More

    ಇಬ್ಬರು ಮಕ್ಕಳನ್ನು ಹೇಗೆ ಸಂಭಾಳಿಸುತ್ತಿದ್ದೀರಿ ಎಂದಿದ್ದಕ್ಕೆ ರಾಧಿಕಾ ಪಂಡಿತ್ ​ಕೊಟ್ಟ ಉತ್ತರ ಹೀಗಿದೆ..

    ಬೆಂಗಳೂರು: ಈಗಿನ ಒತ್ತಡದ ಜೀವನದಲ್ಲಿ ಒಂದು ಮಗುವನ್ನೇ ಸಂಭಾಳಿಸುವುದು ಕಷ್ಟದ ಕೆಲಸ. ಹೀಗಿರುವಾಗ ಎರಡೆರಡು ಮಕ್ಕಳನ್ನು ನಿಭಾಯಿಸುವುದು ಕಷ್ಟ ಸಾಧ್ಯ. ಆದರೆ, ಆ ಕೆಲಸವನ್ನು ಯಾವ ಒತ್ತಡವಿಲ್ಲದೆ ಸಲೀಸಾಗಿ ನಿಭಾಯಿಸುತ್ತಿದ್ದಾರಂತೆ ರಾಧಿಕಾ ಪಂಡಿತ್​. ಹೌದು, ಆ ವಿಚಾರವನ್ನು ಸ್ವತಃ ರಾಧಿಕಾ ಹೇಳಿಕೊಂಡಿದ್ದಾರೆ.
    ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ರಾಧಿಕಾ ಸೇರಿ ಅವರ ಅಪ್ಪ ಅಮ್ಮ ಸಹ ಮನೆಯಲ್ಲಿದ್ದು, ಪೂರ್ತಿ ಜವಾಬ್ದಾರಿಯನ್ನು ಅವರೇ ನೋಡಿಕೊಳ್ಳುತ್ತಿದ್ದಾರಂತೆ. ಅವರಿದ್ದಿದ್ದಕ್ಕೆ ಒಂದಷ್ಟು ನಿಟ್ಟುಸಿರು ಬಿಡುತ್ತಿದ್ದಾರಂತೆ ರಾಧಿಕಾ. ‘ಒಂದಷ್ಟು ಮಂದಿ ಅಂದುಕೊಂಡಿರುತ್ತಾರೆ. ಹೇಗೆ ರಾಧಿಕಾ ಇಬ್ಬರು ಮಕ್ಕಳನ್ನು ಸಂಭಾಳಿಸುತ್ತಾಳೆ ಎಂದು. ನೀವು ನೋಡಿದ ಈ ಫೋಟೋದಲ್ಲಿದ್ದಾರಲ್ಲ ಈ ಇಬ್ಬರೇ ನನ್ನ ಸೀಕ್ರಿಟ್. ಹಾಗಾಗಿ ನಾನು ಕೊಂಚ ರಿಲ್ಯಾಕ್ಸ್​ ಆಗಿದ್ದೇನೆ. ಅಪ್ಪ ಅಮ್ಮ ಇಲ್ಲದಿದ್ದರೆ ಆಯ್ರಾ ಮತ್ತೆ ಜೂನಿಯರ್​ ಇಬ್ಬರನ್ನು ಹಿಡಿಯುವುದು ಕಷ್ಟ. ಪುಟಾಣಿಗಳಿಗೂ ತಾತ ಅಜ್ಜಿ ಇಲ್ಲದಿದ್ದರೆ ನಡೆಯಲ್ಲ’ ಎಂದು ರಾಧಿಕಾ ಹೇಳಿಕೊಂಡಿದ್ದಾರೆ.
    ಸದ್ಯ ರಾಧಿಕಾ ಮಕ್ಕಳ ಪಾಲನೆ ಪೋಷಣೆಯಲ್ಲಿ ಕುಟುಂಬದೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಇತ್ತ ಯಶ್​ ‘ಕೆಜಿಎಫ್​’ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಅಭಿಮಾನಿಗಳ ವಿಚಾರಕ್ಕೆ ಬರುವುದಾದರೆ, ಜೂನಿಯರ್​ ಯಶ್​ ಹೆಸರೇನು? ಆ ಮಗುವಿನ ದರ್ಶನ ಯಾವಾಗ ಎಂದು ಜಾಲತಾಣಗಳಲ್ಲಿ ಯಶ್​ಗೆ ಪ್ರಶ್ನೆ ಕೇಳುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts