More

    ಹಿಂದಿಯಲ್ಲಿ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’: ದೀಪಿಕಾ ಪಡುಕೋಣೆ ಅಭಿನಯ

    ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ ನೆನಪಿರಬಹುದು. ‘ದಿ ಇಂಟರ್ನ್’ ಎಂಬ ಹಾಲಿವುಡ್ ಚಿತ್ರದ ಸ್ಪೂರ್ತಿಯಿಂದ ತಯಾರಾದ ಈ ಚಿತ್ರದಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

    ಈಗ ಈ ಚಿತ್ರ ಹಿಂದಿಯಲ್ಲಿ ಸಹ ತಯಾರಾಗುತ್ತಿದ್ದು, ಅನಂತ್ ನಾಗ್ ಅವರು ಮಾಡಿದ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ‘ದಿ ಇಂಟರ್ನ್’ ಚಿತ್ರವನ್ನು ರಿಮೇಕ್ ಮಾಡುವ ಪ್ರಕ್ರಿಯೆ ಕಳೆದ ವರ್ಷವೇ ಶುರುವಾಗಿತ್ತು. ರಿಷಿ ಕಪೂರ್ ಮತ್ತು ದೀಪಿಕಾ ಪಡುಕೋಣೆ ಅಭಿನಯದಲ್ಲಿ ಈ ಚಿತ್ರ ನಿರ್ವಣವಾಗಲಿದೆ ಎಂದು ಘೋಷಿಸಲಾಗಿತ್ತು.

    ಆದರೆ, ರಿಷಿ ಕಪೂರ್ ನಿಧನದಿಂದ ಈ ಚಿತ್ರ ಸ್ಥಗಿತವಾಗಿತ್ತು. ಇದೀಗ ರಿಷಿ ಮಾಡಬೇಕಿದ್ದ ಪಾತ್ರವನ್ನು ಅಮಿತಾಭ್ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರಂತೆ. ‘ತೇವರ್’, ‘ಬದಾಯಿ ಹೋ’ ಚಿತ್ರಗಳನ್ನು ನಿರ್ದೇಶಿಸಿರುವ ಅಮಿತ್ ಶರ್ಮಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದಷ್ಟೇ ಅಲ್ಲ, ಚಿತ್ರದ ನಿರ್ವಣದಲ್ಲೂ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಇದೇ ವರ್ಷ ನವೆಂಬರ್​ನಲ್ಲಿ ಪ್ರಾರಂಭವಾಗಲಿದ್ದು, 2022ರ ಬೇಸಿಗೆಯಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

    ಇಂದಿನಿಂದ ಪ್ರೈಂನಲ್ಲಿ ಯುವರತ್ನ ಹವಾ ಬಿಡುಗಡೆಯಾದ ಒಂದೇ ವಾರದಲ್ಲಿ ಓಟಿಟಿಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts