More

    ನೀರಿನ ವಿಚಾರಕ್ಕೆ ಜಗಳ; ಮನನೊಂದು ಗೃಹಿಣಿ ಆತ್ಮಹತ್ಯೆ

    ಬೆಂಗಳೂರು: ನೀರಿನ ವಿಚಾರಕ್ಕೆ ಅಕ್ಕ-ಪಕ್ಕದವರು ಜಗಳ ಮಾಡಿ ಹಲ್ಲೆ ಮಾಡಿದಕ್ಕೆ ಮನನೊಂದ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಯಲಹಂಕದಲ್ಲಿ ನಡೆದಿದೆ.

    ಕೋಗಿಲು ಮುಖ್ಯರಸ್ತೆಯ ಶ್ರೀನಿವಾಸಪುರದಲ್ಲಿರುವ ಸರ್ಕಾರಿ ವಸತಿ ಸಮುಚ್ಚಯದ ನಿವಾಸಿ ಸರಸ್ವತಿ (35) ಆತ್ಮಹತ್ಯೆಗೆ ಶರಣಾದವರು.

    ನೀರು ಹಿಡಿಯುವ ವಿಚಾರಕ್ಕೆ ಗಲಾಟೆ

    ಸರಸ್ವತಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ನಾಗರಾಜ್ ಸಿನಿಮಾಗಳಲ್ಲಿ ಕ್ಯಾಮೆರಾ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದರು. ಈ ನಡುವೆ ನೆಲ ಮಹಡಿಯಲ್ಲಿ ವಾಸವಿದ್ದ ಶ್ರೀನಿವಾಸ್-ಭವಾನಿ ದಂಪತಿ ಪ್ರತ್ಯೇಕವಾಗಿ ನೀರಿನ ಟ್ಯಾಂಕ್‌ವೊಂದನ್ನು ತಂದಿಟ್ಟುಕೊಂಡು ಎಲ್ಲರಿಗಾಗಿ ಇರುವ ನೀರಿನ ಸಂಪ್‌ನಿಂದ ಪ್ರತ್ಯೇಕವಾಗಿ ನೀರು ತುಂಬಿಸಿಕೊಳ್ಳುತ್ತಿದ್ದರು.

    ಇದರಿಂದಾಗಿ ನೀರಿನ ಅಭಾವ ಉಂಟಾಗುತ್ತಿದೆ ಎಂದು ಸರಸ್ವತಿ ಸೇರಿ ನೆರೆ ಹೊರೆಯವರು ಬೈದಿದ್ದರು. ಈ ವಿಚಾರವಾಗಿ ಕೆಲ ದಿನಗಳ ಹಿಂದೆ ಎರಡೂ ಮನೆಯವರ ನಡುವೆ ಗಲಾಟೆಗಳಾಗಿ ಪ್ರಕರಣ ಠಾಣೆಯ ಮೆಟ್ಟಿಲೇರಿದಾಗ ಪೊಲೀಸರು ಇಬ್ಬರಿಗೂ ಬುದ್ದಿವಾದ ಹೇಳಿ ಕಳಿಸಿದ್ದರು.

    saraswati

    ಇದನ್ನೂ ಓದಿ: ಪೊಲೀಸ್​ ವಾಹನದ ಮೇಲೆ ಮಾವೋವಾದಿಗಳ ದಾಳಿ; 10 ಅಧಿಕಾರಿಗಳು ಹುತಾತ್ಮ

    ಮನೆಯಲ್ಲಿ ಯಾರು ಇಲ್ಲದಾಗ ಆತ್ಮಹತ್ಯೆ

    ಏ.೨೧ರಂದು ಸಿನಿಮಾ ಕೆಲಸದ ನಿಮಿತ್ತ ನಾಗರಾಜ್ ಧಾರವಾಡಕ್ಕೆ ಹೋದ ಸಂದರ್ಭದಲ್ಲಿ ಮತ್ತೆ ನೀರಿನ ವಿಚಾರವಾಗಿ ಗಲಾಟೆ ಆರಂಭವಾಗಿತ್ತು. ಈ ವೇಳೆ ನೆರೆ ಮನೆಯ ಶ್ರೀನಿವಾಸ್, ಅವರ ಪತ್ನಿ ಭವಾನಿ ಹಾಗೂ ಶಿಲ್ಪಾ ಎಂಬಾಕೆ ಸರಸ್ವತಿಗೆ ಮನಬಂದಂತೆ ಬೈದಿದ್ದರು.

    ಸರಸ್ವತಿ ಗಂಡನಿಗೆ ಕರೆ ಮಾಡಿ ’ ನನ್ನಿಂದ ಇನ್ನು ಸಹಿಸಲು ಸಾಧ್ಯವಿಲ್ಲ, ನೀನು ಬೇರೆ ಕಡೆ ಮನೆ ಮಾಡುತ್ತಿಲ್ಲ, ನಾನು ಸಾಯುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಳು. ಗಾಬರಿಗೊಂಡ ನಾಗರಾಜ್ ಪಕ್ಕದ ಮನೆಯವರಿಗೆ ಕರೆ ಮಾಡಿ ಅವರನ್ನು ಕಳಿಸುವಷ್ಟರಲ್ಲಿ ಸರಸ್ವತಿ ಆತ್ಮಹತ್ಯೆ ಮಾಡಿಕೊಂಡಿದ್ದರು.

    112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ ಪತಿ

    ನಮ್ಮ ಮನೆಯ ಕೆಳಗೆ ಇರುವ ಶ್ರೀನಿವಾಸ್ ಆತನ ಪತ್ನಿ ಭವಾನಿ ನನಗೂ ನೀರಿನ ವಿಚಾರದಲ್ಲಿ ಜಗಳವಾಗುತ್ತಿದೆ. ಪದೇ ಪದೆ ಅವ್ಯಾಚ್ಯ ಶಬ್ದಗಳಿಂದ ಬೈಯುತ್ತಾ ನನಗೆ ಅವಮಾನಿಸುತ್ತಿದ್ದಾರೆ ಎಂದು ಸರಸ್ವತಿ ಫೋನ್ ಮೂಲಕ ಪತಿಯ ಬಳಿ ಅವಲತ್ತುಕೊಂಡಿದ್ದಾರೆ.

    ಇದರಿಂದ ಗಾಬರಿಯಾದ ಪತಿ ನಾಗರಾಜ್ ನೀನು ಗಲಾಟೆ ಮಾಡಿಕೊಳ್ಳಬೇಡ ನಾನು ಪೊಲೀಸ್ ಸಹಾಯವಾಣಿಗೆ ತಿಳಿಸುತ್ತೇನೆ ಎಂದು ಸಮಾಧಾನಪಡಿಸಿದ್ದಾರೆ. ಅದರಂತೆ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇದಾದ ಸ್ವಲ್ಪ ಸಮಯದ ಬಳಿಕ ಪಕ್ಕದ ಮನೆಯ ನಿವಾಸಿ ಲಕ್ಷ್ಮಮ್ಮ ಎಂಬುವರು ನಾಗರಾಜ್‌ಗೆ ಕರೆ ಮಾಡಿ ನೀನು ತುರ್ತಾಗಿ ಬಾ ಎಂದು ತಿಳಿಸಿದ್ದಾರೆ.

    ಸಂಜೆ 7:30ಕ್ಕೆ ಮನೆಗೆ ಆಗಮಿಸಿದ ವೇಳೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರವನ್ನು ಪಕ್ಕದ ಮನೆಯವರು ತಿಳಿಸಿದ್ದಾರೆ. ನಂತರ ಯಲಹಂಕ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದ್ದ ಪತ್ನಿಯ ಮೃತದೇಹವನ್ನು ಕಂಡ ಪತಿ ಕುಸಿದು ಹೋದರು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

    ಪತ್ನಿಯ ಸಾವಿಗೆ ಕಾರಣವಾದ ಶ್ರೀನಿವಾಸ್, ಭವಾನಿ ಹಾಗೂ ಶಿಲ್ಪಾ ವಿರುದ್ಧ ಪತಿ ನಾಗರಾಜ್ ಯಲಹಂಕ ಠಾಣೆಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts