More

    ವಸತಿ ಸಹಾಯಧನ ಹೆಚ್ಚಳ ಕೋರಿ ಪ್ರಧಾನಿ ಬಳಿ ರಾಜ್ಯದ ನಿಯೋಗ : ವಸತಿ ಸಚಿವ ವಿ.ಸೋಮಣ್ಣ

    ಬೆಂಗಳೂರು: ವಿಧಾನ ಸೌಧ ಕೊಠಡಿಯಲ್ಲಿ ಬೆಂಗಳೂರು ನಗರ ವಸತಿ ಯೋಜನೆ ಕುರಿತು ಸಂಸದ, ಶಾಸಕರ ಸಭೆಯಲ್ಲಿ ಸೋಮವಾರ ಈ ವಿಷಯ ತಿಳಿಸಿದರು.
    ಕೇಂದ್ರ ಸಹಾಯಧನ ಸದ್ಯಕ್ಕೆ 1.50 ಲಕ್ಷ ರೂಪಾಯಿ ಇದೆ. ಈ ಮೊತ್ತ ಹೆಚ್ಚಿಸಲು ವಿನಂತಿಸಿ ಬಜೆಟ್ ಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ವಸತಿ ಸಚಿವರನ್ನು ಭೇಟಿ ಮಾಡಲಿದ್ದು, ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ.

    ದೃಢ ಸಂಕಲ್ಪ: ಮುಂದಿನ ಮೂರು ವರ್ಷಗಳಲ್ಲಿ ಬೆಂಗಳೂರು ಕೊಳವೆ ಮುಕ್ತ ನಗರ ಮಾಡಬೇಕು ಎನ್ನುವುದು ಸರ್ಕಾರದ ದೃಢ ಸಂಕಲ್ಪವಾಗಿದೆ. ಮುಖ್ಯಮಂತ್ರಿ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆಯಾಗಿದೆ. ಫಲಾನುಭವಿ ಪಾಲು ಏಳು ಲಕ್ಷ ರೂ., ಬಾಕಿ ಮೊತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ 1.50 ಲಕ್ಷ ರೂ ಭರಿಸಲಿವೆ. ಫಲಾನುಭವಿ ಪಾಲಿನ ಮೊತ್ತ ಬಹಳವಾಯಿತು ಎಂದು ಸಂಸದ ಡಿ.ಕೆ.ಸುರೇಶ, ಶಾಸಕ ಕೃಷ್ಣ ಬೈರೇಗೌಡ ಇನ್ನಿತರ ಶಾಸಕರು ಆಕ್ಷೇಪಿಸಿ ಮೊತ್ತ ತಗ್ಗಿಸಲು ಒತ್ತಾಯಿಸಿದರು.

    ಈ ಸಭೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿ ಶಾಸಕರು, ಹಿರಿಯ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts