More

    ಮನೆಯೊಂದು ಎರಡು ರಾಜ್ಯ! ಕಿಚನ್​ ಸೇರಿ 5 ಕೊಠಡಿ ತೆಲಂಗಾಣಕ್ಕೆ, ಬೆಡ್​ರೂಮ್​ ಸೇರಿ 5 ಕೋಣೆ ಮಹಾರಾಷ್ಟ್ರಕ್ಕೆ

    ಹೈದರಾಬಾದ್​/ಮುಂಬೈ: ವಾಸದ ಮನೆಯೊಂದು ಎರಡು ರಾಜ್ಯದ ಗಡಿಯನ್ನು ಹಂಚಿಕೊಂಡಿರುವ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಈ ವಿಶೇಷ ಪ್ರಕರಣವೊಂದರಲ್ಲಿ ಮಹಾರಾಷ್ಟ್ರದ ಚಂದ್ರಾಪುರ್​ ಜಿಲ್ಲೆಯ ಸಿಮಾವರ್ತಿ ಜಿವಾತಿ ತಾಲೂಕಿನ ಮಹಾರಾಜಗುಡ ಗ್ರಾಮದ ಕುಟುಂಬವೊಂದು ಮಹಾರಾಷ್ಟ್ರ ಮತ್ತು ತೆಲಂಗಾಣದ ಗಡಿಗಳ ನಡುವೆ ವಾಸಿಸುತ್ತಿರುವುದಾಗಿ ವರದಿಯಾಗಿದೆ.

    ವಿಶೇಷ ಕುಟುಂಬದ ಹೆಸರು ಪವಾರ್​ ಕುಟುಂಬ. 13 ಸದಸ್ಯರುಳ್ಳ ಪವಾರ್​ ಕುಟುಂಬವು ಎರಡು ರಾಜ್ಯದ ಗಡಿಯನ್ನು ಹಂಚಿಕೊಂಡಿದೆ. ಗಂಡಿ ಹಂಚಿನ 14 ಗ್ರಾಮಗಳು ನಮಗೆ ಸೇರಬೇಕೆಂದು ಎರಡೂ ರಾಜ್ಯಗಳು ಬಹಳ ಹಿಂದಿನಿಂದಲೂ ಕಿತ್ತಾಡಿಕೊಂಡು ಬರುತ್ತಿವೆ. ಇದರ ನಡುವೆ ಪವಾರ್​ ಕುಟುಂಬ ಎರಡು ರಾಜ್ಯಗಳ ಗಡಿಯನ್ನು ಹಂಚಿಕೊಳ್ಳುವ ಮೂಲಕ ವಿಚಿತ್ರ ಅನುಭವವನ್ನು ಪಡೆಯುತ್ತಿದೆ.

    ಅಂದಹಾಗೆ ಪವಾರ್​ ಕುಟುಂಬ ಎರಡೂ ರಾಜ್ಯದ ಕಲ್ಯಾಣ ಕಾರ್ಯಕ್ರಮಗಳ ಅನುಕೂಲಗಳನ್ನು ಅನುಭವಿಸುತ್ತಿದೆ. ಅಲ್ಲದೆ, ತಮ್ಮ ವಾಹನಗಳಿಗೆ ಮಹಾರಾಷ್ಟ್ರ ಮತ್ತು ತೆಲಂಗಾಣ ನೋಂದಣಿ ಫಲಕವನ್ನು ಸಹ ಹೊಂದಿದ್ದಾರೆ. ಎರಡೂ ರಾಜ್ಯಕ್ಕೂ ತೆರಿಗೆ ಸಹ ಕಟ್ಟುತ್ತಿದ್ದಾರೆ. ಮಹಾರಾಜಗುಡ ಗ್ರಾಮದಲ್ಲಿರುವ 10 ಕೊಠಡಿಯ ಮನೆಯಲ್ಲಿ 4 ಕೋಣೆಗಳು ಮಹಾರಾಷ್ಟ್ರಕ್ಕೆ ಸೇರಿದರೆ, 4 ಕೊಠಡಿಗಳು ತೆಲಂಗಾಣಕ್ಕೆ ಸೇರಿವೆ. ಉಳಿದಂತೆ ಕಿಚನ್​ ತೆಲಂಗಾಣದ ಕಡೆ ಇದ್ದರೆ, ಬೆಡ್​ರೂಮ್​ ಮಹಾರಾಷ್ಟ್ರದ ಕಡೆ ಇದೆ. ಹಲವು ವರ್ಷಗಳಿಂದ ಕುಟುಂಬ ಆ ಮನೆಯಲ್ಲಿ ವಾಸ ಮಾಡುತ್ತಿದೆ.

    ಮನೆಯ ಮಾಲಿಕನ ಹೆಸರು ಉತ್ತಮ್ ಪವಾರ್​. ನಮ್ಮ ಮನೆಯನ್ನು ಮಹಾರಾಷ್ಟ್ರ ಮತ್ತು ತೆಲಂಗಾಣ ನಡುವೆ ವಿಂಗಡಿಸಲಾಗಿದೆ, ಆದರೆ ಇಲ್ಲಿಯವರೆಗೆ ನಮಗೆ ಯಾವುದೇ ತೊಂದರೆಯಾಗಿಲ್ಲ, ನಾವು ಎರಡೂ ರಾಜ್ಯಗಳಲ್ಲಿ ಆಸ್ತಿ ತೆರಿಗೆ ಪಾವತಿಸುತ್ತೇವೆ ಮತ್ತು ಎರಡೂ ರಾಜ್ಯಗಳ ಯೋಜನೆಗಳ ಲಾಭವನ್ನು ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.

    1969 ರಲ್ಲಿ ಗಡಿ ವಿವಾದ ಇತ್ಯರ್ಥವಾದಾಗ ಪವಾರ್ ಕುಟುಂಬದ ಭೂಮಿಯನ್ನು ಎರಡು ರಾಜ್ಯಗಳಾಗಿ ವಿಂಗಡಿಸಲಾಯಿತು. ಪರಿಣಾಮವಾಗಿ, ಮನೆಯೂ ಸಹ ವಿಭಜನೆಯಾಯಿತು. ಮಾಧ್ಯಮಗಳ ಪ್ರಕಾರ ಕಾನೂನುಬದ್ಧವಾಗಿ ಈ ಗ್ರಾಮಗಳು ಮಹಾರಾಷ್ಟ್ರದ ಭಾಗವಾಗಿದ್ದರೂ, ತೆಲಂಗಾಣ ಸರ್ಕಾರವು ತನ್ನ ಯೋಜನೆಗಳಿಂದ ಈ ಹಳ್ಳಿಗಳ ಜನರನ್ನು ನಿರಂತರವಾಗಿ ಆಕರ್ಷಿಸುತ್ತಿದೆ. (ಏಜೆನ್ಸೀಸ್​)

    ಪರಪುರುಷರ ಜೊತೆ ಸಹಕರಿಸುವಂತೆ ಹಿಂಸೆ ಮಾಡ್ತಿದ್ರು… ಕಣ್ಣೀರಿಡುತ್ತಲೇ ತಾನು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಲಕ್ಷ್ಮೀದೇವಿ

    ಕುರ್​ಕುರೆ ಥರದ ಪ್ಯಾಕೆಟ್​ನಲ್ಲಿ 500 ರೂ. ಗರಿ ಗರಿ ನೋಟು! ಖರೀದಿಗೆ ಮುಗಿಬಿದ್ದ ರಾಯಚೂರು ಜನ

    ಬೆಂಗಳೂರು ವಿಮಾನ ನಿಲ್ದಾಣ ಸ್ಫೋಟಿಸುವುದಾಗಿ ಟ್ವೀಟ್​ ಮೂಲಕ ಬೆದರಿಕೆ: ಎಫ್​ಐಆರ್​ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts