More

    ಸಾಮಾಜಿಕ ಅಂತರ ಕಾಯ್ದುಕೊಳ್ಳಲು ರಾಣಾ ದಗ್ಗುಬಾಟಿ ಮದುವೆಯಲ್ಲಿ ವಿಶೇಷ ಟೆಕ್ನಾಲಜಿ ಬಳಕೆ…

    ಇತ್ತೀಚೆಗಷ್ಟೇ ಬಾಳ ಬಂಧನಕ್ಕೆ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್​ ಕಾಲಿಟ್ಟಿದ್ದಾರೆ. ಮದುವೆ ಬಳಿಕ ಸತ್ಯನಾರಾಯಣ ಪೂಜೆಯಲ್ಲಿಯೂ ಈ ಜೋಡಿ ಭಾಗವಹಿಸಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಟಾಲಿವುಡ್​ನ ಸಾಕಷ್ಟು ಕಲಾವಿದರು ರಾಣಾ ದಗ್ಗುಬಾಟಿ ವಿವಾಹಕ್ಕೆ ಆಗಮಿಸಿರಲಿಲ್ಲ. ಸೋಷಿಯಲ್​ ಮೀಡಿಯಾಶ ಮೂಲಕವೇ ಅವರಿಗೆ ಶುಭಾಶಯ ಕೋರಿದ್ದರು. ಮನೆಯಲ್ಲಿಯೇ ಮದುವೆ ಕ್ಷಣಗಳನ್ನು ಕಣ್ತುಂಬಿಕೊಂಡಿದ್ದರು.

    ಇದನ್ನೂ ಓದಿ: ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ರಿಯಾ ತಬ್ಬಿಬ್ಬು

    ಹೌದು, ಕರೊನಾ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕುಳಿತು ಮದುವೆಯನ್ನು ಲೈವ್​ ನೋಡಬಹುದಾದ ವಿಶೇಷ ಟೆಕ್ನಾಲಜಿಯನ್ನು ಅಳವಡಿಸಲಾಗಿತ್ತು. ಹೌದು, ಲೈಫ್​ಎವರ್​ ಎಂಬ ಸಂಸ್ಥೆ ಈ ಲೈವ್​ ಟೆಕ್ನಾಲಜಿಯನ್ನು ರಾಣಾ ಮದುವೆಯಲ್ಲಿ ಅಳವಡಿಸಿತ್ತು. ಸೀಮಿತ ಮಂದಿಗಷ್ಟೇ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇದ್ದಿದ್ದರಿಂದ ವಿಆರ್​ ಬಾಕ್ಸ್ ವಿತರಣೆ ಮಾಡಲಾಗಿತ್ತು.

    ಇದನ್ನೂ ಓದಿ: ಚಿತ್ರರಂಗದಲ್ಲಿ ಕೊನೆಗೆ ಉಳಿಯೋದು ಪ್ರತಿಭೆಯಷ್ಟೇ!

    ಲಕ್ಷ್ಮೀ ಮಂಚು, ನಾನಿ ಸೇರಿ ಹಲವಾರು ಸೆಲೆಬ್ರಿಟಿಗಳಿಗೆ ವಿಶೇಷವಾದ ವಿಆರ್ ಬಾಕ್ಸ್ ಕಳುಹಿಸಲಾಗಿತ್ತು. ಜತೆಗೆ ಅವರೆಲ್ಲರ ಫೋನ್​ ನಂಬರ್​ಗೆ ಲಿಂಕ್​ವೊಂದನ್ನು ಕಳುಹಿಸಿ, ಆ ಮೂಲಕ ಲೈವ್​ ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು. ಈ ಹೊಸ ಟೆಕ್ನಾಲಜಿ ಕಂಡು ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಸೋಷಿಯಲ್​ ಡಿಸ್ಟ್​ನ್ಸಿಂಗ್​ ಪಾಲಿಸಿದ್ದಾರೆ. (ಏಜೆನ್ಸೀಸ್​)fe

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts