More

    ಕರೊನಾ ಲಸಿಕೆ ಪಡೆದಿದ್ದ ಆಸ್ಪತ್ರೆ ಸಿಬ್ಬಂದಿ 3 ದಿನದ ಬಳಿಕ ಸಾವು!

    ಬಳ್ಳಾರಿ: ಕರೊನಾ ಲಸಿಕೆ ತೆಗೆದುಕೊಂಡ ಮೂರು ದಿನಗಳ ಬಳಿಕ ಡಿ ಗ್ರೂಪ್ ನೌಕರರೊಬ್ಬರು ಸಂಡೂರಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಸಂಡೂರು ಸರ್ಕಾರಿ ಆಸ್ಪತ್ರೆಯ ಡಿ ಗ್ರೂಪ್ ನೌಕರ ನಾಗರಾಜ್ (43) ಮೃತ. ಲಸಿಕೆ ಪಡೆದ ಬಳಿಕ ಆರಾಮಾಗಿದ್ದ ನಾಗರಾಜ್ ನಿನ್ನೆ(ಭಾನುವಾರ) ಮತ್ತು ಇಂದು(ಸೋಮವಾರ) ಕೆಲಸಕ್ಕೆ ಹಾಜರಾಗಿದ್ದರು. ಆದರೆ, ಇಂದು ಹೃದಯಾಘಾತವಾಗಿದ್ದು, ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿರಿ ಧಾರವಾಡದಲ್ಲಿ ಭೀಕರ ಅಪಘಾತಕ್ಕೆ 11 ಜನ ಬಲಿ! ಆ ಕ್ಷಣ ಕುರಿತು ಗಾಯಾಳು ಬಿಚ್ಚಿಟ್ಟ ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ

    ನಾಗರಾಜ್ ಸಾವಿಗೆ ಕರೊನಾ ಲಸಿಕೆ ಕಾರಣ ಅಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ನಾಗರಾಜ್ ಮೃತದೇಹವನ್ನು ಪರೀಕ್ಷೆ ಮಾಡಲಾಗುತ್ತಿದ್ದು, ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಸಂಡೂರು ಲಸಿಕಾ ಕೇಂದ್ರದಲ್ಲಿ ಸುಮಾರು 58 ಜನರಿಗೆ‌ ಲಸಿಕೆ ನೀಡಲಾಗಿತ್ತು. ಬೇರೆ ಯಾರಿಗೂ ಯಾವುದೇ ರೀತಿಯಲ್ಲಿ ತೊಂದರೆಯಾಗಿಲ್ಲ.

    ಉತ್ತರ ಪ್ರದೇಶದಲ್ಲೂ ಸಾವು: ಕರೊನಾ ಲಸಿಕೆ ಪಡೆದ ಮರುದಿನವೇ ಉತ್ತರ ಪ್ರದೇಶದ ಮೊರಾದಾಬಾದ್​ನ ಸರ್ಕಾರಿ ಆಸ್ಪತ್ರೆಯ ವಾರ್ಡ್​ ಬಾಯ್​ ಮಹಿಪಾಲ್​ ಸಿಂಗ್(46)​ ಕೂಡ ಮೃತಪಟ್ಟಿದ್ದಾನೆ. ಈತ ಜ.16ರ ಮಧ್ಯಾಹ್ನ ಕರೊನಾ ಲಸಿಕೆ ಪಡೆದಿದ್ದ. ಭಾನುವಾರ ಸಂಜೆ ಮೃತಪಟ್ಟಿದ್ದಾನೆ. ಸಾಯುವ ಮುನ್ನ ಎದೆ ನೋವು ಎಂದು ಹೇಳಿದ್ದು, ಉಸಿರಾಡಲು ತೊಂದರೆಯಾಗಿತ್ತೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಆತ ಲಸಿಕೆ ಪಡೆಯುವುದಕ್ಕೂ ಮುನ್ನವೇ ಅನಾರೋಗ್ಯದಿಂದ ಬಳಲುತ್ತಿದ್ದ. ಸಾವಿಗೆ ಲಸಿಕೆ ಕಾರಣ ಅಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರಾದರೂ, ಲಸಿಕೆ ಪಡೆದ ನಂತರವೇ ಆತ ಹೆಚ್ಚು ಅಸ್ವಸ್ಥನಾಗಿದ್ದ ಕುಟುಂಬ ದೂರಿದೆ.

    ಕರೊನಾ ಲಸಿಕೆ ಪಡೆದ ಮೇಲೆ ಏನೆಲ್ಲ ಆಗಬಹುದು?; ಇಲ್ಲಿವೆ ನೋಡಿ ಅಡ್ಡಪರಿಣಾಮಗಳ ಮಾಹಿತಿ…

    ವರ್ಷಗಳ ನಂತರ ಒಟ್ಟಿಗೆ ಗೋವಾಕ್ಕೆ ಹೊರಟಿದ್ದ ಶಾಲಾ ಗೆಳತಿಯರ ದುರಂತ ಅಂತ್ಯ! ಮನಕಲಕುತ್ತೆ ಕೊನೇ ವಾಟ್ಸ್​ಆ್ಯಪ್​ ಸ್ಟೇಟಸ್

    ಈ ಒಂದು ನಿರ್ಧಾರವೇ ದುರಂತ ಸಾವಿಗೆ ಕಾರಣವಾಯ್ತಾ? ಮೃತರ ಸಂಬಂಧಿ ಗೋಳಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts