More

    ಕಲುಷಿತ ನೀರಿಂದ 14 ಜನ ಅಸ್ವಸ್ಥ

    ಹೊಸಪೇಟೆ : ನಗರದ ಹೊರವಲಯದ ಕಾರಿಗನೂರಿನಲ್ಲಿ ಕಲುಷಿತ ನೀರು ಸೇವಿಸಿ 14 ಜನ ಅಸ್ವಸ್ಥಗೊಂಡಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇದನ್ನೂ ಓದಿ : ತುಂಗಾ ನದಿಗೆ ಕಲುಷಿತ ನೀರು ತಡೆಗೆ ಮಾರ್ಚ್ ಅಂತ್ಯದ ಗಡುವು

    ರಸ್ತೆ ಕಾಮಗಾರಿಯಿಂದ ಕುಡಿವ ನೀರಿನ ಪೈಪ್ ಒಡೆದು ಅದಕ್ಕೆ ಚರಂಡಿ ನೀರು ಸೇರಿದ್ದಿರಿಂದ ಹೀಗಾಗಿದೆ ಎಂಬುದು ಗ್ರಾಮಸ್ಥರ ಆರೋಪ. ಅಧಿಕಾರಿಗಳು ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲವೆAದು ಎನ್ನುತ್ತಿದ್ದಾರೆ.

    ರಸ್ತೆ ಕಾಮಗಾರಿಯಿಂದ ಕಾರಿಗನೂರಿನ ಬಡಾವಣೆಗೆ ಕೆಲ ದಿನಗಳಿಂದ ನೀರು ಪುರೈಕೆಯಾಗಿಲ್ಲ. ಶುಕ್ರವಾರದಿಂದ ಸರಬರಾಜು ಮಾಡಲಾಗುತ್ತಿದೆ. ಇದೇ ನೀರು ಕುಡಿದು ಶುಕ್ರವಾರ ಸಂಜೆ 9 ಜನ ಅಸ್ವಸ್ಥಗೊಂಡರೆ, ಶನಿವಾರ 5 ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದ್ದು, 100 ಹಾಸಿಗೆ ರ‍್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಿದ್ದು, ವರದಿ ಬರಬೇಕಿದೆ. ಅಸ್ವಸ್ಥಗೊಂಡ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದು, ಯಾವುದೇ ಪ್ರಾಣಾಪಾಯವಿಲ್ಲ. ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಎಂದು ಡಿಎಚ್‌ಒ ಶಂಕರ್ ನಾಯ್ಕ ತಿಳಿಸಿದ್ದಾರೆ.

    ಯಾವುದು ಸತ್ಯ

    ಕಲುಷಿತ ನೀರು ಕುಡಿದು ಶುಕ್ರವಾರ-ಶನಿವಾರ ರ‍್ಕಾರಿ ಆಸ್ಪತ್ರೆಯಲ್ಲಿ 15ಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ 30ಕ್ಕೂ ಹೆಚ್ಚು ಜನ ದಾಖಲಾಗಿದ್ದಾರೆ. ಆದರೆ, ಅಧಿಕಾರಿಗಳು ಕೇವಲ 14 ಜನ ಅಸ್ವಸ್ಥರಾಗಿದ್ದಾರೆಂದು ಸುಳ್ಳು ಹೇಳುತ್ತಿದ್ದು, ಪ್ರಕರಣ ಮುಚ್ಚಿಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭ

    ಕಾರಿಗನೂರಿನಲ್ಲಿ ವಾಂತಿ-ಭೇದಿ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಆರೋಗ್ಯ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಆರೋಗ್ಯ ನಿರೀಕ್ಷಣಾಧಿಕಾರಿಗಳು ಸ್ಥಳದಲ್ಲಿದ್ದು, ಜನರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಅಶಾ ಕರ‍್ಯರ‍್ತೆಯರು ಮನೆ ಮನೆ ಸಮೀಕ್ಷೆ ಕೈಗೊಂಡು ಅಗತ್ಯ ಔಷಧ ನೀಡುವುದರೊಂದಿಗೆ ನೀರನ್ನು ಕುದಿಸಿ ಆರಿಸಿ ಕುಡಿಯುವಂತೆ ಜಾಗೃತಿ ಮೂಡಿಸುತ್ತಿದ್ದಾರೆಂದು ಡಿಎಚ್‌ಒ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts