More

    ಲಾಕ್​ಡೌನ್​ ಸಮಯದಲ್ಲಿ ಶ್ರೀರಾಮನ ವನವಾಸ ಪಥ ಅರಸುತ್ತ…

    ನವದೆಹಲಿ: ಸ್ವಿಚ್​ ಆಫ್​ ಮಾಡಿದ ಒಂದು ನಿಮಿಷ 13 ಸೆಕೆಂಡ್​ ಬಳಿ ಫ್ಯಾನ್​ ತಿರುಗುವುದನ್ನು ನಿಲ್ಲಿಸುತ್ತೆ, ಮಾರಿ ಬಿಸ್ಕೆಟ್​ನಲ್ಲಿ 23 ತೂತುಗಳಿವೆ…. ಲಾಕ್​ಡೌನ್ ವೇಳೆ ​ಸಮಯ ಕಳೆಯೋಕೆ ಇಂಥದ್ದನ್ನೆಲ್ಲ ಮಾಡಬಹುದು… ಎಂಬೆಲ್ಲ ಜೋಕ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು.

    ಆದರೆ, ರಾಜಸ್ಥಾನದಲ್ಲಿ ಹೋಟೆಲ್​ಗಳ ಸರಣಿಯನ್ನೇ ಹೊಂದಿರುವ, ವಿವಿಧ ರಾಜ್ಯಗಳಲ್ಲಿ ಹಲವು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ 83 ವರ್ಷದ ಅಶೋಕ್​ಕುಮಾರ್​ ಮಾಡಿದ ಕಾರ್ಯ ನಿಜಕ್ಕೂ ಸ್ಪೂರ್ತಿದಾಯಕವೂ ಹೌದು… ಅಷ್ಟಕ್ಕೂ ಅಶೋಕ್​ಕುಮಾರ್​ ಲಾಕ್​ಡೌನ್​ ಅವಧಿಯಲ್ಲಿ ಮಾಡಿದ್ದಾದರೂ ಏನು ಎನ್ನುತ್ತೀರಾ…?

    ಅವರು ಸಂಪೂರ್ಣ ರಾಮಾಯಣವನ್ನೇ ಪರಾಂಬರಿಸಿ, 14 ವರ್ಷಗಳ ವನವಾಸದಲ್ಲಿ ಶ್ರೀರಾಮ ಪತ್ನಿ ಸೀತಾ ಹಾಗೂ ಸಹೋದರ ಲಕ್ಷ್ಮಣನ ಜತೆಗೆ ಎಲ್ಲೆಲ್ಲಿ ಸಂಚರಿಸಿದ್ದ ಎಂಬುದನ್ನು ಅಧ್ಯಯನ ಮಾಡಿದ್ದಾರೆ.

    ಇದನ್ನೂ ಓದಿ; ಮೇ 4 ರಿಂದ ಕೇದಾರನಾಥ ದರ್ಶನಕ್ಕೆ ಅವಕಾಶ, ಹಸಿರು ವಲಯದ ಜಿಲ್ಲೆಗಳ ಭಕ್ತರು ಭೇಟಿ ನೀಡಬಹುದು

    ಸಾಮಾನ್ಯವಾಗಿ ಯಾವುದಾದರೂ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದಾಗ, ಸ್ಥಳನಾಮ ಅಥವಾ ಐತಿಹ್ಯಗಳನ್ನು ಹೇಳುವಾಗ ರಾಮಾಯಣ ಅಥವಾ ಮಹಾಭಾರತದ ಉಲ್ಲೇಖ ಬಂದೇ ಬರುತ್ತದೆ. ಶ್ರೀರಾಮ ಆಗಮಿಸಿದ್ದ, ಸೀತೆ ಇಲ್ಲಿದ್ದಳು, ಬಲಭೀಮನ ಪಾದವಿದು, ಶ್ರೀರಾಮ ವನವಾಸವನ್ನು ಇಲ್ಲಿಯೇ ಕಳೆದಿದ್ದ ಎಂದೆಲ್ಲ ಹೇಳಲಾಗುತ್ತದೆ.

    ಶ್ರೀರಾಮ ಈಗಿನ ಉತ್ತರಪ್ರಪ್ರದೇಶದಲ್ಲಿರುವ ಅಯೋಧ್ಯೆಯಿಂದ ವನವಾಸ ಆರಂಭಿಸಿದ. ಕೊನೆಯದಾಗಿ ತಮಿಳುನಾಡಿನ ರಾಮೇಶ್ವರಕ್ಕೆ ಆಗಮಿಸಿದ ಅಲ್ಲಿಂದ ಲಂಕೆಗೆ ತೆರಳುತ್ತಾನೆ. ಶ್ರೀರಾಮ ವನವಾಸದ ಅವಧಿಯಲ್ಲಿ ಸಂಚರಿಸಿದ 195 ಸ್ಥಳಗಳಲ್ಲಿ ಅದಕ್ಕೆ ಸಂಬಂಧಿಸಿದ ಸ್ಮಾರಕಗಳಿವೆ. ಇವುಗಳು ರಾಮಾಯಣದೊಂದಿಗೆ ನೇರವಾದ ಸಂಬಂಧ ಹೊಂದಿವೆ ಎಂದು ಅಶೋಕ್​ ಕುಮಾರ್​ ಹೇಳುತ್ತಾರೆ.
    ತಮ್ಸಾ ತಾಲ್ (ಉತ್ತರಪ್ರದೇಶ), ಶ್ರೀಂಗವೇರಪುರ (ಉತ್ತರಪ್ರದೇಶ ಸಿಂಗ್ರೌರ್) ಭಾರಧ್ವಾಜ ಆಶ್ರಮ (ಅಲಹಾಬಾದ್​ ಸಮೀಪ), ಅತ್ರಿ ಆಶ್ರಮ, ಮಾರ್ಕಂಡೇಯ ಆಶ್ರಮ (ಉತ್ತರಪ್ರದೇಶದ ಮರ್ಕುಂಡಿ) ಚಿತ್ರಕೂಟ, ಪರ್ಣಕುಟಿ (ಗೋದಾವರಿ ನದಿ ತೀರ), ಪಂಚವಟಿ, ಸೀತಾ ಸರೋವರ, ರಾಮಕುಂಡ್​ ( ಮಹಾರಾಷ್ಟ್ರದ ನಾಸಿಕ್​ ), ಶಬರಿ ಆಶ್ರಮ, ಕಿಷ್ಕಿಂದಾ (ಕರ್ನಾಟಕದ ಕೊಪ್ಪಳ ಜಿಲ್ಲೆಯ ಆನೆಗೊಂದಿ), ಧನುಷ್ಕೋಟಿ, ರಾಮೇಶ್ವರ, (ತಮಿಳುನಾಡು) ಪ್ರಮುಖವಾಗಿವೆ.

    ಇದನ್ನೂ ಓದಿ; ಆಗಸ್ಟ್​ 15ರ ವೇಳೆಗೆ 2.5 ಕೋಟಿ ಜನರಿಗೆ ಹಬ್ಬಲಿದೆಯೇ ಕರೊನಾ?

    ಟಿವಿಯಲ್ಲಿ ರಾಮಾಯಣ ಧಾರಾವಾಹಿ ನೋಡುವ ಮಕ್ಕಳು ಶ್ರೀರಾಮ 14 ವರ್ಷ ವನವಾಸ ಹೋಗಿದ್ದು ನಿಜವೇ ಎಂದು ಪ್ರಶ್ನಿಸುತ್ತಾರೆ. ಹೀಗಾಗಿ ಅವರು ಎಲ್ಲೆಲ್ಲಿ ತೆರಳಿದ್ದರು ಎಂಬುದನ್ನು ಇಂದಿನ ಸ್ಥಳಗಳೊಂದಿಗೆ ಸಮೀಕರಿಸಿ ಹೇಳಬೇಕಾಗಿದೆ. ರಾಮ ಸಾಗಿದ ಹಾದಿಯನ್ನು ಭೂಗೋಳದ ಮೇಲೆ ಸ್ಪಷ್ಟವಾಗಿ ಗುರುತಿಸಬಹುದು. ರಾಮೇಶ್ವರದಲ್ಲಿ ರಾಮಸೇತು, ಶ್ರೀಲಂಕಾದಲ್ಲಿರುವ ಅಶೋಕ ವಾಟಿಕಾ, ಸೀತಾ ವಾಟಿಕಾ ಇಂದಿಗೂ ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ ಎಂದು ಅಶೋಕ್​ಕುಮಾರ್​ ಹೇಳುತ್ತಾರೆ.

    ಅಶೋಕ್​ಕುಮಾರ್​ ಅವರಿಗೆ ತಾವು ಕಂಡುಕೊಂಡಿದ್ದನ್ನು ಮಕ್ಕಳಿಗೂ ಹೇಳುವ ತವಕ. ಹೀಗಾಗಿ ರಾಮಾಯಣ, ಮಹಾಭಾರತ, ಚಾಣಕ್ಯನ ಕಾಲದ ಪ್ರದೇಶಗಳು ಹೇಗಿದ್ದವು? ಈಗ ಯಾವ ರೀತಿಯ ಭೌಗೋಳಿಕ ಬದಲಾವಣೆಗಳನ್ನು ಹೊಂದಿವೆ ಎಂಬುದನ್ನು ಅಧ್ಯಯನ ನಡೆಸುವಂತೆ ಕೆಲ ಪ್ರಾಧ್ಯಾಪಕರಿಗೆ ಸಲಹೆ ನೀಡಿದ್ದಾರೆ.

    ಇದನ್ನೂ ಓದಿ; ಇದು…. ಏಲಿಯನ್​ಗಳದ್ದೇ ಕೃತ್ಯ…!

    ಇದಲ್ಲದೇ, ಭಾರತದಲ್ಲಿ ಮೊಘಲರ ದಾಳಿಗೂ ಮುನ್ನ ಭಾರತ ಹೇಗಿತ್ತು ಎಂಬುದು ಸೇರಿ ನಾಲ್ಕು ವಿಭಿನ್ನ ನಕ್ಷೆಗಳನ್ನು ತಯಾರಿಸುವ ಉದ್ದೇಶವನ್ನು ಅಶೋಕ್​ಕುಮಾರ್​ ಹೊಂದಿದ್ದಾರೆ.

    ಇಷ್ಟಕ್ಕೂ ಅಶೋಕ್​ಕುಮಾರ್​ ಉತ್ತರಪ್ರದೇಶ, ಹರಿಯಾಣ, ಪಂಜಾಬ್​ನಲ್ಲಿ ಸೇಠ್​ ಮುಕುಂದಲಾಲ್​ ಸ್ಮಾರಕ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿದ್ದಾರೆ. 23,000ಕ್ಕೂ ಅಧಿಕ ಮಕ್ಕಳು ಈವರ ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ. ರಾಜಸ್ಥಾ ನದಲ್ಲಿ ವಾರ್ಷಿಕ 85 ಕೊಟಿ ರೂ.ಗಳ ವಹಿವಾಟು ನಡೆಸುವ ಮಾನ್​ಸಿಂಗ್​ ಹೋಟೇಲ್​ಗಳ ಒಡೆತನವೂ ಇವರದ್ದಾಗಿದೆ.

    ಅರಬ್ಬರು ತಿರುಗಿ ನೋಡುವಂತೆ ತೈಲ ಸಾಮ್ರಾಜ್ಯ ಕಟ್ಟಿದ ಭಾರತೀಯ ಆತ್ಮಹತ್ಯೆಗೆ ಶರಣಾಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts