More

    ಅಹಮದಾಬಾದ್​ ಆಸ್ಪತ್ರೆಯಲ್ಲಿ ಧರ್ಮ ಆಧರಿಸಿ ಪ್ರತ್ಯೇಕ ವಾರ್ಡ್​ನಲ್ಲಿ ಕೋವಿಡ್​ ರೋಗಿಗಳಿಗೆ ಚಿಕಿತ್ಸೆ

    ಅಹಮದಾಬಾದ್​: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ಸಂಕಿತರನ್ಉ ಧರ್ಮದ ಆಧಾರದಲ್ಲಿ ವಿಭಜಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರದ ಆದೇಶದ ಮೇರೆಗೆ ಈ ವಿಭಜನೆ ಮಾಡಲಾಗಿದೆ ಎಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ಸ್ಪಷ್ಟಪಡಿಸಿದ್ದಾರೆ ಎಂದು ಇಂಡಿಯನ್​ ಎಕ್ಸಪ್ರೆಸ್​ ವರದಿ ಮಾಡಿದೆ.

    ಸರ್ಕಾರಿ ಆಸ್ಪತ್ರೆಯಲ್ಲಿ 1,200 ಹಾಸಿಗೆಗಳನ್ನು ಹೊಂದಿದ್ದು, ಕೋವಿಡ್​-19 ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
    ಸಾಮಾನ್ಯವಾಗಿ ಪುರುಷ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ವಾರ್ಡ್​ಗಳನ್ನು ಮಾಡಲಾಗುತ್ತಿದೆ. ಆದರೆ ನಾವಿಲ್ಲಿ, ಹಿಂದು ಹಾಗೂ ಮುಸ್ಲಿಮರಿಗಾಗಿ ಪ್ರತ್ಯೇಕ ವಾರ್ಡ್​ ಮಾಡಿದ್ದೇವೆ. ಇದನ್ನು ಸರ್ಕಾರದ ಆದೇಶದನ್ವಯವೇ ಈ ಕ್ರಮ ಕೈಗೊಂಡಿದ್ದಾಗಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಗುಣವಂತ್​ ಎಚ್​. ರಾಠೋಡ್​ ತಿಳಿಸಿದ್ದಾರೆ ಎನ್ನಲಾಗಿದೆ.

    ಈ ಬಗ್ಗೆ ತನಗೇನೂ ಮಾಹಿತಿಯಿಲ್ಲ, ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ಪ್ರತಿಕ್ರಿಯಿಸುವುದಾಗಿ ಡಿಸಿಎಂ ಹಾಗೂ ಆರೋಗ್ಯ ಸಚಿವ ನಿತಿನ್​ ಪಟೇಲ್​ ತಿಳಿಸಿದ್ದಾರೆ.

    ಭಾನುವಾರ ರಾತ್ರಿ ವಾರ್ಡ್​ವೊಂದರಲ್ಲಿ ದಾಖಲಾಗಿದ್ದ 28 ಜನರ ಹೆಸರುಗಳನ್ನು ಕರೆಯಲಾಯಿತು. ಬಳಿಕ ಅವರನ್ನು ಮತ್ತೊಂದು ವಾರ್ಡ್​ಗೆ ಸ್ಥಳಾಂತರಿಸಲಾಯಿತು. ಯಾಕೆ ಹೀಗೆ ಮಾಡಲಾಗುತ್ತಿದೆ ಎಂಬುದನ್ನು ತಿಳಿಸಲಿಲ್ಲ. ಹಾಗೇ ಪ್ರತ್ಯೇಕ ಮಾಡಲ್ಪಟ್ಟವರೆಲ್ಲ ಒಂದು ಕೋಮಿಗೆ ಸೇರಿದವರಾಗಿದ್ದರು ಎಂದು ರೋಗಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಲ್ಲಿದೆ.

    ಎರಡೂ ಧರ್ಮದವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಪ್ರತ್ಯೇಕಿಸಲಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿಯೊಬ್ಬರು ತಿಳಿಸಿದ್ದಾಗಿ ರೋಗಿಯೊಬ್ಬರು ಹೇಳಿದ್ದಾರೆ.

    ಪ್ರತ್ಯೇಕಿಸಲು ಕಾರಣವೇನಾದರೂ ಇದೆಯೇ ಎಂಬ ಪ್ರಶ್ನೆಗೆ ಅದನ್ನು ನೀವು ಸರ್ಕಾರವನ್ನೇ ಕೇಳಬೇಕೆಂದು ರಾಠೋಡ್​ ಹೇಳಿದ್ದಾಗಿ ತಿಳಿಸಲಾಗಿದೆ.

    ವೈದ್ಯಕೀಯ ಮಾನದಂಡದ ಪ್ರಕಾರ ಸೋಂಕಿತರನ್ನು ಹಾಗೂ ಶಂಕಿತರನ್ನು ಪ್ರತ್ಯೇಕವಾಗಿ ಇಡಲಾಗುತ್ತದೆ. ಆಸ್ಪತ್ರೆಗೆ ದಾಖಲಾಗಿರುವ 186 ಜನರ ಪೈಕಿ 150 ಜನರಿಗೆ ಸೋಂಕು ದೃಢಪಟ್ಟಿದೆ. ಈ 150 ಜನರಲ್ಲಿ 40 ಜನರು ಒಂದು ಕೋಮಿಗೆ ಸೇರಿದವರಾಗಿದ್ದಾರೆ ಎನ್ನಲಾಗಿದೆ.

    ತ್ರೀ ಈಡಿಯಟ್​ ಚಿತ್ರದ ಸನ್ನಿವೇಶದಂತೆಯೇ ನಡೆದು ಹೋಯ್ತು, ಅಂತ್ಯ ಮಾತ್ರ ನೀವಂದುಕೊಂಡಂತಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts