ಬೆಂಗಳೂರು: ಚುನಾವಣೆಯಲ್ಲಿ ಸೋತ ತಕ್ಷಣ ಎಲ್ಲವೂ ಮುಗಿದು ಹೋಯಿತೆಂದಿಲ್ಲ. ರಾಜಕೀಯ ನಿವೃತ್ತಿ ಪ್ರಶ್ನೆಯೇ ಇಲ್ಲ. ರಾಜಕೀಯ ನಿವೃತ್ತಿ ಎಂಬುದೊಂದು ನಾಟಕವಷ್ಟೇ ಎಂದು ಮಾಜಿ ಸಚಿವ ವಿ.ಸೋಮಣ್ಣ ವ್ಯಂಗ್ಯವಾಡಿದರು.
ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಪಕ್ಷದ ಆದೇಶದಂತೆ ಚಿನ್ನದಂತಹ ಕ್ಷೇತ್ರ ಬಿಡಬೇಕಾಯಿತು. ಸೋಲು, ಗೆಲುವು, ಕ್ಷೇತ್ರಕ್ಕಿಂತ ಪಕ್ಷ ಮುಖ್ಯವಾಗಿದೆ. ವರಿಷ್ಠರ ಸೂಚನೆಯನ್ನು ಪಾಲಿಸಿರುವೆ. ಪ್ರಧಾನಿ ನರೇಂದ್ರ ಮೋದಿಯವರ ಕೆಲಸಗಳು ಅವಿಸ್ಮರಣೀಯ ಎಂದರು.
ಇದನ್ನೂ ಓದಿ: ಸ್ವಂತ ಹೆಂಡತಿಯ ಬಾತ್ರೂಮ್ ಹಾಗೂ ಬೆಡ್ರೂಮ್ಗೆ ಸಿಸಿಟಿವಿ ಅಳವಡಿಸಿದ ಭೂಪ!
ಚುನಾವಣೆಯಲ್ಲಿ ಯಡಿಯೂರಪ್ಪ ಫ್ಯಾಕ್ಟರ್ ವರ್ಕ್ ಆಗಿರುವುದು ಗೊತ್ತಿಲ್ಲ. ಹಾಗಂತ ಅವರು ಎಲ್ಲಿಯಾದರೂ ಹೇಳಿದ್ದಾರೆಯೆ? ಕಾಂಗ್ರೆಸ್ನ ಗ್ಯಾರಂಟಿಗಳೇ ಸೋಲಿಗೆ ಕಾರಣ. ವೀರಶೈವ-ಲಿಂಗಾಯತ ಸಮುದಾಯದ ಮತಗಳ ವಿಭಜನೆ ಆಗಿದ್ದೇಕೆ? ಎನ್ನುವುದನ್ನು ಹಿರಿಯ ನಾಯಕ ಯಡಿಯೂರಪ್ಪ ಅವರನ್ನೇ ಕೇಳಿ. ನಾನು ಕಿರಿಯ, ಕ್ಷೇತ್ರಕ್ಕೆ ಸೀಮಿತವೆಂದು ವಿ.ಸೋಮಣ್ಣ ಉತ್ತರಿಸಿದರು.
ಸ್ವಂತ ಹೆಂಡತಿಯ ಬಾತ್ರೂಮ್ ಹಾಗೂ ಬೆಡ್ರೂಮ್ಗೆ ಸಿಸಿಟಿವಿ ಅಳವಡಿಸಿದ ಭೂಪ!