More

    ಮೀಸಲಾತಿ ರದ್ದತಿಗೆ ಮುಸ್ಲಿಮರ ಆಕ್ರೋಶ

    ಹೊಸಪೇಟೆ: ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಮೀಸಲಾತಿಯನ್ನು ರದ್ದುಗೊಳಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಅಂಜುಮನ್ ಖಿದ್ಮತೆ ಇ-ಇಸ್ಲಾಂ ನೇತೃತ್ವದಲ್ಲಿ ನೂರಾರು ಜನ ತಹಸೀಲ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ಇಲ್ಲದ ಕಾರಣ ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ವರ್ಗವೆಂದು ವೈಜ್ಞಾನಿಕ ಅಧ್ಯಯನದ ಮೂಲಕ ಗುರುತಿಸಿ ಮುಸ್ಲಿಮರಿಗೆ ಹಿಂದುಳಿದ ಪ್ರವರ್ಗ 2ಬಿ ಕಲ್ಪಿಸಲಾಗಿತ್ತು. ಆದರೆ, ರಾಜ್ಯ ಬಿಜೆಪಿ ಸರ್ಕಾರ ಈ ಮೀಸಲಾತಿಯನ್ನು ರದ್ದುಗೊಳಿಸಿದೆ. ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಭಾರತ ಸ್ವತಂತ್ರ್ಯದ ನಂತರ ನಾಗನಗೌಡ ಸಮಿತಿ, ವೆಂಕಟಸ್ವಾಮಿ ಆಯೋಗ ಮತ್ತು 1990ರ ಚಿನ್ನಪ್ಪ ರೆಡ್ಡಿ ಆಯೋಗ ಮುಸ್ಲಿಮರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿವೆ. ಮುಸ್ಲಿಮರ ಅಭಿವೃದ್ಧಿಗೆ ತಡೆಯೊಡ್ಡಬೇಕೆಂಬ ಉದ್ದೇಶದಿಂದ ಹೀಗೆ ಮಾಡಿದ್ದು ಅಸಂವಿಧಾನಿಕ ಎಂದು ತರಾಟೆಗೆ ತೆಗೆದುಕೊಂಡರು.

    ಸರ್ಕಾರ ನಿರ್ಧಾರ ಬದಲಾಯಿಸಿ, ಮುಸ್ಲಿಮರ ಹಿತದೃಷ್ಟಿಯಿಂದ 2ಬಿ ಮೀಸಲಾತಿಯನ್ನು ಯಥಾಸ್ಥಿತಿ ಮುಂದುವರಿಸಬೇಕು ಎಂದು ಆಗ್ರಹಿಸಿದರು. ಸಂಘದ ಖಜಾಂಚಿ ಬಿ.ಅನ್ಸರ್ ಬಾಷಾ, ಪ್ರಮುಖರಾದ ಗುಲಾಂ ರಸೂಲ್, ಮೋಸಿನ್ ಕೋತ್ವಾಲ್, ಸದ್ದಾಮ್ ಹುಸೇನ್, ಸೈಯದ್ ಅಬ್ದುಲ್ ಖಾದರ್ ರಫಾಯಿ, ಮನ್ಸೂರ್ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts