More

    ನಗರಸಭೆ ವಿಶೇಷ ಸಾಮಾನ್ಯ ಸಭೆ ಬಹಿಷ್ಕಾರ
    ಬಿಜೆಪಿ, ಬೆಂಬಲಿತರ ವಾರ್ಡ್ ಗಳಿಗೆ ಮಾತ್ರ ಮನ್ನಣೆ: ಸದಸ್ಯರ ಆಕ್ರೋಶ

    ಹೊಸಪೇಟೆ: ನಗರಸಭೆ ಸದಸ್ಯರ ಮಧ್ಯೆ ಅಧ್ಯಕ್ಷರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರು ವಿಶೇಷ ತುರ್ತು ಸಭೆಗೆ ಗೈರು ಆಗುವ ಮೂಲಕ ಪ್ರತಿಭಟನೆ ಪ್ರದರ್ಶಿಸಿದರು.
    ಕಾಂಗ್ರೆಸ್ ಸದಸ್ಯರಾದ ರಾಧಾ ಮಲ್ಲಿಕಾರ್ಜುನ, ಲಕ್ಷ್ಮಿ ಪರಗಂಟಿ, ರಾಘವೇಂದ್ರ ಕನಕಮ್ಮ, ಎಚ್.ಮುನ್ನಿ ಖಾಸಿಂ ಅಲಿ ಸೇರಿದಂತೆ ೧೦ಕ್ಕೂ ಹೆಚ್ಚು ಜನರು ನಗರಸಭೆಗೆ ಆಗಮಿಸಿದ್ದರೂ, ಸಭಾಂಗಣ ಪ್ರವೇಶಿಸದೇ ಸಭೆ ಬಹಿಷ್ಕರಿಸಿದರು.
    ನಗರಸಭೆ ಅಧ್ಯಕ್ಷೆ ಸುಂಕಮ್ಮ ಅವರು ನಗರದ ವಾರ್ಡ್ ಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಮಲತಾಯಿ ಧೋರಣೆ ತೋರುತ್ತಿದ್ದಾರೆ. ನಮ್ಮ ವಾರ್ಡ್ ಗಳಿಗೆ ಅನುದಾನ ನೀಡುತ್ತಿಲ್ಲ. ಬಿಜೆಪಿ ಹಾಗೂ ಬೆಂಬಲಿತ ಸದಸ್ಯರ ವಾರ್ಡ್ ಗಳಿಗೆ ಮಾತ್ರ ಮಾನ್ಯತೆ ನೀಡುತ್ತಿದ್ದಾರೆ.‌ ಇತರೆ ವಾರ್ಡ್ ಗಳ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.
    ಪಕ್ಕದಲ್ಲೇ ಜಲಾಶಯ ಇದ್ದರೂ, ನಮ್ಮ ವಾರ್ಡ್ ಗೆ ನೀರು ಪೂರೈಕೆಯಾಗುತ್ತಿಲ್ಲ. ಬೀದಿ ದೀಪಗಳು ನಿರ್ವಹಣೆಯಾಗುತ್ತಿಲ್ಲ. ತಮಗೆ ಬೇಕಾದ ವಾರ್ಡ್ ಗಳಿಗೆ ಹೈ ಮಾಸ್ ವಿದ್ಯುತ್ ದೀಪಗಳನ್ನು ಅಳವಡಿಸುತ್ತಾರೆ. ನಾವು ಹಣ ಕೇಳಲ್ಲ. ಊಟ ಕೇಳುತ್ತಿಲ್ಲ. ಕನಿಷ್ಟ ನೀರು ಕೊಡಲಾಗದು ಎಂದರೆ ಹೇಗೆ ಎಂದು ಸ್ಥಳೀಯರು ನಮಗೆ ಛೀಮಾರಿ ಹಾಕುತ್ತಿದ್ದಾರೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts