More

    ಹೊಸಪೇಟೆ ಸ್ಲಂ ನಿವಾಸಿಗಳಿಗೆ 11,256 ಸಾವಿರ ಲೀ. ಹಾಲು ವಿತರಣೆ, ಅರಣ್ಯ ಸಚಿವ ಆನಂದಸಿಂಗ್ ಚಾಲನೆ

    ಹೊಸಪೇಟೆ: ತಾಲೂಕಿನ ಸ್ಲಂ ನಿವಾಸಿಗಳು, ಕಟ್ಟಡ ಕಾರ್ಮಿಕರು ಹಾಗೂ ನಿರಾಶ್ರಿತರಿಗೆ ಹಾಲು ವಿತರಣೆ ಕಾರ್ಯಕ್ರಮಕ್ಕೆ ಅರಣ್ಯ ಸಚಿವ ಆನಂದಸಿಂಗ್ ಶನಿವಾರ ಚಾಲನೆ ನೀಡಿದರು.

    ನಗರದ ಹೊರವಲಯದ ಸುಡುಗಾಡು ಸಿದ್ಧರ ಆಶ್ರಯ ಕಾಲನಿ ನಿವಾಸಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಹಾಲು ವಿತರಣೆ ಮಾಡಲಾಯಿತು. ನಗರದ 53 ಸ್ಲಂಗಳಿಗೆ 9,206 ಲೀ.ಹಾಲು, ನಿರಾಶ್ರಿತ ಕೇಂದ್ರಕ್ಕೆ 50 ಲೀ, ಹಾಗೂ ತಾಲೂಕಿನ ಕಮಲಾಪುರಕ್ಕೆ 2000 ಲೀ. ಹಾಲು ಸೇರಿ ಒಟ್ಟು 11256 ಲೀಟರ್ ಹಾಲು ವಿತರಿಸಲಾಯಿತು. ನಗರದ ಪ್ರದೇಶದಲ್ಲಿ ತಲಾ ಐದು ವಾರ್ಡ್‌ಗೊಂದರಂತೆ 7 ವಾಹನಗಳ ಮೂಲಕ ಹಾಲು ವಿತರಣೆ ಕಾರ್ಯ ನಡೆಯಿತು.

    ಪೌರಾಯುಕ್ತರು ಹಾಗೂ ಏಳು ಜನ ನೋಡಲ್ ಅಧಿಕಾರಿಗಳಿಗೆ ಜವಾಬ್ದಾರಿವಹಿಸಿದ್ದು, ಬೆಳಗ್ಗೆ 4ಕ್ಕೆ ಹಾಲು ವಿತರಣೆ ಕಾರ್ಯ ಆರಂಭಿಸುತ್ತಾರೆ.

    ಹಾಲು ವಿತರಣೆಗೆ ವಿರೊಧ: ನಗರದ ಅನಂತಶಯನಗುಡಿ ಸೇರಿ ಕೆಲವಡೆ ಹಾಲು ವಿತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಪೌರಾಯುಕ್ತೆ ಜಯಲಕ್ಷ್ಮೀ ಪ್ರತಿಕ್ರಿಯಿಸಿ, ನಗರದಲ್ಲಿ 53 ಸ್ಲಂಗಳಿದ್ದು, ಕೊಳೆಗೇರಿ, ಕಟ್ಟಡ ಕಾರ್ಮಿಕರು ಹಾಗೂ ವಲಸೆಗರಿಗೆ ಟೋಕನ್ ನೀಡಲಾಗಿದೆ. ಸರ್ಕಾರ ಸೂಚಿಸಿದಂತೆ ಹಾಲು ವಿತರಿಸಿದ್ದು, ತಾರತಮ್ಯ ಮಾಡಿಲ್ಲ. ಇಲಾಖೆಯಲ್ಲಿ ಗುರುತಿಸಿಕೊಳ್ಳದವರಿಗೆ ತಾತ್ಕಾಲಿಕ ತೊಂದರೆಯಾಗಿರಬಹುದು. ಅರ್ಹರಿಗೆ ಹಾಲು ವಿತರಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts