More

    ವೈಚಾರಿಕ ಮನೋಭಾವ ಬೆಳೆಸಿಕೊಳ್ಳಿ

    ಹೊಸಪೇಟೆ: ವೈಜ್ಞಾನಿಕ, ವೈಚಾರಿಕ ಮನೋಭಾವ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಸಂಘಟನೆಯನ್ನು ಜನ ಸಾಮಾನ್ಯರತ್ತ ಕೊಂಡೊಯ್ಯುವ ಕೆಲಸ ಆಗಬೇಕಾಗಿದೆ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಹೇಳಿದರು.

    ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಆಯೋಜಿಸಿದ್ದ ಸಂಘಟನಾ ಸಭೆ ಉದ್ಘಾಟಿಸಿ ಮಾತನಾಡಿದರು.
    ರಾಜ್ಯದಲ್ಲಿ ನಡೆಯುತ್ತಿರುವ ಕಂದಾಚಾರ ಹಾಗೂ ಮೂಢ ನಂಬಿಕೆಗಳನ್ನು ದೂರಗೊಳಿಸಿ, ಭಯಮುಕ್ತ ಸಮಾಜ ನಿರ್ಮಾಣ ಮಾಡುವ ಕೆಲಸವನ್ನು ಸಂಸ್ಥೆಯು ನಿರಂತರವಾಗಿ ನಿರ್ವಹಿಸುತ್ತಿದೆ. ಜನಸಾಮಾನ್ಯರಲ್ಲಿ ನೆಮ್ಮದಿಯ ಜೀವನ ನಡೆಸುವಂತಹ ವಾತಾವರಣ ನಿರ್ಮಾಣ ಮಾಡಬೇಕಾಗಿದೆ. ಈ ಪರಿಷತ್ ಆರಂಭವಾಗಿ ಮೂರು ವರ್ಷ ಯಶಸ್ವಿಯಾಗಿ ಪೊರೈಸಿದೆ. ಈಗಾಗಲೇ ರಾಜ್ಯದ ಉದ್ದಗಲಕ್ಕೂ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗಳನ್ನು ಬೆಳೆಸಲಾಗುತ್ತಿದೆ. ಪ್ರತಿ ವರ್ಷ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ, ಕಾಯಕ ಯೋಗಿ ದಿನಾಚರಣೆ, ಎಚ್.ಎನ್ ಪ್ರಶಸ್ತಿ, ಯುವ ಸಮಾವೇಶ, ನಾಯಕತ್ವ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿವೆ. ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಿತಿಗಳು ರಚನೆಯಾಗಿದ್ದು ಸ್ಥಳೀಯ ಮಟ್ಟದಲ್ಲಿ ಒಳ್ಳೆಯ ಕೆಲಸ ಮಾಡುತ್ತಿವೆ ಎಂದರು.

    ಸಂಸ್ಥೆಯ ಪದಾಧಿಕಾರಿಗಳಾದ ಹಂಪಿಕೆರೆ ರಾಜೇಂದ್ರ, ಚಿಕ್ಕ ಹನುಮಂತೇಗೌಡ, ವಿ.ಟಿ.ಸ್ವಾಮಿ, ಇರ್ಷಾದ್ ಅಹ್ಮದ್, ಕೆ.ಪಿ.ಲಕ್ಷ್ಮೀನಾರಾಯಣ, ಹೊಂಬಾಳ್, ಆನಂದ್ ಕುಲಕರ್ಣಿ, ಡಾ.ಪಲ್ಲವಿಮಣಿ, ಅರುಣ್ ಕುಮಾರ್, ಮದುರಾ ಅಶೋಕ ಕುಮಾರ್, ಸಿದ್ದಲಿಂಗಮ್ಮ, ರತ್ನಸಂಗಟಿ, ಡಾ.ಉಷಾ, ಶರಣಬಸವ ಕಲ್ಲ, ಮಲ್ಲಿಕಾರ್ಜುನಯ್ಯ, ಬಿ.ಡಿ.ರವಿಕುಮಾರ್, ಚನ್ನಬಸವ ಸ್ವಾಮಿ, ಸುರೇಶ್, ಕಿಚಿಡಿ ಕೊಟ್ರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts