More

    VIDEO | ಶಿಮ್ಲಾದಲ್ಲಿ ದಿಢೀರ್​ ಭೂಕುಸಿತ; ಮನೆಗಳು ನೆಲಸಮ!

    ಹಿಮಾಚಲ ಪ್ರದೇಶ: ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಉತ್ತರಾಖಂಡ, ಹಿಮಾಚಲ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳು ಸಂಪೂರ್ಣವಾಗಿ ತತ್ತರಿಸಿದ್ದು, ಇದೀಗ ಶಿಮ್ಲಾದ ಕೃಷ್ಣಾನಗರದಲ್ಲಿ ಭೂಕುಸಿತ ಉಂಟಾಗಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಇದನ್ನೂ ಓದಿ: ಮೆಡಿಕಲ್ ಕಾಲೇಜ್‌ಗೆ 25 ಕೋಟಿ ರೂ. ಬಿಡುಗಡೆ; ಶೀಘ್ರವೇ ಸಿಎಂ ಅವರಿಂದ ಉದ್ಘಾಟನೆ; ಸಚಿವ ಶಿವಾನಂದ ಪಾಟೀಲ

    ಹಿಮಾಚಲ ಪ್ರದೇಶದ ಶಿಮ್ಲಾದ ಕೃಷ್ಣಾನಗರ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಹಲವು ಮನೆಗಳು ನೆಲಸಮಗೊಂಡಿದೆ. ಸದ್ಯದ ವರದಿಯ ಪ್ರಕಾರ, ಘಟನೆಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಭಾನುವಾರ (ಆಗಸ್ಟ್​ 13) ರಾತ್ರಿಯಿಂದ ಸುರಿದ ಭಾರಿ ಮಳೆಗೆ ಭೂಕುಸಿತ, ಮೇಘಸ್ಫೋಟ, ಕಟ್ಟಡ ಕುಸಿತ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.

    ಅಧಿಕಾರಿಗಳ ಪ್ರಕಾರ, ಶಿಮ್ಲಾದ ಸಮ್ಮರ್‌ಹಿಲ್ ಮತ್ತು ಫಾಗ್ಲಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಜನರು ಇನ್ನೂ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ತಿಳಿಸಲಾಗಿದೆ. ಇದೇ ರೀತಿಯ ಮತ್ತೊಂದು ಘಟನೆ ಉತ್ತರಪ್ರದೇಶದ ವೃಂದಾವನದಲ್ಲಿ ಸಂಭವಿಸಿದ್ದು, ಕಟ್ಟಡವೊಂದರ ಬಾಲ್ಕನಿ ಕುಸಿದು ಐವರು ಮೃತಪಟ್ಟಿದ್ದಾರೆ. ವೃಂದಾವನದ ಬಂಕೆ ಬಿಹಾರಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕುಸಿತದ ದೃಶ್ಯ ಸ್ಥಳದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ,(ಏಜೆನ್ಸೀಸ್).

    ವಿಶೇಷ ಸಂದರ್ಭಕ್ಕಾಗಿ ಭೇಟಿಯಾದ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮತ್ತು ಪರಶುರಾಮ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts