More

    ವಸತಿ ಸೌಲಭ್ಯಕ್ಕಾಗಿ ಹಮಾಲರ ಸಂಘದ ತಾಲೂಕು ಸಮಿತಿ ಒತ್ತಾಯ

    ಸಿಂಧನೂರು: 2018ರಿಂದ ಇಲ್ಲಿಯವರೆಗೆ ಮೃತಪಟ್ಟ ಹಮಾಲರ ಕುಟುಂಬಗಳಿಗೆ ಶೀಘ್ರದಲ್ಲೇ ಪರಿಹಾರ ಒದಗಿಸಲು ಒತ್ತಾಯಿಸಿ ಹಮಾಲರ ಸಂಘದ ತಾಲೂಕು ಸಮಿತಿ ಎಪಿಎಂಸಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿತು.

    ಹಮಾಲರಿಗೆ ವಸತಿ ಯೋಜನೆ ಜಾರಿ ಮಾಡುವ ಭರವಸೆ ನೀಡಲಾಗಿತ್ತು. ಈ ಕುರಿತು ಹಮಾಲರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲಾಗಿದೆ. ಈ ಯೋಜನೆ ತುರ್ತಾಗಿ ಜಾರಿ ಮಾಡಬೇಕು. ಎಪಿಎಂಸಿಯಲ್ಲಿ ಲೈಸನ್ಸ್ ಇಲ್ಲದೆ ಕೆಲಸ ಮಾಡುವ ಹಮಾಲರಿಂದ ಈಗಾಗಲೇ ಅರ್ಜಿ ಕೊಡಲಾಗಿದ್ದು, ಅವರಿಗೆ ಪರವಾನಗಿ ನೀಡಬೇಕು. 127 ನಿವೇಶಗಳ ಹಕ್ಕು ಪತ್ರ ಕೊಟ್ಟವರಿಗೆ ಮನೆಗಳನ್ನು ನಿರ್ಮಿಸಿ ಕೊಡಬೇಕು. 127 ನಿವೇಶನಗಳಲ್ಲಿ 10 ಜನ ಹೆಸರು ತೆಗೆದು ಹಾಕಲಾಗಿದೆ. ಒಂದು ದ್ವಿಪ್ರತಿಯಾಗಿರುವ ಹಕ್ಕು ಪತ್ರ ಉಳಿದಿವೆ. ಒಟ್ಟು 11 ನಿವೇಶನಗಳ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ಕೊಡಬೇಕೆಂದು ಒತ್ತಾಯಿಸಿದರು.

    ಹಿರಿಯ ಹೋರಾಟಗಾರ ಡಿ.ಎಚ್.ಕಂಬಳಿ, ಮುಖಂಡರಾದ ಬಾಷುಮಿಯಾ, ಯಂಕನಗೌಡ ಗದ್ರಟಗಿ, ನಾಗರಾಜ ಪೂಜಾರ್, ತಿಪ್ಪಯ್ಯಶೆಟ್ಟಿ, ಆದಪ್ಪ ಬಿರಾದಾರ್, ಸುಭಾನಸಾಬ್, ರಾಜಾಸಾಬ್, ವಿರುಪಣ್ಣ, ಗಂಗಣ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts