More

    ರಸ್ತೆಯ ಜತೆಗೆ ಬದುಕೂ ಮಳೆನೀರಲ್ಲಿ ಕೊಚ್ಚಿ ಹೋಯಿತು

    ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಭಾನುವಾರ ಮುಂಜಾನೆ ಅಂದಾಜು 2 ಗಂಟೆ ಸುರಿದ ಭಾರಿ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿದೆ. ನಗರದ ಹತ್ತಾರು ಕೆಳಸೇತುವೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದ್ದರೆ, ಇನ್ನೊಂದೆಡೆ ರಸ್ತೆಗಳು ಕುಸಿದಿವೆ.

    ದೆಹಲಿಯ ಐಟಿಒ ಬಳಿಯ ಅಣ್ಣಾನಗರದಲ್ಲಿ ರಸ್ತೆಯೊಂದು ಕುಸಿದಿತ್ತು. ಕುಸಿದ ರಸ್ತೆಯ ಗುಂಡಿಯೊಳಗೆ ನೀರು ಬೀಳುವ ರಭಸಕ್ಕೆ ರಸ್ತೆಯ ಪಕ್ಕದಲ್ಲಿದ್ದ ಮನೆ ಕೂಡ ಅದರೊಳಗೆ ಕುಸಿದು ಬಿತ್ತು. ಒಂದು ರೀತಿಯಲ್ಲಿ ಯಾವುದೋ ನದಿ ರಭಸವಾಗಿ ಹರಿಯುತ್ತಾ ಮನೆಯನ್ನು ಆಪೋಶನ ತೆಗೆದುಕೊಂಡಿತ್ತೇನೋ ಎಂಬಂತೆ ಭಾಸವಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

    ಇದನ್ನೂ ಓದಿ: ಮಳೆಯಿಂದ ನೀರು ತುಂಬಿದ್ದ ಕೆಳಸೇತುವೆಯಲ್ಲಿ ತೇಲಿದ ಶವ

    ಅದೃಷ್ಟವಶಾತ್​ ಯಾರೊಬ್ಬರೂ ಮನೆಯಲ್ಲಿ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಆ ಮನೆಯ ನಿವಾಸಿಗಳ ಬದುಕು ಕೊಚ್ಚಿ ಹೋಗಿರುವುದಂತೂ ನಿಜ.

    ಇದಕ್ಕೂ ಮುನ್ನ ನವದೆಹಲಿ ರೈಲು ನಿಲ್ದಾಣದ ಬಳಿಯ ಮಿಂಟೋ ಕೆಳಸೇತುವೆಯಲ್ಲಿ ನಿಂತಿದ್ದ ನೀರಿನಲ್ಲಿ ಮುಳುಗಿ ಸರಕು ಸಾಗಣೆ ಆಟೋರಿಕ್ಷಾ ಚಾಲಕ ಮೃತಪಟ್ಟಿದ್ದರು. ಈ ಮಳೆ ಭಾರಿ ಅನಾಹುತವನ್ನೇ ಸೃಷ್ಟಿಸಿರುವುದರಿಂದ, ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಸೌತ್​ನತ್ತ ದೀಪಿಕಾ ಪಡುಕೋಣೆ ಒಲವು; ತೆಲುಗು ಸ್ಟಾರ್ ನಟನ ಜತೆ ಕನ್ನಡತಿಯ ಸ್ಕ್ರೀನ್​ಶೇರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts