More

    ಈ ಚಿತ್ರದಲ್ಲಿ ಎಷ್ಟು ಹುಲಿಗಳಿವೆ ಗುರುತಿಸುವಿರಾ?: ಸಿನಿ ದಿಗ್ಗಜ ಅಮಿತಾಭ್​ ಸಹ ಉತ್ತರಿಸಿದ್ದಾರೆ ನೋಡಿ…

    ನವದೆಹಲಿ: ಕರೊನಾ ಲಾಕ್​ಡೌನ್​ ನಡುವೆ ಟ್ವಿಟರ್​ನಲ್ಲಿ ಹರಿದಾಡುತ್ತಿರುವ ನೂತನ ಟಾಸ್ಕ್​ ಒಂದು ಸಾಕಷ್ಟು ಕುತೂಹಲ ಕೆರಳಿಸಿದ್ದು, ಖಂಡಿತವಾಗಿಯೂ ಇದು ನಿಮ್ಮ ಗಮನವನ್ನು ಸೆಳೆಯುತ್ತಿದೆ.

    ಬುಧವಾರ ಟ್ವಿಟರ್​ ಬಳಕೆದಾರರು ಹುಲಿಗಳಿರುವ ಚಿತ್ರವನ್ನು ಶೇರ್​ ಮಾಡಿ, ಎಷ್ಟು ಹುಲಿಗಳಿವೆ ಪತ್ತೆಹಚ್ಚಿ ಎಂದು ನೆಟ್ಟಿಗರನ್ನು ಕೇಳಿದ್ದಾರೆ. ನೀವು ನೋಡುತ್ತಿರುವ ಚಿತ್ರದಲ್ಲಿ ಎಷ್ಟು ಹುಲಿಗಳಿವೆ? ಎಂದು ಇಸಾರ್​ಮನೀರ್​ ಎಂಬ ಟ್ವಿಟರ್​ ಬಳಕೆದಾರ ಪ್ರಶ್ನಿಸಿ ಚಿತ್ರವನ್ನು ಹರಿಬಿಟ್ಟಿದ್ದು, ಇದೀಗ ವೈರಲ್​ ಆಗಿದೆ.

    ಚಿತ್ರವನ್ನು ಸಾಮಾನ್ಯವಾಗಿ ನೋಡಿದರೆ ಕೇವಲ ನಾಲ್ಕು ಹುಲಿಗಳಿರುವುದು ಕಾಣುತ್ತದೆ. ಚಿತ್ರದಲ್ಲಿ ಎರಡು ವಯಸ್ಕ ಹಾಗೂ ಎರಡು ಹುಲಿ ಮರಿಗಳಿವೆ. ಆದರೆ, ಚಿತ್ರವನ್ನು ಹೆಚ್ಚು ಸೂಕ್ಷ್ಮವಾಗಿ ಗಮನಿಸಿದರೆ ಅನೇಕ ಹುಲಿಗಳು ಇರುವುದು ತಿಳಿಯುತ್ತದೆ.

    ಟ್ವಿಟರ್​ನಲ್ಲಿ ಸಂಚಲನ ಸೃಷ್ಟಿಸಿರುವ ಫೋಟೋ ಈವರೆಗು 5 ಸಾವಿರಕ್ಕೂ ಹೆಚ್ಚು ಲೈಕ್​ಗಳನ್ನು ಗಿಟ್ಟಿಸಿಕೊಂಡಿದ್ದು, 6 ಸಾವಿರಕ್ಕೂ ಹೆಚ್ಚು ಮಂದಿ ಫೋಟೋ ಕುರಿತು ಪ್ರತಿಕ್ರಿಯಿಸಿದ್ದಾರೆ. ಅಚ್ಚರಿಯೆಂದರೆ ಬಾಲಿವುಡ್​ ಸಿನಿ ದಿಗ್ಗಜ ಅಮಿತಾಭ್​ ಬಚ್ಚನ್​ ಕೂಡ ಫೋಟೋ ಕುರಿತು ಪ್ರತಿಕ್ರಿಯೆ ನೀಡಿ 11 ಹುಲಿಗಳಿವೆ ಎಂದು ಟ್ವೀಟ್​ ಮಾಡಿದ್ದಾರೆ.

    ನಟಿ ದಿಯಾ ಮಿರ್ಜಾ ಕೂಡ ಟ್ವೀಟ್​ ಮಾಡಿದ್ದು ಅಮಿತಾಭ್​ ಬಚ್ಚನ್​ಗಿಂತಲೂ 5 ಹುಲಿಗಳನ್ನು ಹೆಚ್ಚಿಗೆ ಪತ್ತೆ ಹಚ್ಚಿ 16 ಎಂದು ಹೇಳಿದ್ದಾರೆ. ಇನ್ನು ಕೆಲ ನೆಟ್ಟಿಗರು ಚಿತ್ರದಲ್ಲಿ 20 ಹುಲಿಗಳಿವೆ ಎಂದು ಗುರುತಿಸಿದ್ದಾರೆ. ಹೀಗೆ ಹಲವರು ಪ್ರತಿಕ್ರಿಯೆ ನೀಡುತ್ತಿದ್ದು, ನೀವೂ ಒಮ್ಮೆ ಟ್ರೈ ಮಾಡಬಹುದು. (ಏಜೆನ್ಸೀಸ್​)

    ಬೆಳಗ್ಗೆಯಿಂದ ಸಂಜೆಯವರೆಗೂ ಮರದ ಮೇಲೆಯೇ ಕುಳಿತಿರುತ್ತಾರೆ ಈ ಶಿಕ್ಷಕ…; ಮಕ್ಕಳ ಬಗ್ಗೆ ಇರುವ ಕಾಳಜಿಯೇ ಇದಕ್ಕೆ ಕಾರಣ

    VIDEO| ಸಾಕು ನಾಯಿ-ಚಿರತೆ ನಡುವೆ ರೋಚಕ ಕಾಳಗ: ಕಾದಾಟಕ್ಕೆ ಟ್ವಿಸ್ಟ್​ ಕೊಟ್ಟ ಕಾರಿನ ಶಬ್ದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts