More

    ಹೊಸಪೇಟೆಯಲ್ಲಿ ಪಾಲಿಶ್ ನೆಪದಲ್ಲಿ ಅತ್ತೆ-ಸೊಸೆಗೆ ವಂಚನೆ, 3 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ

    ಹೊಸಪೇಟೆ: ಗೋಕುಲನಗರದಲ್ಲಿ ಚಿನ್ನ ಪಾಲಿಶ್ ಮಾಡಿಕೊಡುವುದಾಗಿ ಹೇಳಿ ಇಬ್ಬರು ಅಪರಿಚಿತರು ಬುಧವಾರ ಅತ್ತೆ-ಸೊಸೆಗೆ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಂಚಿಸಿದ್ದಾರೆ. ಗೋಕುಲನಗರದ ಶಾಲಿನಿ ನವೀನ್(ಸೊಸೆ), ಹೇಮಲತಾ ಉಷಾ(ಅತ್ತೆ) ಮೋಸ ಹೋಗಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಘಟನೆ ವಿವರ: ಬುಧವಾರ ಮಧ್ಯಾಹ್ನ ಅಪಾರ್ಟ್‌ಮೆಂಟ್‌ಗೆ ಬಂದಿದ್ದ ಇಬ್ಬರು ಅಪರಿಚಿತರು ಬೆಳ್ಳಿ, ಚಿನ್ನಾಭರಣ ಹೊಳೆಯುವಂತೆ ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿದ್ದಾರೆ. ಬಳಿಕ ಶಾಲಿನಿ ಕಾಲಿನ ಚೈನ್ ಮತ್ತು ಬೆಳ್ಳಿ ಬಟ್ಟಲು ತಂದು ಕೊಟ್ಟಾಗ ಹೊಸವೆಂಬಂತೆ ಪಾಲಿಶ್ ಮಾಡಿ ಕೊಟ್ಟಿದ್ದಾರೆ. ನಂತರ ಅತ್ತೆ ಸೊಸೆ ಚಿನ್ನಾಭರಣ ಬಿಚ್ಚಿಕೊಟ್ಟಿದ್ದಾರೆ. ನಂತರ ಬಿಸಿ ನೀರು ತರುವಂತೆ ಹೇಳಿದ್ದಾರೆ. ಅತ್ತೆ ಅಡುಗೆ ಮನೆಗೆ ಹೋಗಿ ಗ್ಯಾಸ್‌ಮೇಲೆ ಬಟ್ಟಲಿನಲ್ಲಿ ನೀರು ಕಾಯಿಸುತ್ತಿದ್ದಂತೆ ಅಪರಿಚಿತ ವ್ಯಕ್ತಿ ಮನೆಯೊಳಗೆ ಹೋಗಿ ನೀರಿಗೆ ಅರಿಷಿಣ ಹಾಕಿ, ಹತ್ತು ನಿಮಿಷಗಳ ನಂತರ ತೆಗೆಯಿರಿ ಎಂದೇಳಿ, ಹೊರಟು ಹೋಗಿದ್ದಾರೆ. ಹತ್ತು ನಿಮಿಷದ ನಂತರ ಸೊಸೆ ಬಟ್ಟಲು ತೆರೆದು ನೋಡಿದಾಗ ತಲಾ 5 ಗ್ರಾಂನ ಎರಡು ಉಂಗುರು, 40 ಗ್ರಾಂ ಬಳೆಗಳು, 150 ಗ್ರಾಂ ಮಂಗಳ ಸೂತ್ರ ಇಲ್ಲದ್ದನ್ನು ಕಂಡು ದಂಗಾಗಿದ್ದಾರೆ. ಕೂಡಲೇ ಗ್ರಾಮೀಣ ಠಾಣೆ ಪೊಲೀಸರ ಗಮನಕ್ಕೆ ತಂದು ದೂರು ದಾಖಲಿಸಿದ್ದಾರೆ.

    ಮನೆ ಬೀಗ ಮುರಿದು ಬಂಗಾರ ಕಳವು
    ನಗರದ ಬಸವೇಶ್ವರ ಬಡಾವಣೆಯಲ್ಲಿ ಬುಧವಾರ ಮನೆ ಬೀಗ ಮುರಿದು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 25 ಸಾವಿರ ರೂ. ಕಳ್ಳತನ ಮಾಡಲಾಗಿದೆ. ಮನೆ ಮಾಲೀಕ ಉದ್ಯಮಿ ರಘುಪ್ರಸಾದ ಕುಟುಂಬದೊಂದಿಗೆ ಮಧ್ಯಾಹ್ನ ದೇವಸ್ಥಾನಕ್ಕೆ ಹೋಗಿದ್ದಾಗ ಕಳ್ಳರು ಮನೆ ಬೀಗ ಮುರಿದು 5 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತು 25 ಸಾವಿರ ರೂ. ದೋಚಿ ಪರಾರಿಯಾಗಿದ್ದಾರೆ. ಚಿತ್ತವಾಡ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts