More

    ಕರೊನಾ ರೋಗಿಗಾಗಿ ಮದುವೆ ಮಂಟಪವಾದ ಆಸ್ಪತ್ರೆ… ಪಿಪಿಇ ಕಿಟ್​ನಲ್ಲಿ ವಧು !

    ತಿರುವನಂತಪುರಂ : ಮದುವೆಯ ಕೆಲವೇ ದಿನಗಳ ಮುಂಚೆ ವರನು ಕರೊನಾ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಕೇರಳದ ಆಸ್ಪತ್ರೆಯೊಂದು ಮದುವೆ ಮಂಟಪವಾಗಿ ಬದಲಾದ ಪ್ರಸಂಗ ನಡೆದಿದೆ. ವೈದ್ಯಕೀಯ ಸಿಬ್ಬಂದಿ ಮತ್ತು ಕರೊನಾ ರೋಗಿಗಳ ಮಧ್ಯದಲ್ಲಿ ವಧು ಪಿಪಿಇ ಕಿಟ್ ಧರಿಸಿಕೊಂಡು ತಾಳಿ ಕಟ್ಟಿಸಿಕೊಂಡಿದ್ದಾಳೆ.

    ಕೇರಳದ ಕೈನಕರಿಯ ನಿವಾಸಿಯಾದ ಸರತ್ ಮೊನ್ ಅವರ ಮದುವೆ ಇಂದಿಗೆ (ಏಪ್ರಿಲ್ 25) ನಿಗದಿಯಾಗಿತ್ತು. ಆದರೆ ಕೆಲವು ದಿನಗಳ ಮುಂಚೆ ಮೊನ್ ಮತ್ತು ಆತನ ತಾಯಿ ಇಬ್ಬರಿಗೂ ಕರೊನಾ ಸೋಂಕು ತಗುಲಿತು. ಅಲಪುಜ್ಜಾ ಜಿಲ್ಲೆಯ ವಂಡಾನಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಬ್ಬರೂ ಚಿಕಿತ್ಸೆಗಾಗಿ ಭರ್ತಿಯಾದರು. ಆದರೆ ಇದರಿಂದ ಧೃತಿಗೆಡದ ವಧುವರರ ಕುಟುಂಬದವರು, ಮದುವೆಯನ್ನು ನಿಶ್ಚಯವಾದ ಮುಹೂರ್ತದಲ್ಲೇ ಪೂರೈಸುವ ನಿರ್ಧಾರ ಮಾಡಿದರು ಎನ್ನಲಾಗಿದೆ.

    ಇದನ್ನೂ ಓದಿ: ರೋಗಿಗಳ ಸಂಬಂಧಿಕರಂತೆ ಸೋಗು ಹಾಕಿ ರೆಮ್​ಡೆಸಿವಿರ್ ಸಂಗ್ರಹಿಸಿದ ಕಾಳಸಂತೆಕೋರರು !

    ಇದಕ್ಕಾಗಿ ಜಿಲ್ಲಾಧಿಕಾರಿ ಮತ್ತು ಆಸ್ಪತ್ರೆಯ ಮೇಲ್ವಿಚಾರಕರಾದ ಡಾ. ಆರ್.ವಿ.ರಾಮ್​ಲಾಲ್ ಅವರ ಅನುಮತಿಯೊಂದಿಗೆ ಆಸ್ಪತ್ರೆಯ ಕೋವಿಡ್​ ವಾರ್ಡ್​ ಮದುವೆ ಮಂಟಪವಾಗಿ ಮಾರ್ಪಾಟಾಯಿತು. ವಧುವಾದ ತೆಕ್ಕನರ್ಯಡ್​​ ನಿವಾಸಿ ಅಭಿರಾಮಿ, ತನ್ನ ಸಂಬಂಧಿಕರೊಬ್ಬರೊಡನೆ ಪಿಪಿಇ ಕಿಟ್​ ಧರಿಸಿಕೊಂಡು ಬಂದರು. ವಧುವರರು ಹೂಮಾಲೆಗಳನ್ನು ಬದಲಿಸಿಕೊಂಡರು ಎನ್ನಲಾಗಿದೆ.

    ಅಭಿರಾಮಿ ಸದ್ಯಕ್ಕೆ ತನ್ನ ಸಂಬಂಧಿಕರ ಮನೆಗೆ ತೆರಳಿದರೆ, ಸರತ್ ಮೊನ್ ಇನ್ನೂ ಕರೊನಾ ನೆಗೆಟೀವ್ ಬಂದು ಕ್ವಾರಂಟೈನ್​ ಮುಗಿಯುವವರೆಗೆ ಆಸ್ಪತ್ರೆಯಲ್ಲೇ ಇರಲಿದ್ದಾರೆ. ಈ ಮದುವೆಯ ಚಿತ್ರಗಳು ಮತ್ತು ವಿಡಿಯೋ ಜಾಲತಾಣದಲ್ಲಿ, ಸುದ್ದಿವಾಹಿನಿಗಳಲ್ಲಿ ವೈರಲ್ ಆಗುತ್ತಿವೆ. (ಏಜೆನ್ಸೀಸ್)

    ಭಾವ ಸತ್ತ ದಿನವೂ ಕರ್ತವ್ಯಕ್ಕೆ ಹಾಜರಾದ ಕರೊನಾ ವಾರಿಯರ್ !

    ಕರೊನಾದಿಂದ ಬೇಗ ಗುಣಮುಖವಾಗಿದ್ದಕ್ಕೆ ಕಾರಣ ಬಿಚ್ಚಿಟ್ಟ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts