡು 226 ಕೋಟಿ ರೂ. ಗಳಿಸಿತ್ತು ಚೀನಾ ಕಂಪನಿ; ಚೀನಿ ಆ್ಯಪ್​ಗಳ ಕಮಾಯಿ ಎಷ್ಟು?

    ನವದೆಹಲಿ: ಕೇಂದ್ರ ಸರ್ಕಾರ ಚೀನಾ ಆ್ಯಪ್​ಗಳನ್ನು ಬ್ಯಾನ್ ಮಾಡಿದೆ. ಇದರಿಂದ ಚೀನಾ ಕಂಪನಿಗಳು ಬಾಯ್ಬಡಿಕೊಳ್ಳುತ್ತಿವೆ. ಕೋರ್ಟ್​ ಮೆಟ್ಟಿಲೇರಲು ಸಿದ್ಧತೆ ನಡೆಸಿವೆ. ಇದಕ್ಕೆಲ್ಲ ಕಾರಣವೇನು ಗೊತ್ತೆ? ಅವುಗಳ ಭಾರಿ ಕಮಾಯಿಗೆ ಕಲ್ಲು ಬಿದ್ದಿರುವುದು.

    ಅಷ್ಟಕ್ಕೂ ಚೀನಾ ಆ್ಯಪ್​ಗಳು ಭಾರತದಿಂದ ಗಳಿಕೆ ಮಾಡುತ್ತಿದುದಾದರೂ ಎಷ್ಟು ಅಂತೀರಾ? ಇಲ್ಲಿದೆ ನೋಡಿ ಮಾಹಿತಿ.

    ಯುಸಿ ಬ್ರೌಸರ್​: ಜಾಕ್​ ಮಾ ಒಡೆತನದ ಅಲಿಬಾಬಾ ಕಂಪನಿಯ ಯುಸಿ ಮೊಬೈಲ್​ ವೆಬ್​ ಪ್ರೈವೇಟ್​ ಲಿಮಿಟೆಡ್​ ಕಂಪನಿ ಯುಸು ಬ್ರೌಸರ್​ ಹಾಗೂ ಯುಸಿ ನ್ಯೂಸ್​ ಆ್ಯಪ್​ಗಳನ್ನು ಹೊರತಂದಿದೆ. ಭಾರತದ ಸ್ಮಾರ್ಟ್​ ಫೋನ್​ಗಳಲ್ಲಿ ಶೇ.22 ಈ ಬ್ರೌಸರ್ ಬಳಸಲಾಗುತ್ತಿತ್ತು. ಭಾರತದಲ್ಲಿ ಕೇವಲ ನೂರು ಸಿಬ್ಬಂದಿ ಹೊಂದಿದ್ದ ಈ ಕಂಪನಿ 2018-19 ರಲ್ಲಿ 226.64 ಕೋಟಿ ರೂ. ಸಂಪಾದನೆ ಮಾಡಿತ್ತು.

    ಇದನ್ನೂ ಓದಿ: ಒಂದು ರೂ.ಗೂ ಕಡಿಮೆ ಬೆಲೆಯ ಮಾತ್ರೆ ಕರೊನಾ ಚಿಕಿತ್ಸೆಯಲ್ಲಿ ಅದ್ಭುತಗಳನ್ನೇ ಮಾಡುತ್ತಿದೆ….!

    ಟಿಕ್​ಟಾಕ್​, ಹಲೋ: ಭಾರತದಲ್ಲಿ ಭಾರಿ ಜನಪ್ರಿಯವಾಗಿದ್ದ ಟಿಕ್​ ಟಾಕ್ ಹಾಗೂ ಹಲೋ ಆ್ಯಪ್​ ಒಟ್ಟಾರೆ 17 ಕೋಟಿ ಬಳಕೆದಾರರನ್ನು ಹೊಂದಿತ್ತು. ಅತಿ ಹೆಚ್ಚು ಬಳಕೆದಾರರನ್ನು ಹೊಂದಿದ್ದ ಆ್ಯಪ್​ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. 2018-19ರಲ್ಲಿ 43.6 ಕೋಟಿ ರೂ.ಗಳನ್ನು ಗಳಿಸಿತ್ತು.

    ಶೇರ್​ ಇಟ್​: ಚೀನಾದ ಶೇರ್​ ಇಟ್​ ಆ್ಯಪ್​ಗೂ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿತ್ತು . ಇದಕ್ಕೆ 40 ಕೋಟಿ ಬಳಕೆದಾರರಿದ್ದರು. ಆದರೆ, ಗಳಿಸಿದ ಆದಾಯ 14.73 ಕೋಟಿ ರೂ. ಭಾರತದ ಶೇರ್​ ಇಟ್​ ಕಂಪನಿ ಹಾಂಗ್​ಕಾಂಗ್​ ಸಂಸ್ಥೆಯ ಒಡೆತನದಲ್ಲಿತ್ತು.

    ಇದನ್ನೂ ಓದಿ: ರೋಗ ಪ್ರತಿರೋಧಕ ಶಕ್ತಿ ಕುಂದಿದವರಿಗೂ ಆಕ್ಸ್​ಫರ್ಡ್​ ಕರೊನಾ ಲಸಿಕೆ ಸುರಕ್ಷಿತ; ಫಲಿತಾಂಶ ಪ್ರಕಟಿಸಿದ ತಜ್ಞರು 

    ಇ-ಮಾರ್ಕೆಟ್​ ತಾಣ ಕ್ಲಬ್​ ಫ್ಯಾಕ್ಟರಿ 3,000ಕ್ಕೂ ಅಧಿಕ ವರ್ತಕರನ್ನು ನೋಂದಾಯಿಸಿಕೊಂಡಿತ್ತು. ಇದರ ಮಾತೃ ಸಂಸ್ಥೆಯಾದ ಗ್ಲೋಬ್​ ಮ್ಯಾಕ್ಸ್​ ಕಾಮರ್ಸ್​ ಇಂಡಿಯಾ ಕಂಪನಿ ಕಳೆದ ಸಾಲಿನಲ್ಲಿ 172.14 ಕೋಟಿ ಆದಾಯ ಗಳಿಸಿತ್ತು. ಇದಲ್ಲದೇ. ಕ್ಯಾಮ್​ಸ್ಕ್ಯಾನರ್​ ಕಂಪನಿ 10 ಕೋಟಿ ಸಕ್ರಿಯ ಬಳಕೆದಾರರನ್ನು ಭಾರತದಲ್ಲಿ ಹೊಂದಿತ್ತು.

    ನೆಗಡಿ, ಕೆಮ್ಮಿನಷ್ಟೇ ಕಾಮನ್​ ಆಗುತ್ತೆ ಕರೊನಾ; ಎಲ್ಲರಿಗೂ ಔಷಧ ಬೇಕಾಗೋದು ಇಲ್ಲ; ಆಕ್ಸ್​ಫರ್ಡ್​ ವಿವಿ ತಜ್ಞರ ಅಭಿಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts